ಕನ್ನಡಿಗ ಕೆಎಲ್‌ ರಾಹುಲ್‌ ಹೇಳಿದ ಮಾತೇ ನನಗೆ ಸ್ಫೂರ್ತಿ ಎಂದ ಆಸ್ಟ್ರೇಲಿಯಾ ಆಟಗಾರ

ಕನ್ನಡಿಗ ಕೆ ಎಲ್‌ ರಾಹುಲ್‌ ಹೇಳಿದ ಆ ಮಾತೇ ನನಗೆ ಸ್ಫೂರ್ತಿ ಅಂತ ಆಸ್ಟ್ರೇಲಿಯಾದ ಆಟಗಾರ ಹೇಳಿದ್ದಾರೆ. ಹೌದು ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಪರ ಟಿ ನಟರಾಜನ್‌ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ರೆ ಇತ್ತ ಆಸ್ಟ್ರೇಲಿಯಾ ತಂಡದಲ್ಲಿ ಕ್ಯಾಮರೂನ್‌ ಗ್ರೀನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆರ ಮಾಡಿದ್ರು.

ಐದನೇ ಕ್ರಮಾಂಕದಲ್ಲಿ ಬಂದ ಕ್ಯಾಮರೂನ್‌ ಗ್ರೀನ್‌ ಮೊದಲ ಬಾಲ್‌ ಫೇಸ್‌ ಮಾಡಲು ಕ್ರೀಸ್‌ಗೆ ಬಂದಾಗ ಸ್ವಲ್ಪ ಸರ್ವಸ್‌ ಆಗಿದ್ರಂತೆ. ಮ್ಯಾಚ್‌ ಮುಗಿದ ನಂತರ ಮಾಧ್ಯಮಗಳ ಜೊತೆ ತಮ್ಮ ಪಾದಾರ್ಪಣೆ ಪಂದ್ಯದ ಬಗ್ಗೆ ಮಾತನಾಡಿರೋ ಗ್ರೀನ್‌, ನಾನು ಕ್ರೀಸ್‌ಗೆ ಹೋದಾಗ ತಕ್ಷಣ ವಿಕೆಟ್‌ ಹಿಂದಿ ನಿಂತಿದ್ದ ಕೆ ಎಲ್‌ ರಾಹುಲ್‌ ಮಾತನಾಡಿದ್ರು. ಈ ವೇಳೆ ರಾಹುಲ್‌ ಅವರು ನರ್ಷ್‌ ಆಗಿದ್ದೀಯಾ ಅಂತ ನನ್ನನ್ನು ಪ್ರಶ್ನೆ ಮಾಡಿದ್ರು, ಆಗ ನಾನು ಹೌದು ಸ್ವಲ್ಪ ನರ್ವಸ್‌ ಆಗಿದ್ದೇನೆ ಎಂದು ಉತ್ತರಿಸಿದೆ.

ತಕ್ಷಣ ರಾಹುಲ್‌ ಏನೂ ಆಗಲ್ಲ ಚೆನ್ನಾಗಿ ಆಡು ಯಂಗ್‌ ಸ್ಟಾರ್‌ ಎಂದು ನನ್ನ ಹುರಿದುಂಬಿಸಿದ್ರು, ಅವರು ಹೇಳಿದ ಮಾತನ್ನು ನಾನು ಯಾವತ್ತು ಮರೆಯಲ್ಲ ಎಂದು ಕ್ಯಾಮರೂನ್‌ ಗ್ರೀನ್‌ ಹೇಳಿದ್ದಾರೆ.

ಇನ್ನು ಪಾದಾರ್ಪಣೆ ಪಂದ್ಯದಲ್ಲಿ ಗ್ರೀನ್‌ 27ಬಾಲ್‌ಗಳಲ್ಲಿ 21ರನ್‌ ಸಿಡಿಸಿ ಔಟ್‌ ಆಗಿದ್ದರು. ಕ್ಯಾಮರೂನ್‌ ಗ್ರೀನ್‌ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್‌ ಆಡಿದ 230ನೇ ಆಟಗಾರ ಅಂತ ಎನಿಸಿಕೊಂಡಿದ್ದಾರೆ.

ಆರ್‌ಸಿಬಿ ಪರ ಪಾದಾರ್ಪಣೆ ಟೂರ್ನಿಯಲ್ಲಿಯೇ ಭರ್ಜರಿ ಪ್ರದರ್ಶನ ನೀಡಿದ ದೇವದತ್‌ ಪಡಿಕಲ್‌, ಇದೀಗ ದೇಸೀ ಟೂರ್ನಿಗೆ ಭರ್ಜರಿ ತಯಾರಿಯನ್ನು ನಡೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಸಿಸಿಐ ಜನವರಿಯಲ್ಲಿ ದೇಸಿ ಟೂರ್ನಿಗಳನ್ನು ಆಯೋಜಿಸಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, 60ದಿನಗಳ ಕಾಲ ಟೂರ್ನಿಯನ್ನು ನಡೆಸಲು ಚಿಂತನೆಯನ್ನು ನಡೆಸುತ್ತಿದೆ. ಕಳೆದ ಬಾರಿ ಮುಷ್ತಕ್‌ ಅಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ಗಳಿಸುವ ಮೂಲಕ ಗಮನ ಸೆಳೆದಿದ್ದ ಪಡಿಕಲ್‌ ಈ ಬಾರಿ ಅದೇ ಫಾರ್ಮ್‌ನಲ್ಲಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾ ಬಾಗಿಲು ತಟ್ಟುವ ತವಕದಲ್ಲಿದ್ದು, ಅದಕ್ಕಾಗಿ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.

ಟೀಂ ಇಂಡಿಯಾದಲ್ಲಿ ಕನ್ನಡಿಗನಿಗೆ ಅಗುತ್ತಿರೋ ಅನ್ಯಾಯಕ್ಕೆ ಇದೀಗ ಕನ್ನಡಿಗ ಮಾಜಿ ಕ್ರಿಕೆಟರ್‌ ದೊಡ್ಡ ಗಣೇಶ್‌ ಕಿಡಿಕಾರಿದ್ದಾರೆ. ಹೌದು ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿ 11 ಬಳಗದಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸುತ್ತಿರೋ ಮನಿಷ್‌ ಪಾಂಡೆ ಪರವಾಗಿ ಮಾತನಾಡಿ ದೊಡ್ಡ ಗಣೇಶ್‌ ಕಿಡಿಕಾರೀದ್ದಾರೆ. ಮನೀಷ್‌ ಪಾಂಡೆ ಕಳೆದ 2 ವರ್ಷಗಳಿಂದ ಟೀಂ ಇಂಡಿಯಾಗೆ ಸೆಲೆಕ್ಟ್‌ ಆದರೂ ಅವರು ಆಡಿದ್ದು ಮಾತ್ರ ಕೇವಲ 3 ಪಂದ್ಯಗಳನ್ನು ಮನೀಷ್‌ ಪಾಂಡೆ ತಮ್ಮ ನಿವೃತ್ತಿ ವೇಳೆಗೆ ಅತಿಹೆಚ್ಚು ಮ್ಯಾಚ್‌ಗಳಲ್ಲಿ ಬೆಂಚ್‌ ಕಾದ ಆಟಗಾರ ಅನ್ನೋ ವಿಶ್ವ ದಾಖಲೆ ಬರೆಯುವ ಸಾಧ್ಯತೆ ಇದೆ ಎಂದು 11 ಬಳಗದಲ್ಲಿ ಮನೀಷ್‌ ಪಾಂಡೆಗೆ ಅವಕಾಶ ನೀಡದೇ ಇರೋ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಮನೀಷ್‌ ಪಾಂಡೆ ಟೀಂ ಇಂಡಿಯಾಗೆ ಸೆಲೆಕ್ಟ್‌ ಆದ್ರು 11 ಬಳಗದಲ್ಲಿ ಆಡಲು ಅವಕಾಶ ಸಿಗದೇ ಪಾಂಡೆಗೆ ಅನ್ಯಾಯವಾಗುತ್ತಿದೆ ಅಂತ ಅನಿಸುತ್ತಿದೆ ದೊಡ್ಡ ಗಣೇಶ್‌ ಹೇಳಿದ ಮಾತಿಗೆ ನಿಮ್ಮ ಸಹಮತ ಇದ್ಯಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top