ಕನ್ನಡಿಗರ ಆಟಕ್ಕೆ ಮನಸೋತ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ

ಈ ಬಾರಿಯ ಐಪಿಎಲ್‍ನಲ್ಲಿ ಕನ್ನಡಿಗರು ಕಮಾಲ್ ಮಾಡಿದ್ದು, ಪ್ರತಿ ತಂಡದಲ್ಲೂ ತಮ್ಮ ಉತ್ತಮ ಪ್ರದರ್ಶನದ ಮೂಲಕ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರವನ್ನು ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಕನ್ನಡಿಗರ ಆಟವನ್ನು ಮನಸಾರೆ ಕ್ರಿಕೆಟ್ ದಿಗ್ಗಜರು ಹೊಗಳಿದ್ದು, ಈ ಬಾರಿಯ ಐಪಿಎಲ್‍ನಲ್ಲಿ ಕನ್ನಡಿಗರ ಆಟ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಕೆಎಲ್ ರಾಹುಲ್ ಮತ್ತು ಪಾದಾರ್ಪಣೆ ಐಪಿಎಲ್ ಟೂರ್ನಿಯಲ್ಲೇ ಉತ್ತಮ ಪದರ್ಶನ ನೀಡಿರೋ ದೇವದತ್ ಪಡಿಕಲ್ ಬಗ್ಗೆ ಕ್ರಿಕೆಟ್ ದಿಗ್ಗಜರು ಕೆಲವೊಂದು ಟಿಪ್ಸ್ ಜೊತೆಯಲ್ಲಿ ಅವರ ಆಟವನ್ನು ಹೊಗಳಿದ್ದು, ಇದೀಗ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಈ ಇಬ್ಬರ ಆಟಗಾರರ ಬಗ್ಗೆ ಮನಸಾರೆ ಹೊಗಳಿದ್ದಾರೆ.

ಹೌದು ಹಿಂದೂಸ್ತಾನ್ ಟೈಮ್ಸ್‍ಗೆ ಸಂದರ್ಶನ ನೀಡುವ ವೇಳೆ ಈ ಬಾರಿಯ ಐಪಿಎಲ್‍ನಲ್ಲಿ ಬ್ರಿಯಾನ್ ಲಾರಾ 6 ಜನ ಭಾರತೀಯ ಆಟಗಾರರನ್ನು ಐಪಿಎಲ್‍ನಲ್ಲಿ ಗುರುತಿಸಿದ್ದು, ಕೆ.ಎಲ್ ರಾಹುಲ್ ಮತ್ತು ದೇವದತ್ ಪಡಿಕಲ್ ಆಟವನ್ನು ಮನಸಾರೆ ಹೊಗಳಿದ್ದಾರೆ. ದೇವದತ್ ಪಡಿಕಲ್ ಬಳಿ ಸಾಕಷ್ಟು ಸಾಮಥ್ರ್ಯವಿದೆ. ಆದರೆ ಪಡಿಕಲ್ ಕೆಲವೊಂದು ವಿಷಯದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು ನಾನು ಬಯಸುತ್ತೇನೆ. ಆತನನ್ನು ನಾನು ಕೇವಲ ಟಿ 20 ಬ್ಯಾಟ್ಸ್‍ಮನ್ ಆಗಿ ನೋಡಲು ನಾನು ಬಯಸುವುದಿಲ್ಲ, ಆತನನ್ನು ನಾನು ಟೆಸ್ಟ್ ಕ್ರಿಕೆಟ್ ಆಗಿ ನೋಡಲು ಇಷ್ಟ ಪಡುತ್ತೇನೆ. ಆತ ಟೆಸ್ಟ್ ಕ್ರಿಕೆಟ್‍ನಲ್ಲಿ ಹೆಚ್ಚುಕಾಲ ಉಳಿದುಕೊಳ್ಳ ಬೇಕಾದ್ರೆ ಆತ ತಾಂತ್ರಿಕವಾಗಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ ಎಂದು ಲಾರಾ ದೇವದತ್ ಪಡಿಕಲ್ ಆಟವನ್ನು ಹೊಗಳುವ ಜೊತೆಯಲ್ಲಿ ಸಲಹೆಯನ್ನು ನೀಡಿದ್ದಾರೆ.

ಇನ್ನು ಪಡಿಕಲ್ ಜೊತೆಯಲ್ಲಿ ಕೆ.ಎಲ್ ರಾಹುಲ್ ವಿಚಾರವಾಗಿ ಮಾತನಾಡಿದ್ದು ರಾಹುಲ್ ಒಬ್ಬ ಅಧ್ಭುತ ಆಟಗಾರ ಯಾವಾಗಲೂ ನಾನು ಹೇಳುತ್ತೇನೆ ಆತನ ಬಗ್ಗೆ ಹೆಚ್ಚು ಹೇಳಲು ಆಗುವುದಿಲ್ಲ ಅಂತ ಹೇಳಿದ್ದಾರೆ. ಇನ್ನು ಕೆಎಲ್ ರಾಹುಲ್ ಕೀಪಿಂಗ್‍ಗಿಂತ ಬ್ಯಾಟಿಂಗ್ ಕಡೆ ಹೆಚ್ಚು ಗಮನ ಕೊಡಲಿ ಅಂತ ಈ ಹಿಂದೆಯೂ ಸಂದರ್ಶನ ಒಂದರಲ್ಲಿ ಲಾರಾ ಕೆ ಎಲ್ ರಾಹುಲ್‍ಗೆ ಸಲಹೆಯನ್ನು ನೀಡಿದ್ರು.

ಇನ್ನು ಈ ಇಬ್ಬರು ಆಟಗಾರರ ಜೊತೆಯಲ್ಲಿ ಸಂಜು ಸ್ಯಾಮ್‍ಸನ್,ಸೂರ್ಯಕುಮಾರ್ ಯಾದವ್,ಪ್ರಿಯಮ್ ಗರ್ಗ್, ಅಬ್ದುಲ್ ಸಮದ್ ಈ ಬಾರಿಯ ಐಪಿಎಲ್‍ನಲ್ಲಿ ನನ್ನ ನೆಚ್ಚಿನ ಯುವ ಆಟಗಾರರು ಅನ್ನೋ ಮೂಲಕ ಇವರ ಆಟವನ್ನು ಮನಸಾರೆ ಹೊಗಳಿದ್ದಾರೆ.

ಲಾರಾ ಹೇಳಿದ ರೀತಿ ರಾಹುಲ್ ಮತ್ತು ಪಡಿಕಲ್ ಆಟದ ಬಗ್ಗೆ ನಿಮ್ಮ ಅಭಿಪ್ರಾಯವೇನು, ನಿಮ್ಮ ಪ್ರಕಾರ ಈ ಬಾರಿಯ ಐಪಿಎಲ್‍ನಲ್ಲಿ ಬೆಸ್ಟ್ ಯುವ ಪ್ರತಿಭೆಗಳು ಯಾರು ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top