ಕನ್ನಡದಲ್ಲಿ ಶುರುವಾಗ್ತಾ ಬಿಗ್‍ಬಾಸ್ ಸೀಸನ್ 8

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್ಕನ್ನಡ,ಸದ್ಯ 7 ಸೀಸಿನ್ಮುಗಿಸಿರೋ ಕಾರ್ಯಕ್ರಮ ಎಲ್ಲವೂ ಸರಿ ಇದ್ದಿದ್ರೆ ಈಗಾಗಲೆ ಸೀಸನ್‌ 8ನ್ನು ಆರಂಭ ಮಾಡಬೇಕಾಗಿತ್ತು, ಆದ್ರೆ ಕೊರೊನಾ ಎಫೆಕ್ಟ್ನಿಂದಾಗಿ  ಅದು ಸಾಧ್ಯವಾಗಿಲ್ಲ, ಇನ್ನು ಲಾಕ್ಡೌನ್ನಂತರ ತೆಲುಗು ಮತ್ತ ಹಿಂದಿಯಲ್ಲಿ ಬಿಗ್ಬಾಸ್ಶೋ ಶುರುವಾಗಿದ್ದು, ಕನ್ನಡದಲ್ಲಿ ಯಾವಾಗ ಶುರುವಾಗಲಿದೆ ಅನ್ನೋ ಪ್ರಶ್ನೆಯನ್ನು ಬಿಗ್ಬಾಸ್ಶೋ ಪ್ರಿಯರು ಕೇಳುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶೋ ಶುರುವಾಗಿ ಒಂದು ತಿಂಗಳು ಕಳೆಯಬೇಕಾಗಿತ್ತು, ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಬಿಗ್ಬಾಸ್ಕನ್ನಡ ಸೀಸನ್‌ 8 ಸದ್ಯದರಲ್ಲಿಯೇ ಆರಂಭವಾಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಹೌದು ಬಿಗ್ಬಾಸ್ಶೋ ನಡೆಯುವ ಇನೋವೇಟಿವ್ಫಿಲ್ಮ್ಸಿಟಿಯಲ್ಲಿ ಬಿಗ್ಬಾಸ್ಮನೆಯ ರಿಪೇರಿ ಕಾರ್ಯ ಶುರುವಾಗಿದೆ. ಇನ್ನು ಶೋಗೆ ಬೇಕಾಗುವ ರೀತಿಯಲ್ಲಿ ಮನೆಯಲ್ಲಿ ಸಿದ್ಧ ಮಾಡಲಾಗುತ್ತಿದೆಯಂತೆ. ಇನ್ನು ಬಾರಿಯ ಸ್ಪರ್ಧಿಗಳಿಗೆ ಹೊಸ ಥೀಮ್ನೊಂದಿಗೆ ಮನೆಗೆ ಎಂಟ್ರಿಕೊಡಿಸುವ ನಿಟ್ಟಿಯಲ್ಲಿ ಮನೆಯಲ್ಲಿ ಸಿದ್ದಮಾಡಲಾಗುತ್ತಿದೆಯಂತೆ.

ಇನ್ನು ಒಂದು ತಿಂಗಳಲ್ಲಿ ಬಿಗ್ಬಾಸ್ಮನೆಯ ಸಿದ್ಧತೆಯ ಕಾರ್ಯಗಳು ಮುಗಿಯಲಿದ್ದು, ನಂತರವಷ್ಟೇ ಬಿಗ್ಬಾಸ್ಕಾರ್ಯಕ್ರಮದ ಅಧಿಕೃತ ಮಾಹಿತಿ ಹೊರಬೀಳಲಿದೆ. ಮೂಲಕಗಳ ಪ್ರಕಾರ ಬಿಗ್ಬಾಸ್ಕನ್ನಡ ಸೀಸನ್‌ 8 2021 ಪ್ರಾರಂಭದಲ್ಲಿ ಆರಂಭವಾಗಲಿದೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಇನ್ನು ಇದರ ವಿಚಾರವಾಗಿ ಕಲ್ಲರ್ಸ್ಕನ್ನಡ ವಾಹಿನಿ ಕಡೆಯಿಂದ ಮಾಹಿತಿ ಬರಬೇಕಾಗಿದೆಯಷ್ಟೇ, ಇನ್ನು ಬಿಗ್ಬಾಸ್ಮನೆಯಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳು ಹೋಗಬೇಕು, ಮತ್ತು ಬಾರಿ ಕಾಮನ್ಮನ್ಗೂ ಅವಕಾಶ ಕೊಡಬೇಕಾ ಅನ್ನೋ ಕಾರ್ಯದಲ್ಲಿ ಬಿಗ್ಬಾಸ್ತಂಡತೊಡಗಿಕೊಂಡಿದ್ದು, ಸದ್ಯ ಸೆಲೆಬ್ರಿಟಿಗಳ ಅಪ್ರೊಚ್ಮಾಡಲಾಗುತ್ತಿದೆ.

ಇನ್ನು ಬಾರಿಯು ಕೂಡ ಎಂದಿನಂತೆ ಬಿಗ್ಬಾಸ್ಸೀಸನ್‌ 8ನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ಅವರೇ ನಡೆಸಿಕೊಡಲಿದ್ದಾರೆ.

ಹಾಗಾದ್ರೆ  ಈ ಬಾರಿಯ ಬಿಗ್‌ಬಾಸ್‌ನಲ್ಲಿ ನೀವೂ ಮನೆಯೊಳಗೆ ಯಾವ ಸ್ಟಾರ್‌ಗಳನ್ನ ನೋಡಲು ಇಷ್ಟ ಪಡುತ್ತೀರಾ ಕಾಮೆಂಟ್‌ ಮಾಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top