ಕನ್ಕಶನ್ ಸಬ್ಸಿಟಿಟ್ಯೂಟ್ ಅಂದ್ರೆ ಏನು..? ಕ್ರಿಕೆಟ್‍ನಲ್ಲಿ ಏನಿದು ಹೊಸ ನಿಯಮ

ಭಾರತ ಆಸ್ಟ್ರೇಲಿಯಾ ನಡುವಿನ ಮೊದಲ ಟಿ 20 ಪಂದ್ಯದಲ್ಲಿ ಭಾರತ 11 ರನ್‍ಗಳ ಜಯ ಸಾಧಿಸೋ ಮೂಲಕ ಟಿ 20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ ರಾಹುಲ್ ಮತ್ತು ಜಡೇಜಾ ಅವರ ಅಮೋಘ ಪ್ರದರ್ಶನದಿಂದಾಗಿ 161ರನ್‍ಗಳನ್ನು ಕಲೆ ಹಾಕುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 162ರನ್‍ಗಳ ಗುರಿಯನ್ನು ನೀಡಿತ್ತು, ಇನ್ನು ಆಸ್ಟ್ರೇಲಿಯಾ 11ರನ್‍ಗಳ ಸೋಲನ್ನು ಅನುಭವಿಸಿತು. ಆದ್ರೆ ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ವಿವಾದವೊಂದು ಹುಟ್ಟಿಕೊಂಡಿದೆ.

ಹೌದು ತಂಡದಲ್ಲಿ ಸ್ಥಾನ ಪಡೆಯದ ಯೆಜುವೇಂದ್ರ ಚಹಲ್ ಟೀಂ ಇಂಡಿಯಾ ಬೌಲಿಂಗ್ ಮಾಡುವ ವೇಳೆ ಬೌಲಿಂಗ್ ಮಾಡಿದ್ದು ಹೇಗೆ ಅನ್ನೋ ಅನುಮಾನ ಇದೀಗ ಕ್ರಿಕೆಟ್ ಪ್ರಿಯರಲ್ಲಿ ಶುರುವಾಗಿದೆ. ಐಸಿಸಿ ಹೊಸ ನಿಯಮದ ಪ್ರಕಾರ ತಂಡದಲ್ಲಿ ಯಾರಿಗಾದರೂ ಆಟದ ವೇಳೆ ಗಾಯದ ಸಮಸ್ಯೆ ಉಂಟಾದಾಗ ಬದಲಿ ಆಟಗಾರರನ್ನು ಆಡುವ ಅವಕಾಶವಿದ್ದು, ಇದೀಗ ಟೀಂ ಇಂಡಿಯಾ ಈ ಅವಕಾಶವನ್ನು ಉಪಯೋಗಿಸಿಕೊಂಡಿದೆ.ಹೌದು ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವ ವೇಳೆ ಕೊನೆಯ ಓವರ್‍ನಲ್ಲಿ ಸ್ಟಾರ್ಕ್ ಮಾಡಿದ ಬಾಲ್ ಜಡೇಜಾ ಅವರ ತಲೆಗೆ ಬಡಿದು ಜಡೇಜಾ ಗಾಯಗೊಂಡಿದ್ರು, ಈ ವೇಳೆ ಐಸಿಸಿ ನಿಯಮದ ಪ್ರಕಾರ ಕನ್ಕಶನ್ ಸಬ್ಸಟಿಟ್ಯೂಟ್ ನಿಯಮದ ಪ್ರಕಾರ ಜಡೇಜಾ ಬದಲಿಗೆ ಚಾಹಲ್ ಅವರನ್ನು ಮೈದಾನಕ್ಕೆ ಇಳಿಸಲಾಯ್ತು.

ಆದ್ರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ದೊಡ್ಡ ಚರ್ಚೆ ಶುರುವಾಗಿದ್ದು, ಈ ವಿಚಾರವಾಗಿ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಅಪಸ್ವರ ಎತ್ತಿದ್ದಾರೆ.

ಈ ಕನ್ಕಶನ್ ಸಬ್ಸಟಿಟ್ಯೂಟ್ ನಿಯಮ ಏನಿದೂ ಹೇಗಿರಲಿದೆ ಈ ನಿಯಮ ಅನ್ನೋದನ್ನ ನೋಡೋದಾದ್ರೆ.

ಕನ್ಕಶನ್ ಸಬ್ಸಟಿಟ್ಯೂಟ್ ನಿಯಮದ ಪ್ರಕಾರ ತಂಡದಲ್ಲಿ ಆಟಗಾರ ಗಾಯವಾದಾಗ ಬದಲಿ ಆಟಗಾರರನ್ನು ಆಡಿಸುವ ವೇಳೆ ಅಂದರೆ ಬ್ಯಾಟ್ಸಮನ್ ಔಟ್ ಗಾಯವಾಗಿದ್ದಾರೆ. ಆತನ ಜಾಗಕ್ಕೆ ಇನ್ನೊಬ್ಬ ಬ್ಯಾಟ್ಸಮನ್ ಆಡಿಸುವ ಅವಕಾಶ ವಿರುತ್ತದೆ. ಉದಾಹರಣೆಗೆ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಗಾಯವಾಗಿದ್ದರೆ ಅವರ ಜಾಗಕ್ಕೆ ಶ್ರೇಯಸ್ಸ್ ಅಯ್ಯರ್ ಅವರನ್ನು ಆಡಿಸಬಹುದು ಆದ್ರೆ ಶ್ರೇಯಸ್ಸ್ ಅಯ್ಯರ್‍ಗೆ ಬೌಲಿಂಗ್ ಮಾಡದೇ ಇರಲು ಮ್ಯಾಚ್ ರೆಫರಿ ತಡೆಯ ಬಹುದು. ಆದ್ರೆ ಇಂದಿನ ಪಂದ್ಯದಲ್ಲಿ ಇದೀಗ ಜಡೇಜಾ ಆಲ್‍ರೌಂಡರ್ ಆಗಿದ್ದು, ಆ ಜಾಗಕ್ಕೆ ಜಾಹಲ್ ಅವರನ್ನು ಆಡಿಸಿದ್ದು ಯಾಕೆ ಅನ್ನೋ ಪ್ರಶ್ನೆ ಉದ್ಭವವಾಗಿದ್ದು, ಐಸಿಸಿ ನಿಯಮದ ಪ್ರಕಾರ ಗಾಯಗೊಂಡಾಗ ಆತನ ಬದಲಿ ಅದೇ ಸ್ಪೆಷಲಿಸ್ಟ್ ಆಟಗಾರರನ್ನು ಆಡಿಸುವ ನಿಯಮವಿದೆ.

ಆದ್ರೆ ಇಂದಿನ ಪಂದ್ಯದಲ್ಲಿ ಆಲ್‍ರೌಂಡರ್ ಜಡೇಜಾ ಗಾಯಗೊಂಡಾಗ ಚಾಹಲ್ ಅವರನ್ನು ಆಡಿಸಿದ್ದು ಏಕೆ ಅನ್ನೋ ವಿಚಾರ ಬಗ್ಗೆ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು. ಆಸ್ಟ್ರೇಲಿಯಾ ಮತ್ತು ಭಾರತದ ಪಂದ್ಯದಲ್ಲಿ ಚಾಹಲ್ ಅವರನ್ನು ಅಡಿಸಿರೋ ಬಗ್ಗೆ ಪ್ರಶ್ನೆ ಉದ್ಭವಾಗಿದ್ದು, ಇದಕ್ಕೆ ಉತ್ತರ ಇಲ್ಲಿದ್ದು ಮ್ಯಾಚ್ ರೆಫರಿ ಪ್ರಕಾರ ರವೀಂದ್ರ ಜಡೇಜಾ ಕೂಡ ಒಬ್ಬ ಸ್ಪಿನ್ ಬೌಲರ್ ಆಗಿದ್ದು ಚಾಹಲ್ ಕೂಡ ಸ್ಪಿನ್ ಬೌಲರ್ ಆಗಿರೋದ್ರಿಂದ ಬೌಲಿಂಗ್ ಮಾಡದಂತೆ ಮ್ಯಾಚ್ ರೆಫರಿಯಾಗಿದ್ದ ಬೂನ್ ತಡೆಯಲಿಲ್ಲ ಹೀಗಾಗಿ ಇಂದಿನ ಪಂದ್ಯದಲ್ಲಿ ಜಡೇಜಾ ಬದಲಿಗೆ ಚಾಹಲ್ ಬೌಲಿಂಗ್ ಮಾಡಿರೋದ್ರಲ್ಲಿ ಯಾವುದೇ ಗೊಂದಲವಿಲ್ಲ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ.

ಈ ಹಿಂದೆ 2019ರಲ್ಲಿ ಟೆಸ್ಟ್ ಸರಣಿವೇಳೆ ಜೋಫ್ರಾ ಆರ್ಚರ್ ಎಸೆತದಲ್ಲಿ ಸ್ಮಿತ್ ಗಾಯಗೊಂಡ ವೇಳೆ ಸ್ಮಿತ್ ಬದಲಿಗೆ ಮಾರ್ನಸ್ ಲ್ಯಾಬುಶೇನ್ ಅವರು ಕಣಕ್ಕೆ ಇಳಿದಿದ್ದು ಮೊದಲ ಉದಾಹರಣೆಯಾಗಿದ್ದು, ಇಂದಿನ ಪಂದ್ಯ ಎರಡನೇ ಉದಾಹರಣೆಯಾಗಿದೆ.

ಅದೇನೇ ಇದ್ರು.. ಬ್ಯಾಟಿಂಗ್ ವೇಳೆ ಟೀಂ ಇಂಡಿಯಾದ ಆಟಗಾರ ಜಡೇಜಾ ಅಬ್ಬರಿಸಿ ಗಾಯಾಳುವಾಗಿ ಪಂದ್ಯದಿಂದ ಹೊರಗುಳಿದ್ರೆ ಇತ್ತ ಜಡೇಜಾ ಬದಲಿಗೆ ಕಣಕ್ಕಿಳಿದ ಚಾಹಲ್ ತಮ್ಮ ಬೌಲಿಂಗ್ ಮೂಲಕ ಕಮಾಲ್ ಮಾಡಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ರು ಅಂತಾನೇ ಹೇಳಬಹುದು.

ಸದ್ಯ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪರವಿರೋಧಗಳು ಶುರುವಾಗಿದ್ದು, ನಿಮ್ಮ ಪ್ರಕಾರ ಇಂದಿನ ಪಂದ್ಯದಲ್ಲಿ ಭಾರತೀಯ ಆಟಗಾರರ ಪ್ರದರ್ಶನದ ಬಗ್ಗೆ ನಿಮ್ಮ ಅನಿಸಿಕೆ ಏನು, ಕನ್ಕಶನ್ ಸಬ್ಸಟಿಟ್ಯೂಟ್ ನಿಯಮದ ವಿಚಾರವಾಗಿ ನಿಮ್ಮ ಕಾಮೆಂಟ್ ಏನು ನಮಗೆ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top