
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಯಾರಾದರೂ ಕಷ್ಟದಲ್ಲಿ ಇದ್ದಾರೆ ಎಂದರೆ ಅಲ್ಲಿ ಸಹಾಯಕ್ಕೆ ನಿಲ್ಲುವ ಮನಸ್ಸು ಇರೋ ವ್ಯಕ್ತಿ,ಲಾಕ್ ಡೌನ್ ಟೈಂನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಅನೇಕರಿಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ನೆರವಾಗಿದ್ದರು, ಕಿಚ್ಚ ಸುದೀಪ್ ಮತ್ತೆ ಸಂಕಷ್ಟದಲ್ಲಿ ಇರೋರ ನೆರವಿಗೆ ಬಂದು ಮನಗೆದ್ದಿದ್ದಾರೆ. ಶಿಕ್ಷಕಿಯೊಬ್ಬರಿಗೆ ನೆರವಾಗುವ ಮೂಲಕ ಕಿಚ್ಚ ಸುದೀಪ್ ಆ ಶಿಕ್ಷಕಿಯ ಬಾಳಲ್ಲಿ ಬೆಳಕು ತಂದಿದ್ದಾರೆ.
ತುರುವೇಕರೆ ತಾಲೂಕಿನ ನೇತ್ರಾವತಿ ಎಂಬುವವರು ಶಿಕ್ಷಕಿಯಾಗಿದ್ದು, ಕೊರೋನಾ ಎಫೆಕ್ಟ್ನಿಂದಾಗಿ ಕೆಲಸವನ್ನು ಕಳೆದುಕೊಂಡಿದ್ದರು. ಜೀವನ ಸಾಗಿಸುವ ಸಲುವಾಗಿ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡಿದ್ದರು. ಇತ್ತಿಚೆಗೆ ಕಟ್ಟಿಗೆ ಕಡಿಯುವ ಕೆಲಸಕ್ಕೆ ಸೇರಿದ್ದ ನೇತ್ರಾವತಿಗೆ ಅಲ್ಲು ಸಂಕಷ್ಟ ಎದುರಾಗಿತ್ತು, ಕಟ್ಟಿಗೆ ಕಡಿಯುವ ವೇಳೆ ಕಟ್ಟಿಗೆ ಚೂರು ಕಣ್ಣಿಗೆ ಬಡಿದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಕಿಚ್ಚ ಸುದೀಪ್ ಖುದ್ದಾಗಿ ನೆರವಿಗೆ ಬಂದಿದ್ದು, ವೈದ್ಯರ ಬಳಿ ಮಾತಾಡಿ ಮೂರು ದಿನಗಳ ಹಿಂದೆ ಕಣ್ಣಿನ ಆಪರೇಷನ್ ಮಾಡಿಸಿದ್ದಾರೆ. ಇನ್ನು ನೇತ್ರಾವತಿಗೆ ʻಒಬ್ಬ ಅಣ್ಣನಾಗಿ ನಿನ್ನ ಮುಂದಿನ ಬದುಕನ್ನ ರೂಪಿಸಿ ಕೊಡುತ್ತೇನೆʼ ಎಂದು ಸುದೀಪ್ ಅವರು ನೇತ್ರಾವತಿಗೆ ಭರವಸೆ ನೀಡಿದ್ದಾರೆ. ಮೋದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಸದ್ಯ ಹೈದರಬಾದ್ನಲ್ಲಿ ಶೂಟಿಂಗ್ನಲ್ಲಿ ಕಿಚ್ಚ ಸುದೀಪ್ ಆಪರೇಷನ್ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.