ಔಟ್‌ ಕೊಟ್ಟು ನಾಟ್‌ ಔಟ್‌ ಅಂದಿದ್ದಕ್ಕೆ ಗರಂ ಆದ ಧೋನಿ ಪತ್ನಿ..

ನಿನ್ನೆ ನಡೆದ ಚೆನ್ನೈ ಮತ್ತು ರಾಜಸ್ಥಾನ್‌ ನಡುವಿನ ಪಂದ್ಯದಲ್ಲಿ ಚೆನ್ನೈ ವಿರುದ್ಧ ರಾಜಸ್ಥಾನ್‌ ಭರ್ಜರಿ ಮೊತ್ತವನ್ನು ಪೇರಿಸಿ ದೊಡ್ಡ ಜಯವನ್ನು ಸಹ ಗಳಿಸಿತು, ಆದ್ರೆ ರಾಜಸ್ಥಾನ್‌ ರಾಯಲ್ಸ್‌ ಬ್ಯಾಟಿಂಗ್‌ ಮಾಡುವ ವೇಳೆ 18ನೇ ಓವರ್‌ನಲ್ಲಿ ಟಾಮ್‌ಕರನ್‌ ಅವರ ಕ್ಯಾಚ್‌ ಇದೀಗ ಚರ್ಚೆಗೆ ಗ್ರಾಸವಾಗಿದೆ. 18ನೇ ಓವರ್‌ನಲ್ಲಿ ದೀಪಕ್‌ ಚಹರ್‌ ಎಸೆದ ಎಸೆತವನ್ನು ಎದುರಿಸಿದ ಟಾಮ್‌ ಕರನ್‌ ಬ್ಯಾಟ್‌ಗೆ ತಗುಲಿದ ಬಾಲ್‌ ನೇರ ಧೋನಿ ಕೈ ಸೇರಿತ್ತು, ಇನ್ನು ಕ್ಯಾಚ್‌ ಹಿಡಿದ ಧೋನಿ ಅಂಪೈರ್‌ಗೆ ಮನವಿಯನ್ನು ಮಾಡಿದ್ರು, ಅಂಪೈರ್‌ ಔಟ್‌ ಕೂಡ ನೀಡಿದ್ರು.

ಆದ್ರೆ ಈ ತೀರ್ಪುನ ಬಗ್ಗೆ ಮರು ಪರಿಶೀಲಿಸುವಂತೆ ಟಾಮ್‌ ಕರನ್‌ ಅಂಪೈರ್‌ಗೆ ಮನವಿಯನ್ನು ಮಾಡಿಕೊಂಡಿದ್ರು, ಆದ್ರೆ ರಾಜಸ್ತಾನ್‌ ಬಳಿ ಡಿಆರ್‌ಎಸ್‌ ಅವಕಾಶ ಇಲ್ಲದೇ ಇದ್ದುದ್ದರಿಂದ ಅಂಪೈರ್‌ ಕರನ್‌ಗೆ ಹೋಗಲು ಹೇಳಿದ್ರು, ಆದ್ರೆ ತಕ್ಷಣ ತೀರ್ಪನ್ನು ಮರುಪರಿಶೀಲನೆ ಮಾಡಲು ನಿರ್ಧಸಿದ್ದ ಅಂಪೈರ್‌ ,ಕ್ಯಾಚ್‌ ಬಗ್ಗೆ ಮೂರನೇ ಅಂಪೈರ್‌ ಸಹಾರ ಕೇಳಿದ್ರು, ಈ ವೇಳೆ ರಿಪ್ಲೈನಲ್ಲಿ ಕ್ಯಾಚ್‌ ತೆಗೆದುಕೊಳ್ಲೂವ ಮುನ್ನ ಬಾಲ್‌ ನೆಲಕ್ಕೆ ಬಿದ್ದಿದ್ದು ಸ್ಪಷ್ಟವಾಗಿತ್ತು. ಇದರಿಂದಾಗಿ ತೀರ್ಪನ್ನು ಬದಲಿಸಿ ಟಾಮ್‌ ಕರ್ರನ್‌ಗೆ ಬ್ಯಾಟಿಂಗ್‌ ಮಾಡಲು ಅನುವು ಮಾಡಿಕೊಡಲಾಯಿತು.

ಆದ್ರೆ ನಿಯಮಗಳ ಪ್ರಕಾರ ಆನ್‌ಫಿಲ್ಡ್‌ ಅಂಪೈರ್‌ ತಮ್ಮ ನಿರ್ಧಾರವನ್ನು ಪ್ರಕಟಿಸುವ ಮುನ್ನ ತೀರ್ಮಾನದ ಬಗ್ಗೆ ಅನುಮಾನ ಬಂದಲ್ಲಿ 3ನೇ ಅಂಪೈರ್‌ ಸಹಾಯ ಪಡೆಯಬೇಕು . ಆದ್ರೆ ತೀರ್ಪು ನೀಡಿದ ಬಳಿಕ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಧೋನಿ ಮತ್ತು ಆಟಗಾರರು ಅಂಪೈರ್‌ ಜೊತೆ ವಾದವಾಗಿತ್ತು.

ಇನ್ನು ಧೋನಿ ಈ ನಿರ್ಧಾರದ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ರು. ಈ ವಿಚಾರವಾಗಿ ಇದೀಗ ಧೋನಿ ಪತ್ನಿ ಸಾಕ್ಷಿ ಧೋನಿ ಕೂಡ ತಮ್ಮ ಅಸಮಾಧಾನವನ್ನು ಹೊರಹಾಕಿ ಟ್ವೀಟ್‌ ಕೂಡ ಮಾಡಿದ್ರು. ನೀವು ತಂತ್ರಜ್ಞಾನ ಬಳಸುತ್ತಿದ್ದರೆ. ಅದನ್ನು ಸರಿಯಾರಿ ರೀತಿಯಲ್ಲಿ ಬಳಸಿ, ಔಟ್‌ ಎಂದ್ರೆ ಔಟ್‌ ಅಷ್ಟೇ, ಅದು ಕ್ಯಾಚ್‌ ಆದ್ರೂ ಎಲ್‌ಬಿ ಆದ್ರೂ ಎಂದು ಟ್ವೀಟ್‌ ಮಾಡಿದ್ರು. ಆದ್ರೆ ಸಾಕ್ಷಿ ಧೋನಿ ಟೀಟ್‌ ಮಾಡಿದ ಕೆಲವ ನಿಮಿಷದಲ್ಲಿ ಮತ್ತೆ ಆ ಟ್ವೀಟ್‌ ಅನ್ನು ಡಿಲೀಟ್‌ ಕೂಡ ಮಾಡಿದ್ರು. ಆದ್ರೆ ಆ ಟ್ವೀನ್‌ ಇಟ್ಟುಕೊಂಡು ಕೆಲವ್ರು ಸಾಕ್ಷಿ ಧೋನಿಯ ಕಾಲನ್ನು ಸೋಶಿಯಲ್ಲಿ ಮೀಡಿಯಾದಲ್ಲಿ ಎಳೆಯುತ್ತಿದ್ದರೆ. ಇನ್ನು ಕೆಲವ್ರು ಸಾಕ್ಷಿಯ ಪರವಾಗಿ ವಾದ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top