ಒಬ್ಬನೇ ಇಬ್ಬರ ಜೊತೆ ಲವ್ವಿಡವ್ವಿ ಒಂದೇ ದಿನ ಇಬ್ಬರನ್ನು ಮದುವೆಯಾದ ಲಕ್ಕಿ ಬಾಯ್

ಒಬ್ಬ ವ್ಯಕ್ತಿ ಇಬ್ಬರನ್ನು ಪ್ರೀತಿಸಿ ಒಂದೇ ದಿನ ಒಂದೇ ಮಂಟಪದಲ್ಲಿ ಮದುವೆಯಾಗಿರೋ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.ಚಂದು ಮೌರ್ಯ ಅನ್ನೋ 21ವರ್ಷದ ಯುವಕ ಮದುವೆಯಾಗಿದ್ದು,ಈತ ಒಂದೇ ವೇಳೆ ಇಬ್ಬರ ಜೊತೆ ಲವ್ ನಲ್ಲಿ ಇದ್ದ, ಸುಂದರಿ‌ ಮತ್ತು ಹಸೀನಾ ಎಂಬ ಇಬ್ಬರು ಯುವತಿಯರ ಜೊತೆ ಲವ್ ಮಾಡುತ್ತಿದ್ದ,ಮೊದಲು ಸುಂದರಿ ಜೊತೆ ಲವ್ ನಲ್ಲಿ ಇದ್ದ ಚಂದು ಒಂದು ದಿನ ಸಂಬಂಧಿಕರ ಮದುವೆಗೆ ಹೋದ ವೇಳೆ ಹಸೀನಾ ಎಂಬ ಹುಡುಗಿಯ ಪರಿಚಯವಾಗಿದೆ. ನಂತರ ಪರಿಚಯ ಪ್ರೀತಿಗೆ ತಿರುಗಿದೆ. ಇನ್ನು ಚಂದು ಸುಂದರಿ ಜೊತೆ ಪ್ರೀತಿಯಲ್ಲಿ ಇರೋ ವಿಷಯ ತಿಳಿದಿದ್ದರು ಹಸೀನಾ ತನ್ನನ್ನು ಪ್ರೀತಿಸುವಂತೆ ಹೇಳಿದ್ದಾಳೆ. ಇಬ್ಬರ ಜೊತೆ ಲವ್ ನಲ್ಲಿ ಇದ್ದ ಚಂದು ಜೊತೆ ವಾಸಿಸಲು ಸುಂದರಿ ಮನೆ ಬಂದಿದ್ದಾಳೆ ವಿಷಯ ತಿಳಿಯುತ್ತಿದ್ದಂತೆ ಹಸೀನಾ ಕೂಡ ಚಂದು ಮನೆಗೆ ಬಂದು ವಾಸಿಸಲು ಶುರುಮಾಡಿದ್ದಾಳೆ.ಈ ವೇಳೆ ಗ್ರಾಮಸ್ಥರು ಈ ರೀತಿ ಇರಲು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ನಂತರ ಚಂದು ಮನೆಯವರನ್ನು ಒಪ್ಪಿಸೋ ಮೂಲಕ ಜನವರಿ 4 ರಂದು ಇಬ್ಬರನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಸುಮಾರು 600 ಜನರ ಸಮ್ಮುಖದಲ್ಲಿ ಸದ್ಯ ಒಟ್ಟಿಗೆ ಜೀವನ ನಡೆಸುತ್ತಿದ್ದು, ಇಬ್ಬರ ಜೊತೆ ಸಂತೋಷವಾಗಿ ಇರುತ್ತೇನೆ, ನಾವು ರೈತರಾಗಿ ಜೀವನ ನಡೆಸುತ್ತೇವೆ ಅಂತ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top