ಒಂದೇ ಸ್ಕ್ರೀನ್ ನಲ್ಲಿ ಸೂಪರ್ ಸ್ಟಾರ್ ಮತ್ತು ಸಕಲಕಲಾವಲ್ಲಭ..!

ಒಂದು ಕಾಲದಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳ ಸಂಖ್ಯೆ ಸಿನಿರಂಗದಲ್ಲಿ ಹೆಚ್ಚಾಗೆ ಇತ್ತು, ಆದ್ರೆ ಕ್ರಮೇಣ ಸ್ಟಾರ್ ಪಟ್ಟದ ಜಿದ್ದಿನಿಂದಾಗಿ ಅದರ ಸಂಖ್ಯೆಯು ಕಡಿಮೆಯಾಗುತ್ತಾ ಹೋಯ್ತು, ಆಗೊಂದು ಈಗೊಂದು ಮಲ್ಟಿಸ್ಟಾರ್ ಸಿನಿಮಾ ಬರುತ್ತೆ ಹೋಗುತ್ತೆ, ಆದ್ರೆ ಸೌಂಡ್ ಮಾಡೋದು ಮಾತ್ರ ಕೆಲವು ಸಿನಿಮಾಗಳು ಮಾತ್ರ. ಆದ್ರೆ ಈಗ ಮತ್ತೆ ಮಲ್ಟಿಸ್ಟಾರ್ ಸಿನಿಮಾ ಒಂದು ಸೌಂಡ್ ಮಾಡೋಕೆ ರೆಡಿಯಾಗೋಕೆ ಸೌತ್ ಇಂಡಿಯಾ ಸಿನಿರಂಗ ರೆಡಿಯಾಗ್ತಾ ಇದೆ. ಸುಮಾರು 35 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಾ ಇದ್ದಾರೆ ರಜಿನಿ‌ ಮತ್ತು ಕಮಲ್ ಹಾಸನ್,

ಹೌದು 35 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಮತ್ತೆ ಮೋಡಿ ಮಾಡಲು ಬರ್ತಾ ಇದ್ದಾರೆ ಸೂಪರ್ ಸ್ಟಾರ್ ಮತ್ತು ಸಕಲಕಲಾವಲ್ಲಭ, ಇವರಿಬ್ಬರನ್ನು ಒಟ್ಟಿಗೆ ತೆರೆಮೇಲೆ ತರೋ ಪ್ರಯತ್ನ ಮಾಡ್ತಾ ಇರೋದು, ಇತ್ತಿಚೆಗೆ ಕಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿ ದೊಡ್ಡ ಹವಾಕ್ರಿಯೆಟ್ ಮಾಡಿದ ಕಾರ್ತಿ ಅಭಿನಯದ ‘ಕೈತಿ’ ಚಿತ್ರದ ನಿರ್ದೇಶಕ ‘ಲೋಕೇಶ್ ಕನಗರಾಜ್’ ಈಗಾಗ್ಲೇ ಚಿತ್ರದ ಒನ್ ಲೈನ್ ಸ್ಟೋರಿ ಹೇಳಿದ್ದು ಇಬ್ಬರು ಸೂಪರ್ ಸ್ಟಾರ್ ಗಳು ಪಾಸಿಟಿವ್ ರೆಸ್ಪಾನ್ಸ್ ನೀಡಿದ್ದಾರಂತೆ ಅಂದುಕೊಂಡಂತೆ ಆದ್ರೆ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರೋದು ಗ್ಯಾರಂಟಿ ಅಂತಿದ್ದಾರೆ ನಿರ್ದೇಶಕ ಲೋಕೇಶ್.ಈಗಾಗ್ಲೇ ಕಾಲಿವುಡ್ ನಲ್ಲಿ ದೊಡ್ಡ ಟಾಕ್‌ಶುರುವಾಗಿದ್ದು ಇಬ್ಬರ ಅಭಿಮಾನಿಗಳು ಹಬ್ಬ ಆಚರಿಸಲು ರೆಡಿಯಾಗಿದ್ದಾರೆ.

ಇನ್ನು ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ‘ಗಿರಫ್ತಾರ್ ‘ ಚಿತ್ರದಲ್ಲಿ ಇವರಿಬ್ಬರು ಜೊತೆಗೆ ನಟಿಸಿದ ಕೊನೆ‌ ಸಿನಿಮಾ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top