ಒಂದಲ್ಲಾ ಎರಡಲ್ಲಾ 21 ವರ್ಷ ಬ್ಯಾನ್ ಆಗಿತ್ತು ಈ ಕ್ರಿಕೆಟ್ ಟೀಂ..!

ಯಸ್ ಯಾವುದೇ ಒಂದು ತಂಡವಿರಲಿ ಅದು ಒಂದು ಬಾರಿ ತಪ್ಪು ಮಾಡಿದ್ರೆ ಆ ತಂಡ ಹೆಚ್ಚು ಅಂದ್ರು ಅದು ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿನಂತರ ಮತ್ತೆ ಕ್ರೀಡಾ ಜಗತ್ತಿಗೆ ಮರಳುತ್ತದೆ. ಇನ್ನು ಕ್ರಿಕೆಟ್ ಅನ್ನೋದು ಜಂಟಲ್‍ಮನ್ ಆಟ ಅಂತಾನೇ ಹೇಳ್ತಾರೆ. ಕ್ರಿಕೆಟ್ ಇಂಡಿಯಾದಲ್ಲಿ ಜನಪ್ರಿಯತೆ ಹೊಂದಿದಷ್ಟು ಬೇರೆ ಯಾವ ದೇಶದಲ್ಲೂ ಇಲ್ಲ,ಇನನು ಕ್ರಿಕೆಟ್‍ಗೆ ತನ್ನದೇ ಆದ ಇತಿಹಾಸ ಇದೆ, ಇಲ್ಲಿ ದಾಖಲೆಗಳಿಗೆ ಲೆಕ್ಕವೇ ಇಲ್ಲ,ಪ್ರತಿ ಪಂದ್ಯವೂ ಕೂಡ ಕುತೂಹಲದಿಂದಲೇ ಕೂಡಿರುತ್ತದೆ. ಇನ್ನು ಕ್ರಿಕೆಟ್‍ನಲ್ಲಿ ತಪ್ಪು ಮಾಡಿದ್ರೆ ಶಿಕ್ಷೆ ಮತ್ತು ನಿಷೇಧಗಳು ಕಟ್ಟಿಟ್ಟ ಬುತ್ತಿ ಅಂತಹದ್ದೆ ಒಂದು ದಾಖಲೆಯ ಘಟನೆ ನಡೆದಿದ್ದು ಒಂದು ಇಂಟರ್‍ನ್ಯಾಷನಲ್ ತಂಡ ಮಾಡಿದ ತಪ್ಪಿಗೆ ಬರೋಬ್ಬರಿ 21 ವರ್ಷಗಳ ಐಸಿಸಿಯಿಂದ ಬ್ಯಾನ್ ಆಗಿ ನಂತರ 1991ರಲ್ಲಿ ಇಂಟರ್‍ನ್ಯಾಷನಲ್ ಕ್ರಿಕೆಟ್‍ಗೆ ಮರಳಿರೋ ಘಟನೆ ನಡೆದಿರೋ ಹಿಸ್ಟರಿ ಇದೆ.

ಹೌದು ಸೌತ್ ಆಫ್ರಿಕಾ ಕ್ರಿಕೆಟ್ ತಂಡ ಐಸಿಸಿಯಿಂದ 21 ವರ್ಷಗಳ ಕಾಲ ನಿಷೇಧ ಹೇರಿವ ಮೂಲಕ ದೂರ ಉಳಿಸಿತ್ತು. ಅದು ಯಾವ ಕಾರಣಕ್ಕೆ ಗೊತ್ತಾ..? ದಕ್ಷಿಣ ಆಫ್ರಿಕಾ ವರ್ಣಭೇದ ನೀತಿಯನ್ನು ಎದುರಿಸುತ್ತಿತ್ತು, ಹೀಗಾಗಿ ಅಲ್ಲಿನ ಸರ್ಕಾರ ಈ ನೀತಿಗಾಗಿ ಕೆಲವು ನಿಯಮಗಳನ್ನು ಹಾಕಿಕೊಂಡಿತ್ತು, ಈ ನಿಯಮಗಳನ್ನು ಐಸಿಸಿ ಬಳಿ ಪ್ರಸ್ತಾಪ ಮಾಡಿತ್ತು. ಈ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ತಂಡ ಬಿಳಿಯ ಜನರು ಹೆಚ್ಚಾಗಿರೋ ಇಂಗ್ಲೆಂಡ್,ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಮಾತ್ರ ಆಡಲು ಅವಕಾಶ ನೀಡುವುದಾಗಿ ಹೇಳಿಕೊಂಡಿತ್ತು.ಅಷ್ಟೇ ಅಲ್ಲದೇ ಎದುರಾಳಿ ಟೀಂನಲ್ಲಿ ಬಿಳಿಯರು ಮಾತ್ರ ಇರಬೇಕು ಅನ್ನೋ ನಿಯಮವನ್ನು ಹಾಕಿಕೊಂಡಿತ್ತು.

ಈ ಕಾರಣಕ್ಕೆ ಐಸಿಸಿ 21 ವರ್ಷಗಳ ಕಾಲ ಸೌತ್ ಆಫ್ರಿಕಾ ತಂಡಕ್ಕೆ ನಿಷೇಧ ಹೇರಿತ್ತು. ನಂತರ ಅಲ್ಲಿನ ಸರ್ಕಾರ 1991ರಲ್ಲಿ ನಿಯಮವನ್ನು ಬದಲಿಸದ ನಂತರ ಆಫ್ರಿಕಾ ತಂಡ ಕ್ರಿಕೆಟ್ ಕ್ಷೇತ್ರಕ್ಕೆ ಮತ್ತೆ ರೀ ಎಂಟ್ರಿ ಕೊಟ್ಟಿತು. ನೆಲ್ಸನ್ ಮಂಡೇಲಾ ಅವರ ಸಾರಥ್ಯದಲ್ಲಿ `ರೈನ್ ಬೋ ನೇಷನ್’ ಎಂಬ ಅಭಿಯಾನದಡಿ ಸೌತ್ ಆಫ್ರೀಕಾ ತಂಡ ಐಸಿಸಿ ಹೇರಿದ್ದ ನಿಷೇಧದಿಂದ ಮುಕ್ತಿಹೊಂದಿ ಕ್ರಿಕೆಟ್ ಜಗತ್ತಿಗೆ ರೀ ಎಂಟ್ರಿ ಕೊಟ್ಟಿತು. 1989ರಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಸೌತ್ ಆಫ್ರಿಕಾ 1991ರಲ್ಲಿ ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಿತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top