ಐಪಿಎಲ್ 2021ನಲ್ಲಿ ದೊಡ್ಡ ಬದಲಾವಣೆ 5 ಫಾರಿನ್ ಪ್ಲೇಯರ್ಸ್‍ಗೆ ಅವಕಾಶ

ಐಪಿಎಲ್ 2020 ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಇದೀಗ ಐಪಿಎಲ್ 2021ಗೆ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಬಿಸಿಸಿಐ ಏಪ್ರಿಲ್‍ನಲ್ಲಿ ಐಪಿಎಲ್ ಟೂರ್ನಿ ನಡೆಸುವ ಬಗ್ಗೆ ಮಾಹಿತಿಯನ್ನು ನೀಡಿದ್ದು, ಈ ಬಾರಿ ಮೆಗಾ ಆಕ್ಷನ್ ಕೂಡ ನಡೆಯಲಿದೆ ಅಂತಾನೂ ಹೇಳಲಾಗುತ್ತಿದೆ. ಹೀಗಿರಬೇಕಾದ್ರೆ ಇದೀಗ ಐಪಿಎಲ್‍ನ ಫ್ರಾಂಚೈಸಿಗಳು ಬಿಸಿಸಿಐ ಎದುರು ಹೊಸ ಬೇಡಿಯನ್ನು ಇಟ್ಟಿದ್ದಾರೆ. ಹೌದು ಮುಂದಿನ ಐಪಿಎಲ್‍ನಲ್ಲಿ ಒಂದಿಷ್ಟು ನಿಯಮಗಳನ್ನು ಬದಲಾಯಿಸೋ ನಿಟ್ಟಿನಲ್ಲಿ ಬಿಸಿಸಿಐ ಯೋಜನೆಗಳನ್ನು ಹಾಕಿಕೊಂಡಿದ್ದು, ಇದೀಗ ಐಪಿಎಲ್ ಫಾಂಚೈಸಿಗಳು ಸಹ ಬೇಡಿಕೆಯನ್ನು ಇಟ್ಟಿದ್ದಾರೆ. ಮುಂದಿನ ಐಪಿಎಲ್‍ನಲ್ಲಿ ಪ್ರತಿ ತಂಡದಲ್ಲೂ 5 ಜನ ವಿದೇಶಿ ಆಟಗಾರರನ್ನು ಆಡಿಸಲು ಅನುಮತಿಯನ್ನು ನೀಡಬೇಕು ಅನ್ನೋ ಬೇಡಿಕೆಯನ್ನು ಕೆಲ ಪ್ರಾಂಚೈಸಿಗಳು ಬಿಸಿಸಿಐ ಎದುರು ಇಟ್ಟಿದ್ದಾರೆ ಅಂತ ಹೇಳಲಾಗಿದೆ. ಕೋಟಿ ಕೋಟಿ ಕೊಟ್ಟು ವಿದೇಶಿ ಆಟಗಾರರನ್ನು ತಂಡಕ್ಕೆ ಖರೀದಿಸಿ ಅವರನ್ನು ಬೆಂಚ್ ಕಾಯಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ, ಈಗಿರುವ 4 ಜನ ಆಡಲು ಅವಕಾಶವಿದ್ದು, ಮುಂದಿನ ಐಪಿಎಲ್‍ನಿಂದ 5 ಜನ ವಿದೇಶಿ ಆಟಗಾರರಿಗೆ ಆಡಲು ಅವಕಾಶವನ್ನು ಕೊಡಬೇಕು ಅನ್ನೋ ಬೇಡಿಕೆಯನ್ನು ಪ್ರಾಂಚೈಸಿಗಳು ಬಿಸಿಸಿಐ ಮುಂದೆ ಇಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ.ಸದ್ಯ ಈ ವಿಚಾರವಾಗಿ ಪರ ವಿರೋದಗಳು ಸಹ ಕೇಳಿ ಬರ್ತಾ ಇದ್ದು 5 ಜನ ವಿದೇಶಿ ಆಟಗಾರರಿಗೆ ಅವಕಾಶ ಕೊಟ್ಟರೆ ದೇಶಿ ಆಟಗಾರರಿಗೆ ಅನ್ಯಾಯ ಮಾಡಿದ ರೀತಿ ಆಗುತ್ತದೆ ಅನ್ನೋ ಮಾತುಗಳನ್ನು ಸಹ ಹೇಳುತ್ತಿದ್ದಾರೆ.

ಕೊರೋನಾ ಕಾರಣದಿಂದ ಮಾರ್ಚ್ ಏಪ್ರಿಲ್‍ನಲ್ಲಿ ನಡೆಯ ಬೇಕಾಗಿದ್ದ ಐಪಿಎಲ್ 6 ತಿಂಗಳು ತಡವಾಗಿ ಯುಎಇಯಲ್ಲಿ ನಡೆದಿದ್ದು, ಬಿಸಿಸಿಐ ಯಶಸ್ವಿಯಾಗಿ ಮುಗಿಸಿದೆ. ಇದೀಗ ಐಪಿಎಲ್ 2020ಯಲ್ಲಿ ಬಿಸಿಸಿಐ ದೊಡ್ಡ ಮೊತ್ತದ ಲಾಭವನ್ನು ಕಂಡಿದ್ದುಈ ಬಗ್ಗೆ ಬಿಸಿಸಿಐ ಖಂಜಾಚಿ ಮಾತನಾಡಿದ್ದು ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಬಿಸಿಸಿಐ ಯಶಸ್ವಿಯಾಗಿ ಐಪಿಎಲ್ ಆಯೋಜನೆ ಮಾಡಿದ್ದು, ಈ ಬಾರಿ ಐಪಿಎಲ್‍ನಿಂದ ಬಿಸಿಸಿಐಗೆ 4 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದ್ದು, ಈ ಬಾರಿಯ ಐಪಿಎಲ್ ಅನ್ನು ಪ್ರೇಕ್ಷಕ ದಾಖಲೆ ಮಟ್ಟದಲ್ಲಿ ವೀಕ್ಷಿಸಿ ವಿಶ್ವದಾಖಲೆ ಬರೆದಿದ್ದಾರೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಬಾರಿಯ ಐಪಿಎಲ್‍ನಲ್ಲಿ ಶೇ 35ರಷ್ಟು ಖರ್ಚು ಕೂಡ ಕಡಿತವಾಗಿದ್ದು, ಆ ಮೂಲಕ ಬಿಸಿಸಿಐಗೆ ಈ ಬಾರಿಯ ಐಪಿಎಲ್‍ನಿಂದ ಕೋಟಿ ಕೋಟಿ ಆದಾಯ ಬಂದಿದೆ ಎಂದು ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಐಪಿಎಲ್ ಮುಗಿದ ನಂತರದಲ್ಲಿ ಒಂದಿಷ್ಟು ಅಪಸ್ವರಗಳು ಕೇಳಿಬರ್ತಾ ಇದ್ದು, ವಿರಾಟ್ ಕೊಹ್ಲಿ ಬೆನ್ನಿಗೆ ಕ್ರಿಕೆಟ್ ದಿಗ್ಗಜರು ನಿಂತಿದ್ದಾರೆ. ಇದೀಗ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಭವಿಷ್ಯ ನುಡಿದ್ದಿದ್ದಾರೆ. ಹೌದು ವಿರಾಟ್ ಕೊಹ್ಲಿ ಶೀಘ್ರದಲ್ಲೇ ವಿಶ್ವಕಪ್ ಗೆಲ್ಲಲಿದ್ದಾರೆ. ಕೊಹ್ಲಿ ಈಗಾಗಲೇ ಮಹಾನ್ ಆಟಗಾರರಾಗಿದ್ದು, ವಿಶ್ವ ಕಪ್ ಗೆದ್ದರೆ ಮಾತ್ರ ಮಹಾನ್ ಆಟಗಾರರನಾಗುವುದಿಲ್ಲ, ವಿರಾಟ್ ಶೀಘ್ರದಲ್ಲೇ ವಿಶ್ವಕಪ್ ಗೆದ್ದ ನಾಯಕರಾಗಲಿದ್ದಾರೆ ಅಂತ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಮುಂದಿನ ಐಪಿಎಲ್‍ನಲ್ಲಿ ಒಂದು ಟೀಂನಲ್ಲಿ 5 ಜನ ವಿದೇಶಿ ಆಟಗಾರರನ್ನು ಆಡಿಸಬೇಕಾ, ವಿರಾಟ್ ಕೊಹ್ಲಿ ಮುಂದಿನ ಬಾರಿ ಇಂಡಿಯಾದಲ್ಲಿ ನಡೆಯೋ ವಿಶ್ವಕಪ್ ಗೆದ್ದು ಎಲ್ಲರ ಬಾಯಿಯನ್ನು ಮುಚ್ಚಿಸುತ್ತಾರಾ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top