ಐಪಿಎಲ್ 2020 ಕನ್ನಡಿಗರದ್ದೇ ದರ್ಬಾರ್..

ಐಪಿಎಲ್ ಹವಾ ದಿನೇ ದಿನೇ ಹೆಚ್ಚಾಗುತ್ತಿದ್ದು, ಒಂದರ ಮೇಲೆ ಒಂದು ದಾಖಲೆಗಳು ಸೃಷ್ಟಿಯಾಗುತ್ತಿದೆ. ಹೀಗಿರುವಾಗಲೇ ಈ ಬಾರಿಯ ಐಪಿಎಲ್‍ನಲ್ಲಿ ಕನ್ನಡಿಗರ ದರ್ಬಾರ್ ಕೂಡ ಜೋರಾಗೆ ಶುರುವಾಗಿದೆ. ಐಪಿಎಲ್‍ನಲ್ಲಿ ಕನ್ನಡಿಗರು ಪ್ರಾರಂಭದಿಂದಲೇ ಉತ್ತಮ ಪ್ರದರ್ಶನ ನೀಡೋ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ಹಾಗೇ ತಮ್ಮ ದರ್ಬಾರ್ ಶುರುಮಾಡಿಕೊಂಡಿದ್ದಾರೆ. ಹೌದು ಐಪಿಎಲ್ ಶುರುವಿನಿಂದಲ್ಲೇ ಉತ್ತಮ ಪ್ರದರ್ಶನ ನೀಡ್ತಾ ಇರೋ ಕನ್ನಡಿಗರು ಇದೀಗ ಬಿಸಿಸಿಐ ಗಮನ ಸೆಳೆಯುತ್ತಿದ್ದಾರೆ. ಐಪಿಎಲ್‍ನಲ್ಲಿ ಪದಾರ್ಪಣೆ ಪಂದ್ಯದಲ್ಲೇ ಆರ್‍ಸಿಬಿ ಪರ ಆಡುತ್ತಿರೋ ದೇವದತ್ ಪಡಿಕಲ್ ಸನ್‍ರೈಸರ್ಸ್ ಹೈದರಬಾದ್ ತಂಡದ ವಿರುದ್ಧ ಅರ್ಧ ಶತಕ ಸಿಡಿಸುವ ಮೂಲಕ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಇನ್ನು ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಅರ್ಥ ಶತಕ ಸಿಡಿಸುವ ಮೂಲಕ ತಂಡಕ್ಕೆ ಬೆಸ್ಟ್ ಓಪನ್ ಆಗೋ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಇನ್ನು ಈಗಾಗಲೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ಕೂಡ ದೇವದತ್ ಪಡಿಕಲ್ ಬ್ಯಾಟಿಂಗ್ ಮೆಚ್ಚಿಕೊಂಡಿದ್ದು, ಟೀಂ ಇಂಡಿಯಾದ ಬಾಗಿಲು ತಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಕಾಣಿಸುತ್ತಿದೆ. ಇನ್ನು ಐಪಿಎಲ್‍ನಲ್ಲಿ ದರ್ಬಾರ್ ಶುರುಮಾಡಿರೋದು ಅಂದ್ರೆ ಅಂದು ಪಂಜಾಬ್ ತಂಡ ಈ ಎರಡು ಕಲಿಗಳು..

ಹೌದು ಪಂಜಾಬ್ ತಂಡದಲ್ಲಿ ಐದು ಜನ ಕನ್ನಡಿಗರು ಇದ್ದು ತಂಡದಲ್ಲಿ ತಮ್ಮದೇ ದರ್ಬಾರ್ ಶುರುಮಾಡಿದ್ದಾರೆ. ಒಂದು ಕಡೆ ಪಂಜಾಬ್ ತಂಡದ ಕೆ.ಎಲ್ ರಾಹುಲ್ ಭರ್ಜರಿ ಆಟವನ್ನು ಆಡೋ ಮೂಲಕ ತಂಡವನ್ನು ಗೆಲುವಿನ ದಡವನ್ನು ಸೇರಿಸ್ತಾ ಇದ್ರೆ, ಇನ್ನೊಂದು ಕಡೆ ಮಾಯಾಂಕ್ ಅಗರ್‍ವಾಲ್ ನಾನು ಏನು ಕಮ್ಮಿ ಇಲ್ಲ ಅನ್ನೋ ಹಾಗೇ ಆಡೋ ಮೂಲಕ ಶತಕವನ್ನು ಸಿಡಿಸಿದ್ದಾರೆ. ಇನ್ನು ಈ ಐಪಿಎಲ್‍ನಲ್ಲಿ ಶತಕ ಸಿಡಿದ ಮೊದಲ ಎರಡು ಆಟಗಾರರು ಅನ್ನೋ ಹೆಗ್ಗಳಿಕೆಗೆ ಈ ನಮ್ಮ ಕನ್ನಡಿಗರು ಪಾತ್ರರಾಗಿದ್ದಾರೆ.

ಇನ್ನು ಸದ್ಯ ಐಪಿಎಲ್ ಟಾಪ್ ಸ್ಕೋರ್ ಮಾಡಿರೋ ಆಟಗಾರರಲ್ಲಿ ಟಾಪ್ ಎರಡು ಸ್ಥಾನವನ್ನು ಇವರು ಅಲಂಕರಿಸಿದ್ದಾರೆ. ಸನ್‍ರೈಸರ್ಸ್ ಹೈದರಬಾದ್ ತಂಡದಲ್ಲೂ ಕನ್ನಡಿಗನೇ ಆಧಾರ ಸ್ತಂಭ ಹೌದು ಇನ್ನು ಸನ್‍ರೈಸರ್ಸ್ ಹೈದರಬಾದ್ ತಂಡ ಆಧಾರ ಸ್ತಂಭ ಅಂದ್ರೆ ಅದು ಮನೀಶ್ ಪಾಂಡೆ..ತಂಡ ಯಾವುದೇ ಸ್ಥಿತಿಯಲ್ಲಿ ಇರಲಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಆಟಗಾರರ..

ಈ ಐಪಿಎಲ್‍ನಲ್ಲಿ ಆಡಿದ ಎರಡು ಪಂದ್ಯದಲ್ಲೂ ಸತತ ಎರಡು ಅರ್ಥ ಶತಕವನ್ನು ಭಾರಿಸೋ ಮೂಲಕ ಐಪಿಎಲ್ ಪ್ರಾರಂಭದಿಂದಲೇ ತಮ್ಮ ದರ್ಬಾರ್ ಶುರುಮಾಡಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‍ನಲ್ಲಿ ಕನ್ನಡಿಗರು ಐಪಿಎಲ್ ಪ್ರಾರಂಭದಿಂದಲೇ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಮ್ಮ ದರ್ಬಾರ್ ಶುರುಮಾಡಿರೋದು ಕನ್ನಡಿಗರಿಗೆ ಸಂತಸದ ವಿಷಯವೇ ಸರಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top