ಐಪಿಎಲ್ ಮೆಗಾ ಆಕ್ಷನ್ಗೆ ಡೇಟ್ ಫಿಕ್ಸ್. ಐಪಿಎಲ್ನಲ್ಲಿ ಆಗಲಿದೆ ಭಾರೀ ಬದಲಾವಣೆ

ಐಪಿಎಲ್‌ ೨೦೨೦ ಯುಎಇಯಲ್ಲಿ ಯಶಸ್ವಿಯಾಗಿ ಮುಕ್ತಾವಾಗಿ ಮುಂಬೈ ಇಂಡಿಯನ್ಸ್‌ 5ನೇ ಬಾರಿ ಚಾಂಪಿಯನ್ಸ್‌ ಆಗಿದ್ದು ಆಯ್ತು, ಇದೀಗ ಐಪಿಎಲ್‌ನ ಎಲ್ಲಾ ಪ್ರಾಂಚೈಸಿಗಳು ಐಪಿಎಲ್‌ 2021ಗೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಸಿಸಿಐ ಕೂಡ ಮಾರ್ಚ್‌ ಏಪ್ರಿಲ್‌ ತಿಂಗಳಿನಲ್ಲಿ ಐಪಿಎಲ್‌ 2021 ಅನ್ನು ನಡೆಸುದಾಗಿ ಹೇಳಿಕೊಂಡಿದ್ದು, ಈ ಬಾರಿ ಆಕ್ಷನ್‌ ಬಗ್ಗೆಯೂ ಸಹ ಮಾಹಿತಿಯನ್ನು ಹೊರ ಬಿಟ್ಟಿದೆ.

ಐಪಿಎಲ್‌ 2021ಗಾಗಿ ಮೆಗಾ ಆಕ್ಷನ್‌ಗೆ ಬಿಸಿಸಿಐ ಈಗಾಗಲೇ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಆ ಮೂಲಕ ಮುಂದಿನ ಐಪಿಎಲ್‌ನಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರಲು ತಯಾರಿಯನ್ನು ನಡೆಸುತ್ತಿದೆ. ಮುಂದಿನ ಐಪಿಎಲ್‌ನಲ್ಲಿ ಒಂದಿಷ್ಟು ನಿಯಮಗಳನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡುತ್ತಿದ್ದು ಅದರಲ್ಲಿ ಪ್ರಮುಖವಾಗಿ ತಂಡದ 11ರ ಬಳಗದಲ್ಲಿ 4 ಜನ ವಿದೇಶಿ ಆಟಗಾರರ ಬದಲಿಗೆ 5 ಜನ ವಿದೇಶಿ ಆಟಗಾರರಿಗೆ ಆಡಲು ಅವಕಾಶ ಕಲ್ಪಿಸಿಕೊಡಲು ತೀರ್ಮಾನ ತೆಗೆದುಕೊಳ್ಳಲಾಗಲಿದೆ ಅಂತ ಹೇಳಲಾಗುತ್ತಿದೆ.

ಇನ್ನು ಇದರ ಜೊತೆಯಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಹರಾಜು ಪ್ರಕ್ರಿಯಲ್ಲಿ ತಂಡದಲ್ಲಿ ಆಟಗಾರರ ರಿಟೈನ್‌ ಸಂಖ್ಯೆಯಲ್ಲೂ ಬದಲಾವಣೆ ಮಾಡುವ ಸಾಧ್ಯತೆ ಇದೆ, ಆ ಮೂಲಕ ಒಂದು ತಂಡ ಮೂರು ಆಟಗಾರರನ್ನು ರಿಟೈನ್‌ ಮಾಡಿಕೊಳ್ಳುವ ಬದಲು ಒಬ್ಬ ಆಟಗಾರರನ್ನು ಮಾತ್ರ ರಿಟೈನ್‌ ಮಾಡಿಕೊಂಡು ಉಳಿದ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಅನುಕೂಲಕದ ಮೊತ್ತಕ್ಕೆ ಖರೀದಿಸುವ ಅವಕಾಶವೂ ಸಿಗಲಿದೆಯಂತೆ, ಈ ರೀತಿ ಐಪಿಎಲ್‌ ನಿಯಮದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಲು ಬಿಸಿಸಿಐ ಪ್ಲಾನ್‌ ಮಾಡಿದ್ದು, ಇದೀಗ ಮೆಗಾ ಆಕ್ಷನ್‌ ದಿನಾಂಕದ ಬಗ್ಗೆಯೂ ಮೂಲಗಳಿಂದ ಮಾಹಿತ ಹೊರ ಬಿದ್ದಿದೆ.

ಹೌದು ಈಗಾಗಲೇ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತು ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಮುಂದಿನ ಐಪಿಎಲ್‌ ಆಕ್ಷನ್‌ ಜನವರಿ ಕೊನೆಯ ವಾರ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ನಡೆಸಲಾಗುವುದು ಎಂಬ ಮಾಹಿತಿಯನ್ನು ನೀಡಿದ್ರು, ಆದ್ರೆ ಇದೀಗ ಬಿಸಿಸಿಐ ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳಿಗೂ ಎರಡು ದಿನಾಂಕವನ್ನು ನೀಡುವ ಮೂಲಕ ಫ್ರಾಂಚೈಸಿಗಳ ಅನಿಸಿಕೆ ಕಾಯುತ್ತಿದೆ. ಬಿಸಿಸಿಐ ಫ್ರಾಂಚೈಸಿಗಳಿಗೆ ಜನವರಿ 29 ಮತ್ತು ಫೆಬ್ರವರಿ 12 ಈ ಎರಡು ದಿನಾಂಕಗಳನ್ನು ನೀಡಿದ್ದು, ಈ ಎರಡು ದಿನಾಂಕದಲ್ಲಿ ಯಾವ ದಿನಾಂಕ ಫೈನಲ್‌ ಆಗಲಿದೆ ಕಾದು ನೋಡಬೇಕು. ಇನ್ನು ಈ ಬಾರಿ ಐಪಿಎಲ್‌ ಆಕ್ಷನ್‌ ಎಲ್ಲಿ ನಡೆಯಲಿದೆ ಅನ್ನೋ ಕುತೂಹಲ ಕೂಡ ಇದ್ದು, ಪ್ರತಿ ಬಾರಿ ನಡೆಯುವಂತೆ ಈ ಬಾರಿಯು ಐಪಿಎಲ್‌ ಆಕ್ಷನ್‌ ಬೆಂಗಳೂರಿನಲ್ಲಿ ನಡೆಸಲು ಬಿಸಿಸಿಐ ಮತ್ತು ಐಪಿಎಲ್‌ ಕಮಿಟಿ ತೀರ್ಮಾನವನ್ನು ತೆಗೆದುಕೊಂಡಿದೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ ಪ್ರೇಕ್ಷಕರಿಲ್ಲದೇ ಯಶಸ್ವಿಯಾಗಿ ಮುಗಿಸಿದ್ದು, ಮುಂದಿನ ಐಪಿಎಲ್‌ನಲ್ಲಿ ಒಂದಿಷ್ಟು ಬದಲಾವಣೆಯೊಂದಿಗೆ ಪ್ರೇಕ್ಷಕರ ಜೊತೆಯಲ್ಲಿ ಐಪಿಎಲ್‌ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ನಿಮ್ಮ ಪ್ರಕಾರ 2021ರ ಐಪಿಎಲ್‌ನಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರಬೇಕು. 5 ಜನ ವಿದೇಶಿ ಆಟಗಾರರನ್ನು ತಂಡದಲ್ಲಿ ಆಡಿಸಲು ನಿಮ್ಮ ಸಹಮತ ಇದ್ಯಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top