ಐಪಿಎಲ್ ಇತಿಹಾಸ ಸೂಪರ್ ಓವರ್‍ಗಳ ರೋಚಕ ಕ್ಷಣ

ಐಪಿಎಲ್ಕ್ರಿಕೆಟ್ಪ್ರಿಯರ ಪಾಲಿನ ಹಬ್ಬವೇ ಸರಿ, ಕ್ರಿಕೆಟ್ಹಬ್ಬ ಇಂಡಿಯನ್ಪ್ರೀಮಿಯರ್ಲೀಗ್ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಪ್ರತಿ ಪಂದ್ಯಗಳು ಕುತೂಹಲದಿಂದ ಕೂಡಿರುತ್ತದೆ. ಅಲ್ಲದೇ ಯಾವ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆ ಅನ್ನೋದನ್ನ ಊಹಿಸಲು ಸಹ ಸಾಧ್ಯವಾಗುವುದಿಲ್ಲ ಅಷ್ಟರ ಮಟ್ಟಿಗೆ ರೋಚಕತೆಯಿಂದ ಕೂಡಿರುತ್ತದೆ. ಇನ್ನು ಐಪಿಎಲ್ಪಂದ್ಯದಲ್ಲಿ ಮ್ಯಾಚ್ಜೊತೆಯಲ್ಲಿ ಕ್ರಿಕೆಟ್ಪ್ರಿಯರನ್ನು ಹೆಚ್ಚು ರೋಚಕವಾಗುವಂತೆ ಮಾಡುವುದು ಸೂಪರ್ಓವರ್ಮ್ಯಾಚ್ಗಳು, ಪಂದ್ಯ ಟೈ ಆಗಿ ನಡೆಯೋ ಸೂಪರ್ಓವರ್ಒಂದು ರೀತಿಯಲ್ಲಿ ರೋಚಕತೆಯಿಂದಲೇ ಕೂಡಿರುತ್ತದೆ. ನಿನ್ನೆ ನಡೆದ ಎರಡು ಪಂದ್ಯದಲ್ಲಿ ಒಟ್ಟು ಮೂರು ಸೂಪರ್ಓವರ್ಆಗುವ ಮೂಲಕ ಐಪಿಎಲ್ಇತಿಹಾಸದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಇನ್ನು 2020ರಲ್ಲಿ ಅತಿ ಹೆಚ್ಚು ಸೂಪರ್ಓವರ್ಮ್ಯಾಚ್ನಡೆಯೋ ಮೂಲಕ ಹೊಸ ಇತಿಹಾಸಕ್ಕೆ ದುಬೈನ ಐಪಿಎಲ್‌ 2020 ಸಾಕ್ಷಿಯಾಗಿದೆ. ಹಾಗಾದ್ರೆ ಇದುವರೆಗೂ ನಡೆದ ಐಪಿಎಲ್ಹಬ್ಬದಲ್ಲಿ ಎಷ್ಟು ಸೂಪರ್ಓವರ್ಗಳು ನಡೆದಿವೆ ಅನ್ನೋದರ ಒಂದು ಕ್ವಿಕ್ಲುಕ್ನೋಡೋಣ.

13 ಆವೃತ್ತಿಯಲ್ಲಿ ಇದುವರೆಗೂ ಪ್ರತಿ ಐಪಿಎಲ್ಪಂದ್ಯದಲ್ಲಿ ಸೂಪರ್ಓವರ್ನಡೆದಿದ್ದು ಒಟ್ಟು 13ಕ್ಕೂ ಹೆಚ್ಚು ಸೂಪರ್ಓವರ್ಮ್ಯಾಚ್ಗಳು ನಡೆದಿದ್ದು, ಪ್ರತಿ ವರ್ಷ ನಡೆದ ಸೂಪರ್ಓವರ್ಮ್ಯಾಚ್ನಲ್ಲಿ ಯಾವೆಲ್ಲಾ ತಂಡಗಳು ಗೆಲುವು ಸಾಧಿಸಿ ಅನ್ನೋದನ್ನ ಇವತ್ತು ನೋಡೋಣ.

* 2009ರಲ್ಲಿ ಮೊದಲ ಬಾರಿಗೆ ಸೂಪರ್ಓವರ್ಮ್ಯಾಚ್ನಡೆದಿದ್ದು, ಇದು ಕೆಕೆಆರ್ಮತ್ತು ರಾಜಸ್ತಾನ್ರಾಯಲ್ಸ್ವಿರುದ್ಧ ಕೇಪ್ಟೌನ್ನಲ್ಲಿ ನಡೆದಿದ್ದು ಸೂಪರ್ಓವರ್ಪಂದ್ಯದಲ್ಲಿ ಆರ್ಆರ್ತಂಡ ಗೆಲುವನ್ನು ಸಾಧಿಸಿತ್ತು.

* 2010ರಲ್ಲಿ ಪಂಜಾಬ್ಮತ್ತು ಚೆನ್ನೈ ತಂಡಗಳ ನಡುವೆ ಚೆನ್ನೈನಲ್ಲಿ ನಡೆದ ಪಂದ್ಯ ಸೂಪರ್ಓವರ್ಪಂದ್ಯ ನಡೆದಿದ್ದು ಇದರಲ್ಲಿ ಪಂಜಾಬ್ತಂಡ ಗೆಲುವನ್ನು ಸಾಧಿಸಿತ್ತು.

* 2013ರಲ್ಲಿ ಹೈದರಬಾದ್ಮತ್ತು ಆರ್ಸಿಬಿ ತಂಡದ ನಡುವೆ ಹೈದರಬಾದ್ಪಂದ್ಯ ಟೈ ಆಗಿದ್ದು ಪಂದ್ಯ ಸೂಪರ್ಓವರ್ನಲ್ಲಿ ಹೈದರಬಾದ್ಜಯಭೇರಿಯನ್ನು ಬಾರಿಸಿತ್ತು.

* 2013ರಲ್ಲಿ ಮತ್ತೊಂದು ಪಂದ್ಯ ಕೂಡ ಆರ್ಸಿಬಿ ಮತ್ತು ಡೆಲ್ಲಿ ಡೇರ್ಡೆವಿಲ್ಸ್ವಿರುದ್ಧ ಬೆಂಗಳೂರಿನ ಪಂದ್ಯ ಟೈ ಆಗಿದ್ದು ಪಂದ್ಯದ ಸೂಪರ್ಓವರ್ನಲ್ಲಿ ಆರ್ಸಿಬಿ ಗೆಲುವನ್ನು ಸಾಧಿಸಿತ್ತು.

*2014ರಲ್ಲಿ ಅಬುಧಾಬಿಯಲ್ಲಿ ನಡೆದ ಆರ್ಆರ್ಮತ್ತು ಕೆಕೆಆರ್ನಡುವಿನ ಪಂದ್ಯದ ಸೂಪರ್ಓವರ್ನಲ್ಲಿ ಆರ್ಆರ್ತಂಡ ಗೆಲುವಿನ ನೆಗೆಯನ್ನು ಬೀರಿತ್ತು.

* ಪಂಜಾಬ್ಮತ್ತು ಆರ್ಆರ್ನಡುವೆ ಅಹ್ಮದಾಬಾದ್ನಲ್ಲಿ 2015ರಲ್ಲಿ ನಡೆದ ಪಂದ್ಯ ಕೂಡ ಟೈ ಆಗಿದ್ದು ವೇಳೆ ನಡೆದ ಸೂಪರ್ಓವರ್ನಲ್ಲಿ ಪಂಜಾಬ್ತಂಡ ಗೆಲುವನ್ನು ಸಾಧಿಸಿತ್ತು.

* 2017ರಲ್ಲಿ ಮುಂಬೈ ಮತ್ತು ಗುಜರಾತ್ತಂಡಗಳ ನಡುವೆ ರಾಜ್ಕೋಟ್ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಸೂಪರ್ಓವರ್ನಲ್ಲಿ ಜಯಗಳಿಸಿತ್ತು.

* 2019ರಲ್ಲಿ ಡೆಲ್ಲಿ ಮತ್ತು ಕೆಕೆಆರ್ತಂಡಗಳ ನಡುವಿನ ಸೂಪರ್ಓವರ್ಮ್ಯಾಚ್ನಲ್ಲಿ ಡೆಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

*2019 ಇನ್ನೊಂದು ಪಂದ್ಯ ಕೂಡ ಟೈ ಆಗಿದ್ದು, ಮುಂಬೈ ಮತ್ತು ಹೈದರಬಾದ್ತಂಡಗಳು ಸೂಪರ್ಓವರ್ನಲ್ಲಿ ಮುಖಾಮುಖಿಯಾಗಿದ್ದು ಸೂಪರ್ಓವರ್ಮ್ಯಾಚ್ನಲ್ಲಿ ಮುಂಬೈ ಜಯಗಳಿಸಿತ್ತು.

ಇನ್ನು ವರ್ಷದ ಐಪಿಎಲ್ಪಂದ್ಯದಲ್ಲಿ ಒಟ್ಟು 4 ಸೂಪರ್ಓವರ್ಗಳು ನಡೆದಿದ್ದು ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಸೀಸನ್ನಲ್ಲಿ ಅತಿ ಹೆಚ್ಚು ಸೂಪರ್ಓವರ್ಪಂದ್ಯಗಳ ನಡೆದು ದಾಖಲೆ ನಿರ್ಮಿಸಿದೆ.

ಮೊದಲ ಸೂಪರ್ಓವರ್ಡೆಲ್ಲಿ ಮತ್ತು ಪಂಜಾಬ್ತಂಡಗಳ ನಡುವೆ ನಡೆದಿದ್ದು ಡೆಲ್ಲಿ ಸೂಪರ್ಓವರ್ನಲ್ಲಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

ಇನ್ನು ಎರಡನೇ ಸೂಪರ್ಓವರ್ಮುಂಬೈ ಮತ್ತು ಆರ್ಸಿಬಿ ತಂಡಗಳ ನಡುವೆ ನಡೆದಿದ್ದು ಪಂದ್ಯದಲ್ಲಿ ಆರ್ಸಿಬಿ ಗೆಲುವನ್ನು ಸಾಧಿಸಿತು.

ಇನ್ನು ಒಂದೇ ದಿನ ಮೂರು ಸೂಪರ್ಓವರ್ಗಳು ನಡೆದಿದ್ದು ಇದು ಕೂಡ ಐಪಿಎಲ್ಇತಿಹಾಸಲ್ಲಿ ಮೊದಬಾರಿಯಾಗಿದ್ದು ಮೊದಲ ಸೂಪರ್ಓವರ್ಕೆಕೆಆರ್ಮತ್ತು ಹೈದರಬಾದ್ತಂಡಗಳ ನಡುವೆ ನಡೆದಿದ್ದು ಪಂದ್ಯದಲ್ಲಿ ಕೆಕೆಆರ್ಗೆಲುವನ್ನು ಸಾಧಿಸಿತು. ಇನ್ನು ಎರಡನೇ ಪಂದ್ಯದಲ್ಲಿ ಎರಡು ಸೂಪರ್ಓವರ್ಗಳು ನಡೆದಿದ್ದು ಮೊದಲ ಸೂಪರ್ಓವರ್ಟೈ ಆಗಿದ್ದು, ಎರಡನೇ ಸೂಪರ್ಓವರ್ನಲ್ಲಿ ಪಂಜಾಬ್ಮುಂಬೈ ತಂಡದ ವಿರುದ್ಧ ಗೆಲುವನ್ನು ಸಾಧಿಸುವ ಮೂಲಕ ದಾಖಲೆಯನ್ನು ಬರೆಯಿತು.

ಒಟ್ಟಿನಲ್ಲಿ ಐಪಿಎಲ್‌ ಅನ್ನೋ ಕ್ರಿಕೆಟ್‌ ಹಬ್ಬದಲ್ಲಿ ಒಂದಿಲ್ಲೊಂದು ರೋಚಕತೆ ಕೂಡಿದ್ದು,

ನಿಮ್ಮ ಪ್ರಕಾರ ಇದುವರೆಗೂ ನಡೆದ ಸೂಪರ್‌ ಓವರ್‌ ಮ್ಯಾಚ್‌ನಲ್ಲಿ ನಿಮ್ಮ ಬೆಸ್ಟ್‌ ಸೂಪರ್‌ ಓವರ್‌ ಯಾವುದು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top