ಐಪಿಎಲ್‍ನಲ್ಲಿ CSK,RCBಗೆ ನೇಮ್ ಜಾಸ್ತಿ, ಗೇಲ್‍ನ ಪಂಜಾಬ್ ಕೈ ಬಿಟ್ರೇನೆ ಒಳ್ಳೇದು

ಐಪಿಎಲ್‍ನಲ್ಲಿ ಈ ಬಾರಿ ಆರ್‍ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಪ್ ಗೆಲ್ಲದಿದ್ರು, ಹೊಸದೊಂದು ದಾಖಲೆಯನ್ನು ಮಾಡೋ ಮೂಲಕ ಸುದ್ದಿಯಾಗಿದೆ. ಹೌದು ಐಪಿಎಲ್ ಮುಗಿದ್ರು, ಸದ್ಯ ಐಪಿಎಲ್ ಬಗೆಗಿನ ಚರ್ಚೆಗಳು ಮಾತ್ರ ಇನ್ನು ಮುಗಿದಿಲ್ಲ, ಇದೀಗ ಟ್ವೀಟರ್ ಹೊಸದೊಂದು ಸುದ್ದಿ ಹೊರಹಾಕಿದ್ದು, ಐಪಿಎಲ್‍ನಲ್ಲಿ ಅತಿ ಹೆಚ್ಚು ಟ್ವೀಟರ್‍ನಲ್ಲಿ ಖ್ಯಾತಿ ಹೊಂದಿದ ತಂಡ ಯಾವುದು ಅನ್ನೋದನ್ನ ಹೇಳಿದೆ. ಟ್ವೀಟರ್ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನ ಗಳಿಸಿದ್ರೆ, ಆರ್‍ಸಿಬಿ ಎರಡನೇ ಸ್ಥಾನ ಮತ್ತು ಮುಂಬೈ ಮೂರನೇ ಸ್ಥಾನವನ್ನು ಗಳಿಸಿದೆ. ಇನ್ನು ಫೈನಲ್ ಪ್ರವೇಶ ಮಾಡಿದ್ದ ಡೆಲ್ಲಿ ತಂಡ ಕೊನೆಯ ಸ್ಥಾನಗಳಿಸಿದೆ. ಇನ್ನು ಟ್ವೀಟರ್‍ನಲ್ಲಿ ಐಪಿಎಲ್ ಟೈಂನಲ್ಲಿ ಅತಿ ಹೆಚ್ಚು ಖ್ಯಾತಿಗಳಿಸಿದ ಆಟಗಾರ ಅಂದ್ರೆ ಅದು ಆರ್‍ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಆ ಮೂಲಕ ಐಪಿಎಲ್ ಕಪ್ ಗೆಲ್ಲದಿದ್ರು, ಖ್ಯಾತಿಯಲ್ಲಿ ಚೆನ್ನೈ ಮತ್ತು ಆರ್‍ಸಿಬಿ ದಾಖಲೆ ಬರೆದಿದೆ.

ಇನ್ನು ಪಂಜಾಬ್ ತಂಡದಿಂದ ಕ್ರಿಸ್‍ಗೇಲ್ ಅವರನ್ನು ಕೈಬಿಡೋದು ಒಳ್ಳೆಯದು ಅಂತ ಮಾಜಿ ಕ್ರಿಕೆಟರ್ ಹೇಳಿದ್ದಾರೆ. ಹೌದು ಈ ಬಾರಿ ಮೆಗಾ ಆಕ್ಷನ್ ನಡೆದರೆ ಪಂಜಾಬ್ ತಂಡ ಗೇಲ್ ಅವರನ್ನು ಕೈಬಿಡಬೇಕು ಎಂದು ಆಕಾಶ್ ಛೋಪ್ರ ಹೇಳಿದ್ದಾರೆ. ಗೇಲ್‍ಗೆ 41 ವರ್ಷ ಆಗಿದ್ದು, ಈ ಬಾರಿ ಪಂಜಾಬ್ ತಂಡದಿದ ಕೈ ಬಿಡದೇ ಹೋದಲ್ಲಿ ಇನ್ನು ಮೂರು ವರ್ಷ ಅವರು ತಂಡದಲ್ಲಿ ಇರಬೇಕಾಗುತ್ತದೆ. ಹಾಗೇನಾದ್ರು ಅವರು ನಿವೃತ್ತಿಯನ್ನು ಘೋಷಿಸಿದ್ದೇ ಆದಲ್ಲಿ ಪಂಜಾಬ್ ತಂಡಕ್ಕೆ ನಷ್ಟವಾಗಲಿದೆ, ಹಾಗಾಗಿ ಗೇಲ್ ಅವರನ್ನು ಪಂಜಾಬ್ ತಂಡ ಮುಂದಿನ ಆಕ್ಷನ್‍ನಲ್ಲಿ ತಂಡದಿಂದ ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ.

ಇವರೇ ಟೀಂ ಇಂಡಿಯಾದ ಭವಿಷ್ಯದ ನಾಯಕ ಅಂತ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಭವಿಷ್ಯ ನುಡಿದಿದ್ದಾರೆ. ಶ್ರೇಯಸ್ ಐಯ್ಯರ್ ಟೀಂ ಇಂಡಿಯಾದ ಭವಿಷ್ಯದ ಕ್ಯಾಪ್ಟನ್ ಅಂತ ಕ್ಯಾರಿ ಹೇಳಿದ್ದಾರೆ. ಐಪಿಎಲ್‍ನಲ್ಲಿ ಮೊದಲ ಬಾರಿಗೆ ಶ್ರೇಯಸ್ ಐಯ್ಯರ್ ಅವರ ಸಾರಥ್ಯದಲ್ಲಿ ಫೈನಲ್ ಪ್ರವೇಶಿಸಿದ್ದು, ಅವರ ನಾಯಕತ್ವ ಎಲ್ಲರ ಗಮನ ಸೆಳೆದಿತ್ತು, ಇದೀಗ ಆಸ್ಟ್ರೇಲಿಯಾದ ಆಟಗಾರ ಅಲೆಕ್ಸ್ ಕ್ಯಾರಿ ಕೂಡ ಐಯ್ಯರ್ ಕ್ಯಾಪ್ಟನ್ ಶಿಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶ್ರೇಯಸ್ ಐಯ್ಯರ್ ಟೀಂ ಇಂಡಿಯಾದ ಭವಿಷ್ಯದ ನಾಯಕ ಆಗೋದ್ರಯಲ್ಲಿ ಯಾವುದೇ ಅನುಮಾನವಿಲ್ಲ ಅಂತ ಹೇಳಿದ್ದಾರೆ.

ಬ್ಯಾಟ್ಸಮನ್ ಅನ್ನು ಔಟ್ ಮಾಡಿ ಬೌಲರ್ ಮೈದಾನದಲ್ಲೇ ಬ್ಯಾಟ್ಸಮನ್ ಬಳಿ ಕ್ಷಮೆ ಕೇಳಿದ ಪ್ರಸಂಗ ಒಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದಿದೆ, ಸದ್ಯ ಪಾಕಿಸ್ತಾನ್ ಕ್ರಿಕೆಟ್ ಲೀಗ್ ನಡೆಯುತ್ತಿದ್ದು, ಹೌದು ಶಾಹೀದ್ ಅಫ್ರಿದಿಯವರನ್ನು ವೇಗದ ಬೌಲರ್ ಆದ ಹ್ಯಾರಿಸ್ ರೌಫ್ ಯಾರ್ಕರ್ ಹಾಕುವ ಮೂಲಕ ಡಕ್ ಔಟ್ ಮಾಡಿದ್ರು, ಸೊನ್ನೆಗೆ ಅಫ್ರಿದಿಯನ್ನು ಔಟ್ ಮಾಡಿದ ರೌಫ್ ನಂತರ ಮೈದಾನದಲ್ಲೇ ಐ ಆಮ್ ಸಾರಿ ಅಂತ ಅಫ್ರಿದಿ ಬಳಿ ಕ್ಷಮೆ ಕೇಳಿದ್ದಾರೆ. ಕೈ ಜೋಡಿಸಿ ರೌಫ್ ಕ್ರಿಕೆಟ್ ದಿಗ್ಗಜನಿಗೆ ಕ್ಷಮೆ ಕೇಳಿದ್ದು,ಅಫ್ರಿದಿ ಒಬ್ಬ ಹಿರಿಯ ಆಟಗಾರರನಾಗಿದ್ದು ಅವರನ್ನು ಗೌರವಿಸು ಸಲುವಾಗಿ ಹಾಗೇ ಮಾಡಿದ ಎಂದು ಪಂದ್ಯದ ಮುಗಿದ ನಂತರ ಹೇಳಿದ್ದಾರೆ.

ಇವತ್ತಿನ ಸ್ಫೋಟ್ಸ್ ಅಪ್‍ಡೇಟ್ ಬಗ್ಗೆ ನಿಮ್ಮ ಕಾಮೆಂಟ್ ಏನು.. ನಿಮಗೆ ಈ ಸುದ್ದಿಯಲ್ಲಿ ಇಷ್ಟವಾದ ಸುದ್ದಿ ಯಾವುದೇ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top