ಐಪಿಎಲ್‍ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ದೇವದತ್ ಪಡಿಕಲ್

ಐಪಿಎಲ್ 2020 ಹಬ್ಬ ಕ್ರಿಕೆಟ್ ಪ್ರೇಮಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ. ಲಾಖ್‍ಡೌನ್‍ನಿಂದ ಸ್ವಲ್ಪ ರಿಲೀಫ್ ನೀಡಿರೋ ಐಪಿಎಲ್‍ನಲ್ಲಿ ಪ್ರತಿತಂಡಗಳು ಉತ್ತಮ ಪ್ರದರ್ಶನ ನೀಡ್ತಾ ಇದ್ದಾರೆ. ಅದರಲ್ಲೂ ಆರ್‍ಸಿಬಿ ಈಗಾಗಲೇ ಅದ್ಭುತ ಪ್ರದರ್ಶನ ನೀಡೋ ಮೂಲಕ ಈ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ.

ಇನ್ನು ಆರ್‍ಸಿಬಿಯಲ್ಲಿ ಈ ಪ್ರಮುಖ ಆಕರ್ಷಣೆ ಅಂದ್ರೆ ಅದು ದೇವದತ್ ಪಡಿಕಲ್, ಐಪಿಎಲ್ 2020 ಮೂಲಕ ಐಪಿಎಲ್‍ಗೆ ಪಾದಾರ್ಪಣೆ ಮಾಡಿರೋ ದೇವದತ್ ಪಡಿಕಲ್ ಪಾದಾರ್ಪಣೆ ಪಂದ್ಯದಲ್ಲೇ ಅರ್ಧ ಶಕತ ಬಾರಿಸೋ ಮೂಲಕ ದಾಖಲೆ ಬರೆಯೋ ಮೂಲಕ ತಾನೋಬ್ಬ ಉತ್ತಮ ಬ್ಯಾಟ್ಸ್‍ಮನ್ ಅನ್ನೋ ಭರವಸೆಯನ್ನು ಮೂಡಿಸಿದ್ರು, ಇನ್ನು ಎರಡನೇ ಪಂದ್ಯದಲ್ಲಿ ಕೇವಲ 1ರನ್‍ಗೆ ಔಟ್ ಆಗಿದ್ರು, ಇನ್ನು ಮೂರನೇ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ 54 ರನ್ ಬಾರಿಸೋ ಮೂಲಕ ಎರಡನೇ ಅರ್ಧ ಶತಕ ಬಾರಿಸಿದ್ದ ದೇವದತ್, ಇಂದು ರಾಜಸ್ತಾನ್ ರಾಯಲ್ಸ್ ವಿರುದ್ಧ ಮತ್ತೊಂದು ಅರ್ಧ ಶತಕ ಬಾರಿಸಿದ ದೇವದತ್ ಪಡಿಕಲ್ ತಂಡದ ಗೆಲುವಿಗೆ ಪ್ರಮುಖ ಕಾರಣಕರ್ತರಾಗಿದ್ದು ಆ ಮೂಲಕ ಐಪಿಎಲ್‍ನಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧ ಶತಕ ಬಾರಿಸಿದ ಮೊದಲ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈಗಾಗಲೇ ದೇವದತ್ ಪಡಿಕಲ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲೂ ಮುಷ್ತಕ್ ಅಲಿ ಮತ್ತು ವಿಜಯ್ ಹಜಾರೆ ಟೂರ್ನಿಯಲ್ಲೂ ತಾವು ಆಡಿದ ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿದ್ರು, ಇನ್ನು ಐಪಿಎಲ್‍ನ ಮೊದಲ ಪಂದ್ಯದಲ್ಲೂ ಅರ್ಧ ಶತಕ ಬಾರಿಸಿ ದಾಖಲೆ ಬರೆದಿದ್ರು, ಇದೀಗ ಐಪಿಎಲ್‍ನಲ್ಲಿ ಆಡಿದ ಮೊದಲ ನಾಲ್ಕು ಪಂದ್ಯದಲ್ಲಿ ಮೂರು ಅರ್ಧ ಶತಕ ಬಾರಿಸುವ ಈ ದಾಖಲೆ ಬರೆದ ಮೊದಲ ಆಟಗಾರರನಾಗಿ ಹೊರಹೊಮ್ಮಿದ್ದಾರೆ. ಇನ್ನು ಈಗಾಗಲೇ ಪಡಿಕಲ್ ತಮ್ಮ ಬ್ಯಾಟಿಂಗ್ ಶೈಲಿಯ ಮೂಲಕ ಎಲ್ಲರ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಓಪನಿಂಗ್ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‍ಮನ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕ್ರಿಕೆಟ್ ತಜ್ಞರು ಹೇಳುತ್ತಿದ್ದಾರೆ. ಈ ವಿಚಾರವಾಗಿ ನೀವ್ ಏನ್ ಹೇಳ್ತೀರಾ.. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದಲ್ಲಿ ದೇವದತ್ ಪಡಿಕಲ್ ಖಾಯಂ ಸ್ಥಾನ ಪಡೆದುಕೊಳ್ತಾರ ಕಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top