ಐಪಿಎಲ್‍ನಲ್ಲಿ ಶುರುವಾಯ್ತು ಗಡ್ಡ ಬೋಳಿಸೋ ಚಾಲೆಂಜ್

ಐಪಿಎಲ್ ಕ್ರಿಕೆಟ್ ಹಬ್ಬ ದಿನೇ ದಿನೇ ರೋಚಕವಾಗಿದ್ದು, ಈಗಾಗಲೇ ಎಲ್ಲಾ ತಂಡಗಳು ತಮ್ಮ ತಮ್ಮ ಗೆಲುವಿಗಾಗಿ ಸಖತ್ ಪೈಪೋಟಿ ನೀಡ್ತಾ ಇವೆ, ಪ್ರತಿ ಪಂದ್ಯವೂ ಕುತೂಹಲಕರವಾಗಿದ್ದು, ಪ್ರತಿ ತಂಡಗಳು ಎದುರಾಳಿ ತಂಡಕ್ಕೆ ಸಖತ್ ಚಾಲೆಂಜ್ ನೀಡ್ತಿವೆ. ಆದ್ರೆ ಈ ಬಾರಿ ಐಪಿಎಲ್‍ನಲ್ಲಿ ಆಟಗಾರರು ಮ್ಯಾಚ್‍ನಲ್ಲಿ ಮಾತ್ರ ಚಾಲೆಂಜ್ ಮಾಡ್ತಿಲ್ಲ ಬದಲಿಗೆ ಮ್ಯಾಚ್ ಆಚೆಗೂ ಒಬ್ಬರಿಗೊಬ್ಬರು ಚಾಲೆಂಜ್ ಮಾಡಿಕೊಳ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಕಪಲ್ ಚಾಲೆಂಜ್, ಐಸ್ ಕ್ಯೂಬ್ ಚಾಲೆಂಜ್, ಚಿತ್ರವಿಚಿತ್ರ ಚಾಲೆಂಜ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರುತ್ತೆ, ಇದೀಗ ಐಪಿಎಲ್‍ನಲ್ಲೂ ಒಂದು ಚಾಲೆಂಜ್ ಟ್ರೆಂಡ್ ಶುರುವಾಗಿದೆ.

ಅದುವೇ ದಿ ಬಿಯರ್ಡ್ ಚಾಲೆಂಜ್ ಸದ್ಯ ಐಪಿಎಲ್‍ನಲ್ಲಿ ದೊಡ್ಡ ಸೌಂಡ್ ಮಾಡ್ತಾ ಇದೆ. ಈ ಚಾಲೆಂಜ್ ಐಪಿಎಲ್ ಆಟಗಾರ ಇನ್ನೊಬ್ಬ ಆಟಗಾರನಿಗೆ ಕೊಡುವ ಮೂಲಕ ಸಖತ್ ಎಂಜಾಯ್ ಮಾಡ್ತಿದ್ದಾರೆ. ಈ ದಿ ಬಿಯರ್ಡ್ ಚಾಲೆಂಜ್ ಮೊದಲು ಆರಂಭಿಸಿದ್ದು ಮುಂಬೈ ತಂಡದ ಹೊಡಿಬಡಿ ದಾಂಡಿಗ ಹಾರ್ದಿಕ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ತಮ್ಮ ಮುಂಬೈತಂಡದ ಸಹ ಆಟಗಾರ ಕೀರನ್ ಪೊಲಾರ್ಡ್‍ಗೆ ಈ ಚಾಲೆಂಜ್ ಹಾಕಿದ್ದರು, ಐಪಿಎಲ್ ಶುರುವಿನಲ್ಲಿ ಗಡ್ಡ ಬಿಟ್ಟುಕೊಂಡು ಮೈದಾನಕ್ಕೆ ಇಳಿದಿದ್ರು, ಆದ್ರೆ ಕಳೆದ ಪಂದ್ಯದಲ್ಲಿ ಪೊಲಾರ್ಡ್ ಗಡ್ಡ ಇಲ್ಲದೇ ಮೈದಾನಕ್ಕೆ ಇಳಿದು ಹಾರ್ದಿಕ್ ಪಾಂಡ್ಯ ಚಾಲೆಂಜ್‍ನ ಸ್ವೀಕರಿಸಿದ್ರು, ನಂತರ ಪೊಲಾರ್ಡ್ ಬಿಯರ್ಡ್ ಚಾಲೆಂಜ್ ಅನ್ನು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ನೀಡಿದ್ರು, ಇನ್ನು ಕಾರ್ತಿಕ್ ಕೂಡ ಐಪಿಎಲ್ ಶುರುವಿನಲ್ಲಿ ಗಡ್ಡ ಬಿಟ್ಟುಕೊಂಡು ಮೈದಾನಕ್ಕೆ ಇಳಿದಿದ್ರು, ಆದ್ರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಕ್ಲೀನ್ ಶೇವ್ ಮಾಡಿಕೊಂಡು ಮೈದಾನಕ್ಕೆ ಇಳಿಯುವ ಮೂಲಕ ಪೊಲಾರ್ಡ್ ನೀಡಿದ್ದ ಚಾಲೆಂಜ್ ಅನ್ನು ಸ್ವೀಕಾರ ಮಾಡಿದ್ರು.

ಜೊತೆಗೆ ತಾವು ಗಡ್ಡ ತೆಗೆದು ಹೊಸ ಸ್ಟೈಲ್‍ನ ವಿಡಿಯೋವನ್ನು ಮಾಡಿ ತಮ್ಮ ಇನ್ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿ , ಹೊಸ ಸೀಸನ್ ಹೊಸ ಲೆವೆಲಿಗೆ ಹೋಗುವ ಸಮಯ ಇದು ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಪೊಲಾರ್ಡ್ ಚಾಲೆಂಜ್ ಅನ್ನು ಪೂರ್ತಿಗೊಳಿಸಿದ್ದಾರೆ. ಆದ್ರೆ ಸದ್ಯ ದಿನೇಶ್ ಕಾರ್ತಿಕ್ ಈ ಚಾಲೆಂಜ್ ಅನ್ನು ಯಾರಿಗೆ ನೀಡಿಲ್ಲ, ಆದ್ರೆ ಮುಂದೆ ವಿರಾಟ್,ಕೇನ್ ವಿಲಿಯಮ್ಸ್,ಹಾರ್ದಿಕ್ ಪಾಂಡ್ಯಗೂ ಬಂದ್ರು ಅವರು ಸ್ವೀಕಾರ ಮಾಡ್ತಾರ ನೋಡಬೇಕು.

ನಿಮ್ಮ ಪ್ರಕಾರ ಆಟಗಾರರು ಯಾವ ಸ್ಟೈಲ್‍ನಲ್ಲಿ ಚೆನ್ನಾಗಿ ಕಾಣಿಸ್ತಾರೆ ವಿತ್ ಬಿಯರ್ಡ್, ವಿತೌಟ್ ಬಿಯರ್ಡ್ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top