ಐಪಿಎಲ್‍ನಲ್ಲಿ ನಾಯಕನಾಗಿ ಧೋನಿ ದಾಖಲೆ ಮುರಿದ ವಿರಾಟ್

ಐಪಿಎಲ್ 2020ಯಲ್ಲಿ ಆರ್‍ಸಿಬಿ ನಿನ್ನೆ ಪಂಜಾಬ್ ತಂಡದ ವಿರುದ್ಧ ಸೋಲು ಕಾಣುವ ಮೂಲಕ ವಿರಾಟ್ ಕೊಹ್ಲಿ ತಮ್ಮ ನಾಯಕತ್ವದ ಬಗ್ಗೆ ಸಖತ್ ಟೀಕೆಗಳನ್ನು ಕೇಳುತ್ತಿದ್ದಾರೆ. ಕೆಲವ್ರು ಕೊಹ್ಲಿ ನಾಯಕತ್ವಕ್ಕೆ ಸೂಕ್ತವಾದ ವ್ಯಕ್ತಿಯಲ್ಲ ಅಂದ್ರೆ, ಇನ್ನು ಕೆಲವ್ರು ವಿರಾಟ್ ನಾಯಕತ್ವದ ಲೆಕ್ಕಾಚಾರದಲ್ಲಿ ಎಡವುತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಅದೇ ರೀತಿ ವಿರಾಟ್ ಕೊಹ್ಲಿ ಕೂಡ ನಿನ್ನೆಯ ಮ್ಯಾಚ್‍ನಲ್ಲಿ ಹಾಕಿದ್ದ ಲೆಕ್ಕಾಚಾರಗಳು ಉಲ್ಟಾ ಆಗಿ, ಪಂದ್ಯವನ್ನು ಕೈಚೆಲ್ಲಿ ಕೂರುವ ಪರಿಸ್ಥಿತಿ ಉಂಟಾಯಿತು.

ಇನ್ನು ವಿರಾಟ್ ಆರ್‍ಸಿಬಿಯ ನಾಯಕನಾಗಿ ಆಡುವ ಬದಲು ಒಬ್ಬ ಉತ್ತಮ ತಂಡದ ಆಟಗಾರನಾಗಿ ಆಡಿದ್ರೆ ಉತ್ತಮ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಆದ್ರೆ ನಿನ್ನೆ ಪಂದ್ಯದಲ್ಲಿ ಸೋಲಿನ ನಡುವೆಯೂ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆಯನ್ನು ಮಾಡಿದ್ದಾರೆ.

ಆ ಮೂಲಕ ನಾಯಕನಾಗಿ ಧೋನಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಹೌದು ವಿರಾಟ್ ಕೊಹ್ಲಿ ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ನಾಯಕನಾಗಿ 2013ರಿಂದ ತಂಡವನ್ನು ಮುನ್ನೆಡೆಸುತ್ತಿದ್ದು, ಇದೀಗ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ನಿನ್ನೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 48ರನ್ ಬಾರಿಸುವ ಮೂಲಕ ಐಪಿಎಲ್‍ನಲ್ಲಿ ತಂಡದ ಪರ ನಾಯಕನಾಗಿ ಅತಿಹೆಚ್ಚು ರನ್‍ಗಳಿಸಿದ ಹೆಗ್ಗಳಿಕೆ ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಹೌದು ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿರೋ ಮೊದಲ ಆಟಗಾರನ ಹೆಸರು ಧೋನಿಯ ಬಳಿ ಇತ್ತು, ಆದ್ರೆ ನಿನ್ನೆ ಪಂದ್ಯದಲ್ಲಿ ವಿರಾಟ್ 48ರನ್ ಸಿಡಿಸುವ ಮೂಲಕ 4314 ರನ್‍ನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 4275ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದು, ಕೋಲ್ಕತ್ತಾ ನೈಟ್‍ರೈಡರ್ಸ್ ತಂಡ ಮಾಜಿ ನಾಯಕ ಗೌತಮ್ ಗಂಭೀರ್ 3518ರನ್‍ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 2909ರನ್‍ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಆ ಮೂಲಕ ನಾಯಕನಾಗಿ ವಿರಾಟ್ ಕೊಹ್ಲಿ ಆರ್‍ಸಿಬಿ ಪರ ಅತಿಹೆಚ್ಚು ರನ್ ಹೊಡೆದ ಆಟಗಾರನಾಗಿದ್ದು, ನಿನ್ನೆಯ ಪಂದ್ಯದ ಜೊತೆಯಲ್ಲಿ 200 ಲೀಗ್ ಪಂದ್ಯಗಳನ್ನು ಆಡಿದ ಆರ್‍ಸಿಬಿ ಆಟಗಾರನಾಗಿಯೂ ವಿರಾಟ್ ಹೊರಹೊಮ್ಮಿದ್ದಾರೆ.

ಒಟ್ಟಿನಲ್ಲಿ ವಿರಾಟ್ ತಮ್ಮ ನಾಯಕತ್ವದಲ್ಲಿ ಕೆಲವೊಮ್ಮೆ ಎಡವುತ್ತಿದ್ದರು, ತಂಡಕ್ಕೆ ರನ್‍ಗಳಿಸಿಕೊಡುವುದರಲ್ಲಿ ಮಾತ್ರ ತಮ್ಮ ಲೆಕ್ಕಾಚಾರವನ್ನು ಮಿಸ್ ಮಾಡಿಲ್ಲ. ನಿಮ್ಮ ಪ್ರಕಾರ ಆರ್‍ಸಿಬಿ ತಂಡದ ನಾಯಕನಾಗಿ ವಿರಾಟ್ ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿದ್ದಾರ.ನಾಯಕತ್ವ ಆರ್‍ಸಿಬಿ ಬೇರೆಯವರಿಗೆ ವಹಿಸಬೇಕಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top