
ಐಪಿಎಲ್ 2020ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅಷ್ಟೇನೂ ಉತ್ತಮವಾದ ಪ್ರದರ್ಶನವನ್ನು ನೀಡುತ್ತಿಲ್ಲ, ಇನ್ನು ಭಾರತದಲ್ಲಿ ಕ್ರಿಕೆಟ್ ಅಂದ್ರೆ ಹುಚ್ಚು ಅಭಿಮಾನ ಹೊಂದಿರುವ ಜನರಿದ್ದಾರೆ. ತಂಡ ಸೋತರೇ ತಂಡದ ನಾಯಕನಿಂದ ಹಿಡಿದು ಎಲ್ಲರನ್ನೂ ಟೀಕಿಸೋ ಕೆಲಸ ಮಾಡ್ತಾರೆ. ಕೆಲವೊಮ್ಮೆ ಆಟಗಾರರನ್ನು ಟ್ರೋಲ್ ಮಾಡುವ ಜೊತೆಯಲ್ಲಿ ಆಟಗಾರರ ಗೆಳತಿ,ಹೆಂಡತಿ ಫ್ಯಾಮಿಲಿಯನ್ನು ಟ್ರೋಲ್ ಮಾಡುತ್ತಾರೆ. ಇದೀಗ ಚೆನ್ನೈ ಸತತ ಸೋಲನ್ನು ಕಾಣುತ್ತಿರೋದ್ರಿಂದ ಇದೀಗ ಧೋನಿಯ 5 ವರ್ಷದ ಮಗಳು ಝಿಯಾಗೆ ಅತ್ಯಾಚಾರ ಬೆದರಿಕೆಯನ್ನು ಕ್ರಿಕೆಟ್ ಹುಚ್ಚ ಹಾಕಿರೋ ಅಸಹ್ಯವಾದ ಘಟನೆ ನಡೆದಿದೆ.ಕೊಲ್ಕತ್ತಾ ನೈಟ್ರೈಡರ್ಸ್ ವಿರುದ್ಧ ಪಂದ್ಯವನ್ನು ಧೋನಿ ಪಡೆ ಸೋತ ನಂತರ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಧೋನಿ ಮಗಳು ಝಿಯಾಳನ್ನು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಈ ವಿಷಯವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪುಟ್ಟ ಮಗುವನ್ನು ಅಶ್ಲೀಲವಾಗಿ ನಿಂದಿಸುವುದು ಎಷ್ಟು ಸರಿ, ಆತನಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

