ಐಪಿಎಲ್‌ 2021ನಲ್ಲಿ ಆರ್‌ಸಿಬಿ ಪರ ಸುರೇಶ್‌ ರೈನಾ ಕಣಕ್ಕಿಳಿಯಲಿದ್ದಾರಾ

ಐಪಿಎಲ್‌ 2021ಗೆ ಆರ್‌ಸಿಬಿ ಈಗಾಗಲೇ ತಯಾರಿಯನ್ನು ನಡೆಸುತ್ತಿದೆ, ಈ ಬಾರಿ ಮೆಗಾ ಆಕ್ಷನ್‌ ನಡೆಯೋದ್ರಿಂದಾಗಿ ಆರ್‌ಸಿಬಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಕಾರ್ಯಪ್ರೌರುತ್ತಿಯಾಗಿದೆ, ಹೀಗಿರಬೇಕಾದ್ರೆ ಇದೀಗ ಒಂದು ಮಾತು ಸದ್ಯ ಕೇಳಿ ಬರ್ತಾ ಇದೆ. ಹೌದು 2020ರ ಐಪಿಎಲ್‌ನಲ್ಲಿ ಚೆನ್ನೈ ತಂಡದಿಂದ ಹೊರಬಂದಿದ್ದ ಮಿಸ್ಟರ್‌ ಐಪಿಎಲ್‌ ಸುರೇಶ್‌ ರೈನಾ ಸದ್ಯ ದೇಶೀ ಕ್ರಿಕೆಟ್‌ನಲ್ಲಿ ಆಡುವುದಾಗಿ ಹೇಳಿದ್ದು, ಜೊತೆಗೆ ಮುಂದಿನ ಐಪಿಎಲ್‌ಗೆ ಲಭ್ಯ ಅನ್ನೋ ಮಾತನ್ನು ಹೇಳಿದ್ದಾರೆ. ಸದ್ಯ ಸುರೇಶ್‌ ರೈನಾ ಚೆನ್ನೈ ಸೂಪರ್‌ ಕಿಂಗ್ಸ್‌ ಜೊತೆಗಿನ ಒಪ್ಪಂದ ಕಡಿತವಾಗಿದ್ದು, ಮುಂದಿನ ಐಪಿಎಲ್‌ನ ಆಕ್ಷನ್‌ನಲ್ಲಿ ಲಭ್ಯರಿರುತ್ತಾರೆ. ಹೀಗಾಗಿ ಆಕ್ಷನ್‌ನಲ್ಲಿ ಆರ್‌ಸಿಬಿ ಸುರೇಶ್‌ ರೈನಾ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿದೆ. ಮಿಡಲ್‌ ಆರ್ಡರ್‌ನಲ್ಲಿ ಬ್ಯಾಟಿಂಗ್‌ ಬಲವನ್ನು ಆರ್‌ಸಿಬಿ ಹೆಚ್ಚಿಸಿಕೊಳ್ಳಬೇಕಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಐಪಿಎಲ್‌ಗೆ ಆರ್‌ಸಿಬಿ ಬಲ ಹೆಚ್ಚಿಸಲು ಸುರೇಶ್‌ ರೈನಾ ಸೂಕ್ತವ್ಯಕ್ತಿಯಾಗಿದ್ದು, ಈ ನಿಟ್ಟಿನಲ್ಲಿ ಇದೀಗ ಆರ್‌ಸಿಬಿ ಪ್ರಾಂಚೈಸಿಗಳು ಸುರೇಶ್‌ ರೈನಾ ಮೇಲೆ ಹೆಚ್ಚು ಕಣ್ಣಿಟ್ಟಿದ್ದಾರೆ. ಒಂದು ವೇಳೆ ಸುರೇಶ್‌ ರೈನಾ ಮೆಗಾ ಆಕ್ಷನ್‌ನಲ್ಲಿ ಆರ್‌ಸಿಬಿ ಪಾಲಾದ್ರೆ ಪಕ್ಕಾ ಆರ್‌ಸಿಬಿಗೆ ಬ್ಯಾಟಿಂಗ್‌ ಜೊತೆಯಲ್ಲಿ ಫಿಲ್ಡಿಂಗ್‌ ಮತ್ತು ಬೌಲಿಂಗ್‌ನಲ್ಲೂ ಬಲ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದರ ಜೊತೆಯಲ್ಲಿ ಆರ್‌ಸಿಬಿ ಬೌಲಿಂಗ್‌ ವಿಭಾಗದಲ್ಲೂ ಹೆಚ್ಚು ಗಮನ ಹರಿಸಬೇಕಾಗಿರೋದ್ರಿಂದ ಈ ಬಾರಿಯ ಮೆಗಾ ಆಕ್ಷನ್‌ನಲ್ಲಿ ಉತ್ತಮ ಮೊತ್ತಕ್ಕೆ ಬೌಲರ್‌ಗಳನ್ನು ಖರೀದಿಸುವ ಲೆಕ್ಕಾಚಾರದಲ್ಲೂ ಆರ್‌ಸಿಬಿ ಇದೆ. ಹಾಗೇ ನೋಡಿದ್ರೆ ಆರ್‌ಸಿಬಿಗೆ ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಚಲ್‌ ಸ್ಟ್ರಾರ್ಕ್‌ ಮೇಲೆ ಹೆಚ್ಚು ಒಲವಿದ್ದು, ಕಳೆದ ಕೆಲವು ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಸ್ಟ್ರಾರ್ಕ್‌ ಉತ್ತಮ ಪ್ರದರ್ಶನವನ್ನು ತೋರಿದ್ರು, ಇನ್ನು ಇವರ ಜೊತೆಯಲ್ಲಿ ನ್ಯೂಜಿಲೆಂಡ್‌ನ ಈ ವೇಗದ ಬೌಲರ್‌ ಮೇಲೂ ಆರ್‌ಸಿಬಿ ಇದೀಗ ಕಣ್ಣಿಟ್ಟಿದೆ. ಹೌದು ನ್ಯೂಜಿಲೆಂಡ್‌ನ ಬೌಲರ್‌ 6 ಅಡಿಯ ವೇಗಿ ಕೇಯ್ಲ್‌ ಜೇಮಿಸನ್‌ ಮೇಲು ಹೆಚ್ಚು ಕಣ್ಣಿಟ್ಟಿದೆ. ಸದ್ಯ ವಿಂಡೀಸ್‌ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಈ ವೇಗಿ ಅದ್ಭುತ ಪ್ರದರ್ಶನವನ್ನು ತೋರಿದ್ದು, ತಂಡ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದಾರೆ. ಈ ವೇಗಿ ಮೇಲೆ ಆರ್‌ಸಿಬಿ ಮುಂದಿನಾ ಐಪಿಎಲ್‌ ಆಕ್ಷನ್‌ನಲ್ಲಿ ಖರೀದಿ ಮಾಡಿದ್ದೇ ಆದಲ್ಲಿ ತಂಡಕ್ಕೆ ಪವರ್‌ ಪ್ಲೇನಲ್ಲಿ ಒಬ್ಬ ಫವರ್‌ ಫುಲ್‌ ಬೌಲರ್‌ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ನಿಮ್ಮ ಪ್ರಕಾರ ಆರ್‌ಸಿಬಿ ಮುಂದಿನ ಐಪಿಎಲ್‌ನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿ ಮಾಡಬೇಕು, ಸುರೇಶ್‌ ರೈನಾ ಆರ್‌ಸಿಬಿ ತಂಡವನ್ನು ಸೇರಿಕೊಂಡ್ರೆ ಬ್ಯಾಟಿಂಗ್‌ ಬಲ ಹೇಗಿರಲಿದೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top