ಐಪಿಎಲ್‌ ಹಬ್ಬ ಮುಕ್ತಾಯಕ್ಕೂ ಮುಂಚೆ ಮಿನಿ ಐಪಿಎಲ್‌ ಶುರು

ಐಪಿಎಲ್‌ 2020 ಪ್ಲೇ ಆಫ್‌ ಹಂತಕ್ಕೆ ತಲುಪಲಿದ್ದು, ಈ ಬಾರಿ ಯಾರು ಕಪ್‌ ಗೆಲ್ಲಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಪ್ರತಿ ತಂಡಗಳು ಪ್ಲೇ ಆಫ್‌ಗಾಗಿ ಸಖತ್‌ ಫೈಟ್‌ ನೀಡ್ತಾ ಇದ್ದು, ಸುದೀರ್ಘ ಐಪಿಎಲ್‌ ಹಬ್ಬಕ್ಕೆ ತೆರೆ ಬೀಳಲು ಇನ್ನು ಕೆಲವು ದಿನಗಳು ಬಾಕಿ ಇದೆ. ಐಪಿಎಲ್‌ ಕೊನೆಯ ಹಂತ ತಲುಪುತ್ತಿದ್ದಂತೆ , ಇನ್ನೊಂದು ಮಿಸಿ ಐಪಿಎಲ್‌ ಶುರುವಾಗಲಿದೆ. ಹೌದು ಈ ಬಾರಿ ಎಂದಿನಂತೆ ʻವಿಮೆನ್ಸ್‌ ಟಿ 20 ಚಾಲೆಂಜ್‌ʼ ನಡೆಯಲಿದೆ. ನವೆಂಬರ್‌ 4 ರಿಂದ 9ರ ವರೆಗೆ ಮಿಸಿ ಐಪಿಎಲ್‌ ನಡೆಯಲಿದ್ದು, ಭಾರತದ ಪ್ರಮುಖ 30 ಆಟಗಾರ್ತಿಯರು ಈ ʻಮಿಮೆನ್ಸ್‌ ಟಿ20 ಚಾಲೆಂಜ್‌ನಲ್ಲಿ ʼಪಾಲ್ಗೊಳಲಿದ್ದಾರೆ. ಈಗಾಗಲೇ ಯುಎಇಗೆ ಹರ್ಮನ್‌ ಪ್ರೀತ್‌ ಕೌರ್‌,ಸ್ಮೃತಿ ಮಂದಾನ ಹಾಗೂ ಶೆಫಾಲಿ ವರ್ಮ ಸೇರಿದಂತೆ ಆಟಗಾರ್ತಿಯರು ದುಬೈಗೆ ತೆರಳಿದ್ದಾರೆ.

ನವೆಂಬರ್‌ 4 ರಿಂದ ನವೆಂಬರ್‌ 9ರವರೆಗೆ ಶಾರ್ಜಾ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದ್ದು, ಈ ಮಿನಿ ಐಪಿಎಲ್‌ನಲ್ಲಿ ಕೇವಲ ಭಾರತೀಯ ಆಟಗಾರ್ತಿಯರಲ್ಲದೇ ಪ್ರಮುಖ ವಿದೇಶಿ ಆಟಗಾರ್ತಿಯರು ಪಾಲ್ಗೊಳಲಿದ್ದಾರೆ. ಇನ್ನು ನಿಯಮದ ಪ್ರಕಾರ ದುಬೈ ತಲುಪಿರೋ ಆಟಗಾರ್ತಿಯರು ಆರು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ. ಇದರ ಜೊತೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾಗಿ , ನಂತರ ಬಯೋ ಬಬಲ್‌ಗೆ ಎಲ್ಲಾ ಆಟಗಾರ್ತಿಯರು ಸೇರಿಕೊಳ್ಳಲಿದ್ದಾರೆ.

ಇನ್ನು ಈ ಮಿನಿ ಐಪಿಎಲ್‌ನಲ್ಲಿ ಮೂರು ಟೀಂಗಳಿರಲಿದ್ದು. ಸೂಪರ್‌ನೋವಾಸ್‌, ಟ್ರೈಬ್ಲೇಸರ್ಸ್‌,ವೆಲಾಸಿಟಿ ತಂಡಗಳು ʻವಿಮೆನ್‌ ಟಿ 20 ಚಾಲೆಂಜ್‌ನಲ್ಲಿ ಸೆಣಸಾಡಲಿವೆ.

ವೆಲಾಸಿಟಿ ತಂಡವನ್ನು ಮಹಿಳಾ ಕ್ರಿಕೆಟ್‌ ದಿಗ್ಗಜೆ ಮಿಥಾಲಿ ರಾಜ್‌ ಮುನ್ನೆಡೆಸಿದ್ರೆ, ಸೂಪರ್‌ ನೋವಾಸ್‌ ತಂಡವನ್ನು ಹರ್ಮನ್‌ ಪ್ರೀತ್‌ ಕೌರ್‌ ಮುನ್ನಡೆಸುತ್ತಿದ್ದಾರೆ. ಇನ್ನು ಟ್ರೈಬ್ಲೇಸರ್ಸ್‌ ತಂಡವನ್ನು ಕ್ರಿಕೆಟ್‌ ಜಗತ್ತಿನ ಕ್ರಷ್‌ ಸ್ಮೃತಿ ಮಂಧಾನ ಮುನ್ನಡೆಸಲಿದ್ದಾರೆ.

ಐಪಿಎಲ್‌ ಹಬ್ಬ ಕೊನೆ ಹಂತ ತಲುಪುತ್ತಿದ್ದಂತೆ ಇತ್ತ ಮಿನಿ ಐಪಿಎಲ್‌ ಶುರುವಾಗಲಿದ್ದು, ಕ್ರಿಕೆಟ್‌ ಪ್ರಿಯಗೆ ಮತ್ತಷ್ಟು ಮನೋರಂಜನೆ ನೀಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಮೆನ್‌ ಟಿ20 ಚಾಲೆಂಜ್‌ನಲ್ಲಿ ನಿಮ್ಮ ಫೇವರೆಟ್‌ ತಂಡಯಾವುದು . ನಿಮ್ಮ ಫೇವರೆಟ್‌ ಪ್ಲೇಯರ್‌ ಯಾರು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top