ಐಪಿಎಲ್‌ ಮೊದಲ ಮ್ಯಾಚ್‌ ಮುಂಬೈ ಮತ್ತು ಆರ್‌ಸಿಬಿ ನಡುವೆ..?

ಐಪಿಎಲ್‌ ಮ್ಯಾಚ್‌ ವೇಳಾಪಟ್ಟಿ, ಬಿಡುಗಡೆಗೆ ಬಿಸಿಸಿಐ ಬಿಳಂಬ ಮಾಡುತ್ತಿದ್ದು, ಇತ್ತ ಐಪಿಎಲ್‌ ಮೊದಲ ಪಂದ್ಯ ಯಾರ ನಡುವೆ ನಡೆಯಲಿದೆ ಅನ್ನೋ ಕುತೂಹಲವೂ ಹೆಚ್ಚಿತ್ತು, ಒಂದು ಮೂಲದ ಪ್ರಕಾರ ಚೆನ್ನೈ ಮತ್ತು ಮುಂಬೈ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ ಎಂಬ ಮಾಹಿತಿ ಇತ್ತು, ಆದ್ರೀ ಚೆನ್ನೈ ಟೀಂನಲ್ಲಿ ಕೊರೋನಾ ಕೇಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಚೆನ್ನೈನ ಮೊದಲ ಕೆಲವು ಪಂದ್ಯಗಳು ವಿಳಂಬವಾಗಿ ಶುರುವಾಗಲಿದ್ದು, ಇದೀಗ ಮೊದಲ ಹೈವೋಲ್ಡಾಜ್‌ ಪಂದ್ಯ ಯಾರ ನಡುವೆ ನಡೆಯಲಿದೆ ಎಂದು ಟಾಕ್‌ ಶುರುವಾಗಿದೆ. ಹೀಗಿರುವಾಗಲೇ ಐಪಿಎಲ್‌ ೨೦೨೦ ಮೊದಲ ಪಂದ್ಯ ಆರ್‌ಸಿಬಿ ಮತ್ತು ಮುಂಬೈ ನಡುವೆ ನಡೆಯಲಿದೆ ಅನ್ನೋ ಮಾಹಿತಿ ಈಗ ಹೊರ ಬರ್ತಾ ಇದೆ. ಇತ್ತ ಪ್ರಾಂಚೈಸಿಗಳು ಬಿಸಿಸಿಐ ಮ್ಯಾಚ್‌ ವೇಳಾ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಿ ಎಂದು ಬಿಸಿಸಿಐಗೆ ಒತ್ತಾಯವನ್ನು ಸಹ ಹೇರಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top