ಐಪಿಎಲ್‌ ಬಹುಮಾನ ಮೊತ್ತ ಶೇ ೫೦ರಷ್ಟು ಕಡಿತ

ಮಿಲಿಯನ್‌ ಡಾಲರ್‌ ಟೂರ್ನಿ ಐಪಿಎಲ್‌ ಈ ಬಾರಿ ಪ್ರಾಂಚೈಸಿಗಳಿಗೆ ಐಪಿಎಲ್‌ಗೂ ಮುಂಚೆ ಶಾಕ್‌ ನೀಡಿದೆ.. ಬಿಸಿಸಿಐ ಪ್ರತಿ ಐಪಿಎಲ್‌ನಲ್ಲೂ ನೀಡುತ್ತಿದ್ದ ಬಹುಮಾನ ಮೊತ್ತವನ್ನು ಈ ಬಾರಿಯ ಐಪಿಎಲ್‌ ೨೦೨೦ಯಲ್ಲಿ ಶೇ 50ರಷ್ಟು ಕಡಿತಗೊಳಿಸಲಾಗಿದೆ ಎಂದು ಸುತ್ತೋಲೆಯನ್ನು ಹೊರಡಿಸಿದೆ. ಕೋವಿಡ್‌ ೧೯ ಸಂದಿಗ್ಧ ಪರಿಸ್ಥಿತಿಯಲ್ಲಿ ಬಹುಮಾನ ಮೊತ್ತವನ್ನು ಕಡಿತಗೊಳಿಸಲು ಬಿಸಿಸಿಐ ನಿರ್ಧರಿಸಿದೆ.

2019ರಲ್ಲಿ ಐಪಿಎಲ್‌ ಟ್ರೋಫಿ ಗೆದ್ದಿದ್ದ ತಂಡಕ್ಕೆ ೨೦ ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತಿತ್ತು, ಆದ್ರೆ ಈ ಬಾರಿ ಆ ಮೊತ್ತವನ್ನು ಶೇ 50ರಷ್ಟು ಕಡಿತ ಗೊಳಿಸಿ ೧೦ ಕೋಟಿಗೆ ಇಳಿಸಲಾಗಿದೆ. ಇನ್ನು ರನ್ನರ್‌ ಅಪ್‌ ತಂಡಕ್ಕೆ 12.5 ಕೋಟಿ ಬದಲಾಗಿ 6.25 ಕೋಟಿ ಮೊತ್ತವನ್ನು ನೀಡಲಾಗುವುದು ಎಂದು ಬಿಸಿಸಿಐ ಸೂಚಿಸಿದೆ.

ಇನ್ನು ಪ್ಲೇ ಆಫ್‌ನಲ್ಲಿ ಸೋತ ತಂಡಕ್ಕೆ 4.3ಕೋಟಿ ನೀಡಲಾಗುವುದು ಎಂದು ತಿಳಿದು ಬಂದಿದೆ ಇನ್ನು ಎಲ್ಲಾ ಪ್ರಾಂಚೈಸಿಗಳು ಹಣಕಾಸಿನ ವಿಚಾರದಲ್ಲಿ ಉತ್ತಮ ಸ್ಥಿತಿಯಲ್ಲಿವೆ . ಅವರ ಆದಾಯವನ್ನು ಹೆಚ್ಚಿಸಿಕೊಳಲು ಪ್ರಾಯೋಜಕತ್ವದಂತಹ ಅನೇಕ ಮಾರ್ಗಗಳಿ, ಹೀಗಾಗಿ ಬಹುಮಾನ ಹಣವನ್ನು ಕಡಿತ ಕೊಳಿಸಲು ನಿರ್ಧರಿಸಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top