
ಐಪಿಎಲ್ 2020 ಶುರುವಾಗಿದ್ದು, ಈಗಾಗಲೇ ಮೂರು ಪಂದ್ಯಗಳು ಮುಗಿದೆ. ಇನ್ನು ಐಪಿಎಲ್ ಈ ಬಾರಿ ಅದ್ಧೂರಿಯಾಗಿ ಪ್ರಾರಂಭವಾಗದಿದ್ದರು, ಸಖತ್ ಓಪನಿಂಗ್ ಪಡೆದುಕೊಂಡಿದೆ.ಈ ಬಾರಿ ಐಪಿಎಲ್ ಅನ್ನು ಸ್ಟೇಡಿಯಂನಲ್ಲಿ ಕುಳಿತು ನೋಡಲು ಕ್ರಿಕೆಟ್ ಪ್ರಿಯರಿಗೆ ಅವಕಾಶವಿಲ್ಲದಿರುವುದು ಒಂದು ಬೇಸರವಾಗಿದ್ದರೆ, ಇನ್ನು ಕ್ರಿಕೆಟ್ ಪ್ರಿಯರು ಈ ಬಾರಿ ಟಿವಿಯಲ್ಲಿ ಲೈವ್ನಲ್ಲಿ ನೋಡವ ಮೂಲಕ ಐಪಿಎಲ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.
ಇದೀಗ ಐಪಿಎಲ್ಗೆ ಬಿಗ್ ಸ್ಟಾರ್ಟ್ ಸಿಕ್ಕಿದ್ದು, ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮೊದಲ ಐಪಿಎಲ್ ಮ್ಯಾಚ್ ಅನ್ನೊ ಬರೋಬ್ಬರಿ 20ಕೋಟಿಗೂ ಹೆಚ್ಚು ಜನ ವೀಕ್ಷಿಸಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಐಪಿಎಲ್ಗೆ ಈ ರೀತಿಯ ದೊಡ್ಡ ಓಪನಿಂಗ್ ಸಿಕ್ಕಿರಲಿಲ್ಲ.
ಆ ಮೂಲಕ ಐಪಿಎಲ್ ವೀಕ್ಷಣೆಯಲ್ಲಿ 20ಕೋಟಿಗೂ ಅಧಿಕ ವೀಕ್ಷಕರು ಐಪಿಎಲ್ ವೀಕ್ಷಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಇನ್ನು ಐಪಿಎಲ್ ಶುರುವಾದ ನಂತರದಲ್ಲಿ ಐಪಿಎಲ್ ನೇರ ಪ್ರಸಾರದ ಹಕ್ಕನ್ನು ಪಡೆದಿರೋ ಡಿಸ್ನಿ ಹಾಟ್ಸ್ಟಾರ್ ಒಟ್ಟು 70 ಲಕ್ಷಕ್ಕೂ ಅಧಿಕ ಸಬ್ಸ್ಕ್ರಿಪ್ಶನ್ ಪಡೆಯುವ ಮೂಲಕ ದಾಖಲೆ ಪಡೆದುಕೊಂಡಿದೆ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ ರೂಲ್ಸ್ನೊಂದಿಗೆ ಶುರುವಾಗಿದ್ದರು ವೀಕ್ಷಕರ ವಿಚಾರದಲ್ಲಿ ಮಾತ್ರ ದಾಖಲೆಯನ್ನು ಬರೆದಿದ್ದು, ಮುಂದಿನ ದಿನಗಳಲ್ಲಿ ಈ ವೀಕ್ಷಕರ ಸಂಖ್ಯೆ ಇನ್ನು ಹೆಚ್ಚಾದರು ಆಶ್ಚರ್ಯವಿಲ್ಲ.