ಐಪಿಎಲ್‌ ತಂಡದಲ್ಲಿ ಕೊಹ್ಲಿ, ರೋಹಿತ್‌ ಶರ್ಮಾಗೆ ಸ್ಥಾನವಿಲ್ಲ..

ಐಪಿಎಲ್‌ 2020 ಈಗಾಗಲೇ ಫೈನಲ್‌ ಹಂತಕ್ಕೆ ಬಂದು ತಲುಪಿದ್ದು, ಮುಂಬೈ ಮತ್ತು ಮೊದಲ ಬಾರಿ ಫೈನಲ್‌ ಪ್ರವೇಶ ಮಾಡಿರೋ ಡೆಲ್ಲಿ ಕ್ಯಾಪಿಟಲ್‌ ಸೆಣೆಸಾಡಲಿದೆ, ಈಗಾಗಲೇ ಈ ಎರಡು ತಂಡದಲ್ಲಿ ಯಾರು ಕಪ್‌ ಗೆಲ್ಲಲಿದ್ದಾರೆ ಅನ್ನೋ ಲೆಕ್ಕಾಚಾರಗಳು ಸಹ ಜೋರಾಗೇ ನಡೆಯುತ್ತಿದೆ. ಹೀಗಿರುವಾಗಲಿದೆ ಇದೀಗ ಐಪಿಎಲ್‌ ಮುಗಿಯು ಹಂತದಲ್ಲಿದ್ದು, ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಬೆಸ್ಟ್‌ ಐಪಿಎಲ್‌ ಪ್ಲೇಯಿಂಗ್‌ ಇಲೆವೆನ್‌ ತಂಡವನ್ನು ಆಯ್ಕೆ ಮಾಡಿದ್ದಾರೆ.

ಹೌದು ಈ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾಗ ಸ್ಥಾನ ಸಿಗದೇ ಇರೋದು ಆಶ್ಚರ್ಯ ಅಂತಾನೇ ಹೇಳ ಬಹುದು. ಹಾಗಾದ್ರೆ ಟೀಂ ಇಂಡಿಯಾದ ಮಾಜಿ ಆಟಗಾರ ಸಂಜಯ್‌ ಮಂಜ್ರೇಕರ್‌ ಕಟ್ಟಿರೋ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಅನ್ನೋದನ್ನ ನೋಡೋಣ.

ತಂಡದಲ್ಲಿ ಆರಂಭಿಕರಾಗಿ ಸಂಜಯ್‌ ಕನ್ನಡಿಗರಾದ ಕೆ.ಎಲ್‌ ರಾಹುಲ್‌ ಮತ್ತು ಮಾಯಾಂಕ್‌ ಅಗರ್‌ವಾಲ್‌ ಅವರನ್ನು ಸೆಲೆಕ್ಟ್‌ ಮಾಡಿದ್ದು, ಪಂಜಾಬ್‌ ತಂಡದಲ್ಲಿ ಆರಂಭಿಕರಾಗಿ ಇವರಿಬ್ಬರು ಉತ್ತಮ ರನ್‌ ತಂದುಕೊಡುವಲ್ಲಿ ಯಶಸ್ವಿಯಾಗಿರೋದು ಇದೀಗ ಸಂಜಯ್‌ ಮಂಜ್ರೇಕರ್‌ ಇವರಿಬ್ಬರಿಗೆ ಆರಂಭಿಕ ಸ್ಥಾನವನ್ನು ನೀಡಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಬದಲಿಗೆ ಸೂರ್ಯ ಕುಮಾರ್‌ ಯಾದವ್‌ಗೆ ಸ್ಥಾನ ನೀಡಿದ್ದು, ಸೂರ್ಯ ಕುಮಾರ್‌ ಐಪಿಎಲ್‌ನಲ್ಲಿ ಸ್ಥಿರವಾದ ಪ್ರದರ್ಶನವನ್ನೇ ನೀಡಿದ್ದು ಆಯ್ಕೆಗೆ ಕಾರಣ. ಬೇರೆ ಆಟಗಾರರು ಈ ಕ್ರಮಾಂಕದಲ್ಲಿ ಹೆಚ್ಚು ರನ್‌ ಗಳಿಸಲು ಸಾಧ್ಯವಾಗಿಲ್ಲ, ಸೂರ್ಯಕುಮಾರ್‌ ಬೆಸ್ಟ್‌ ಶಾಟ್‌ಗಳಿಂದ ನಾನು ಪ್ರಭಾವಿತನಾಗಿದ್ದೇನೆ ಅಂತ ಮಂಜ್ರೇಕರ್‌ ಹೇಳಿದ್ದಾರೆ.

ಇನ್ನು ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ಎಬಿಡಿ ವಿಲಿಯರ್ಸ್‌ ಮತ್ತು ನಿಕೋಲಸ್‌ ಪೂರನ್‌ಗೆ ಸ್ಥಾನ ನೀಡಿದ್ರೆ, ಆಲ್‌ರೌಂಡರ್‌ ಆಗಿ ಅಕ್ಷರ್‌ ಪಟೇಲ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಅಕ್ಷರ್‌ ಕಡಿಮೆ ರನ್‌ರೇಟ್‌ನಲ್ಲಿ ರನ್‌ ನೀಡಿದ್ದು, ತಂಡಕ್ಕೆ ಬೇಕಾದ ಸಮಯದಲ್ಲಿ ಬ್ಯಾಟಿಂಗ್‌ ಮಾಡೋ ಮೂಲಕ ಅಲ್‌ರೌಂಡರ್‌ ಆಟವನ್ನು ಪ್ರದರ್ಶಿಸುತ್ತಾರೆ ಅಂತ ಹೇಳಿದ್ದಾರೆ.

ಇನ್ನು ಬೌಲಿಂಗ್‌ ವಿಭಾಗದಲ್ಲಿ ಬುಮ್ರಾ ,ಜೋಫ್ರಾ ಆರ್ಚರ್‌ ಮತ್ತು ಮೊಹಮ್ಮದ್‌ ಶಮಿ ಅವರನ್ನು ಆಯ್ಕೆ ಮಾಡಿದ್ದು, ಇನ್ನು ಸ್ಪಿನ್ನರ್‌ಗಳಾದ ರಶೀದ್‌ ಖಾನ್‌ ಮತ್ತು ಚಾಹಲ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

ಹಾಗಾದ್ರೆ ಮಂಜ್ರೇಕರ್‌ ಐಪಿಎಲ್‌ ಉತ್ತಮ ಇಲೆವೆನ್‌ ತಂಡ ನೋಡೋದಾದ್ರೆ.

ಕೆ.ಎಲ್‌ ರಾಹುಲ್‌,ಮಾಯಂಕ್‌ ಅಗರ್‌ವಾಲ್‌,ಸೂರ್ಯಕುಮಾರ್‌ ಯಾದವ್‌,ಎಬಿಡಿವಿಲಿಯರ್ಸ್‌,ನಿಕೋಲಸ್‌ ಪೂರನ್‌,ಅಕ್ಷರ್‌ ಪಟೇಲ್‌,ರಶೀದ್‌ ಖಾನ್‌,ಜೋಫ್ರಾ ಆರ್ಚರ್‌,ಯಜ್ವೇಂದ್ರ ಚಾಹಲ್‌,ಮೊಹಮ್ಮದ್‌ ಶಮಿ,ಜಸ್ಪ್ರೀತ್‌ ಬುಮ್ರಾ

ಹಾಗಾದ್ರೆ ನಿಮ್ಮ ಐಪಿಎಲ್‌ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಯಾರಿಗೆಲ್ಲಾ ಸ್ಥಾನ ಕೊಡ್ತಿರಾ ನಮಗೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top