ಐಪಿಎಲ್‌ ಈ ಬಾರಿ ಹೊಸ ದಾಖಲೆ ಬರೆಯಲಿದೆ- ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌

ಇಂದಿನಿಂದ ಯುಎಇಯಲ್ಲಿ 13ನೇ ಆವೃತ್ತಿಯ ಐಪಿಎಲ್‌ ಶುರುವಾಗಲಿದ್ದ, ಕೋವಿಡ್‌ 19 ಎಫೆಕ್ಟ್‌ನಿಂದಾಗಿ ಐಪಿಎಲ್‌ ಯುಎಇಯಲ್ಲಿ ನಡೀತಾ ಇದ್ದು, ಈ ಬಾರಿ ಸ್ಟೇಡಿಯಂನಲ್ಲಿ ವೀಕ್ಷಕರಿಲ್ಲದೇ ಪಂದ್ಯಗಳು ನಡೀತಾ ಇದ್ದು, ಒಂದು ರೀತಿಯಲ್ಲಿ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದ್ರೆ, ಸುರಕ್ಷತೆ ದೃಷ್ಟಿಯಿಂದ ಇದು ಉತ್ತಮ ನಿರ್ಧಾರವಾಗಿದೆ.

ಇನ್ನು 13ನೇ ಅವೃತ್ತಿಯ ಐಪಿಎಲ್‌ನಲ್ಲಿ ಒಂದಷ್ಟು ಬದಲಾವಣೆಯನ್ನು ಮಾಡಿಕೊಂಡು ಐಪಿಎಲ್‌ ನಡೀತಾ ಇದ್ದು, ಇದೀಗ ಐಪಿಎಲ್‌ ಮುಖ್ಯಸ್ಥ ಬ್ರಿಶೇಷ್‌ ಪಟೇಲ್‌ ಯುಎಇ ಮಾಧ್ಯಮ ಒಂದಕ್ಕೇ ಹೇಳಿಯೊಂದನ್ನು ನೀಡಿದ್ದಾರೆ. ಈ ಬಾರಿಯ ಐಪಿಎಲ್‌ ಉಳಿದ ಎಲ್ಲಾ ಐಪಿಎಲ್‌ಗಿಂತ ದಾಖಲೆ ಬರೆಯಲಿದೆ ಎಂದು ಹೇಳಿದ್ದಾರೆ.

ಈ ಬಾರಿ ಐಪಿಎಲ್‌ ವೀಕ್ಷಿಸಿಸುವವ ಸಂಖ್ಯೆ ದುಪ್ಪಟ್ಟು ಆಗಲಿದೆ ಎಂದು ಹೇಳಿದ್ದು, ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿಸಲು ಅವಕಾಶ ಇಲ್ಲದ ಕಾರಣ ಈ ಬಾರಿ ಟಿವಿಯಲ್ಲಿ ಪಂದ್ಯ ವೀಕ್ಷಿಸುವವರ ಸಂಖ್ಯೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಯುಎಇಯಲ್ಲಿ ಐಪಿಎಲ್‌ ಆಯೋಜನೆಗೆ ಅವಕಾಶ ನೀಡಿದ ಬಿಸಿಸಿಐ, ಮತ್ತು ಕೇಂದ್ರ ಸರ್ಕಾರ ಜೊತೆಗೆ ಐಪಿಎಲ್‌ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ರು, ಇನ್ನು ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಯ ಸಹಕಾರ ಮತ್ತು ಬೆಂಬಲವನ್ನು ಬ್ರಿಜೇಶ್‌ ಪಟೇಲ್‌ ಶ್ಲಾಘಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top