
ಐಪಿಎಲ್ ೨೦೨೦ ಟೂರ್ನಿಯಿಂದ ವೇಗಿ ಭುವನೇಶ್ವರ್ ಕುಮಾರ್ ಹೊರ ಬಂದಿದ್ದಾರೆ. ಸೊಂಟ ನೋವು ಕಾಣಿಸಿಕೊಂಡ ಹಿನ್ನೆಲೆ ಭುವನೇಶ್ವರ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಚನ್ನೈ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಗಾಯಕ್ಕೆ ಒಳಗಾಗಿದ್ದ ಭುವನೇಶ್ವರ್ ಚೇತರಿಸಿಕೊಳ್ಳದ ಹಿನ್ನೆಲೆ ಸೊಂಟ ನೋವು ಹೆಚ್ಚಾಗಿ ಕಾಣಿಸಿಕೊಂಡ ಹಿನ್ನೆಲೆ ಐಪಿಎಲ್ ಟೂರ್ನಿಯಿಂದ ಔಟ್ ಆಗಿದ್ದಾರೆ. ಇದರಿಂದಾಗಿ ಸನ್ ರೈಸರ್ಸ್ ಹೈದರಬಾದ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ತಂಡಕ್ಕೆ ಶಾಕ್ ಆಗಿದೆ. ಇನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಹಿಂದೆ ಉಳಿದಿದ್ದ ಭುವಿ ಇದೀಗ ಟೂರ್ನಿಯಿಂದ ಹೊರ ಬಂದಿದ್ದು ಅಭಿಮಾನಿಗಳಿಗೆ ಮತ್ತು ತಂಡಕ್ಕೆ ಶಾಕ್ ಆದಂತಾಗಿದೆ.