ಐಪಿಎಲ್‌ನಿಂದ ಔಟ್‌ ಆದ ಚೆನ್ನೈನ ಬ್ರಾವೋ..

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಲಕ್‌ ಸರಿಇಲ್ಲದಂತಾಗಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗುವ ಮೂಲಕ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಗಳಿಸುವ ಮೂಲಕ ಕಪ್‌ ಗೆಲ್ಲುವ ಆಸೆಯನ್ನು ಕೈ ಚೆಲ್ಲಿ ಕುಳಿತಿದೆ. ಇನ್ನು ಐಪಿಎಲ್‌ ಆರಂಭದಿಂದಲ್ಲೂ ಒಂದಿಲ್ಲೊಂದು ಶಾಕಿಂಗ್‌ ಸುದ್ದಿ ಕೇಳುತ್ತಿದ್ದ ಚೆನ್ನೈ ತಂಡ ಮೊದಲ ಬಾರಿಗೆ ಸುರೇಶ್‌ ರೈನಾ ಐಪಿಎಲ್‌ನಿಂದ ವಾಪಾಸ್‌ ಬರುವ ಮೂಲಕ ಶಾಕ್‌ ನೀಡಿದ್ರು, ಇನ್ನು ಹರ್ಭಜನ್‌ ಸಿಂಗ್‌ ಕೂಡ ಚೆನ್ನೈ ತಂಡವನ್ನು ಸೇರಿಕೊಳ್ಳದೆ ಮತ್ತೊಂದು ಶಾಕ್‌ ಕೊಟ್ಟಿದ್ರು, ಇನ್ನು ಸಾಲು ಸಾಲು ಸೋಲುಗಳನ್ನು ಅನುಭವಿಸುವ ಮೂಲಕ ಟೀಕೆಗೆ ಒಳಗಾಗಿದ್ದ ಚೆನ್ನೈ ತಂಡಕ್ಕೆ ಇದೀಗ ಮತ್ತೊಂದು ಶಾಕಿಂಗ್‌ ಸುದ್ದಿ ಒದಗಿದೆ. ಹೌದು ತಂಡದ ಆಲ್‌ರೌಂಡರ್‌ ಆಟಗಾರ ಬ್ರಾವೋ ಇದೀಗ ಐಪಿಎಲ್‌ನಿಂದ ಔಟ್‌ ಆಗಿದ್ದಾರೆ. ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಬ್ರಾವೋ ಅವರಿಗೆ ವಿಶ್ರಾಂತಿ ತಜ್ಞರು ಸಲಹೆ ನೀಡಿದ್ದು ಹೀಗಾಗಿ ಮುಂದಿನ ಪಂದ್ಯಗಳಿಗೆ ಬ್ರಾವೋ ಲಭ್ಯರಾಗುವುದಿಲ್ಲ ಆ ಮೂಲಕ ಚೆನ್ನೈ ತಂಡಕ್ಕೆ ಮತ್ತೊಂದು ಶಾಕಿಂಗ್‌ ಸುದ್ದಿ ಒದಗಿದೆ. ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಇದೀಗ ತಂಡದ ಆಟಗಾರರು ಅಲಭ್ಯರಾಗುತ್ತಿರುವುದು ದೊಡ್ಡ ಹೊಡೆತ ಬಿದ್ದಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top