ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ವಿರಾಟ್‌,ಎಬಿಡಿ

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ಕಾಣ್ತಾ ಇದ್ದು, ಈಗಾಗಲೇ ತಾವು ಆಡಿದ 7 ಪಂದ್ಯದಲ್ಲಿ 5ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ 10 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಪ್ರತಿ ಮ್ಯಾಚ್‌ನಲ್ಲೂ ತಂಡದಲ್ಲಿ ಪ್ರತಿಯೊಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಚೆನ್ನೈ ವಿರುದ್ಧ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 90 ರನ್‌ ಬಾರಿಸೋ ಮೂಲಕ ದಿಸ್‌ ಈಸ್‌ ಕಿಂಗ್‌ ಕೊಹ್ಲಿ ಅಂತ ಹೇಳಿದ್ರೆ, ಇತ್ತ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 33 ಬಾಲ್‌ಗಳಲ್ಲಿ 73ರನ್‌ ಬಾರಿಸೋ ಮೂಲಕ ಎಬಿ ಡಿವಿಲಿಯರ್ಸ್‌ ಮೇ ಹೂ ಡಾನ್‌ ಅಂತ ಹೇಳೋ ಮೂಲಕ ಆರ್‌ಸಿಬಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ.

ಇದೀಗ ಈ ಇಬ್ಬರು ಆಟಗಾರರು ರನ್‌ ಹೊಳೆ ಹರಿಸುವ ಮೂಲಕ ರನ್‌ ಮಷಿನ್ಸ್‌ ಆಗಿದ್ರೆ, ಇತ್ತ ಇವರಿಬ್ಬರು ಐಪಿಎಲ್‌ನಲ್ಲಿ ಹೊಸದಾಖಲೆ ಬರೆಯೋ ಮೂಲಕ ದಾಖಲೆಗಳ ಸರದಾರರು ನಾವೇ ಅಂತ ಹೇಳ್ತಾ ಇದ್ದಾರೆ. ಹೌದು ಕೆಕೆಆರ್‌ ವಿರುದ್ಧ 47 ಬಾಲ್‌ಗೆ 100 ರನ್‌ಗಳ ಜೊತೆಯಾಟ ಆಡೋ ಮೂಲಕ ವಿರಾಟ್‌ ಮತ್ತು ಎಬಿಡಿ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ ವಿರಾಟ್‌ ಮತ್ತು ಎಬಿಡಿ ಜೊತೆಯಾಟದ ಮೂಲಕ 3000 ರನ್‌ಗಳನ್ನು ಸಿಡಿಸಿರೋ ಮೊದಲ ಜೋಡಿ ಅನ್ನೋ ದಾಖಲೆಯನ್ನು ಇದೀಗ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಆ ಮೂಲಕ ಆರ್‌ಸಿಬಿ ಹೆಸರಿಗೆ ಮತ್ತೊಂದು ರೆಕಾರ್ಡ್‌ ಲಭ್ಯವಾಗಿದೆ.

ಇನ್ನು ವಿರಾಟ್‌ ಮತ್ತು ಗೇಲ್‌ ಜೊತೆಯಾಟದಲ್ಲಿ ಅತಿ ಹೆಚ್ಚು ರನ್‌ ಬರೋ ಮೂಲಕ ಎರಡನೇ ಸ್ಥಾನದಲ್ಲಿದ್ರೆ, ಡೇವಿಡ್‌ ವಾರ್ನ್‌ರ್‌ ಮತ್ತು ಶಿಖರ್‌ ಧವನ್‌ ಜೊತೆಯಾಟ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ವಿರಾಟ್‌ ಎಬಿಡಿ ಕೇವಲ ಜೊತೆಯಾಟದಲ್ಲಿ ಮಾತ್ರವಲ್ಲ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಜೊತೆಯಾಟ ಆಡಿರೋ ದಾಖಲೆ ಕೂಡ ಇದ್ದು ಗುಜರಾತ್‌ ಲಯನ್ಸ್‌ 229 ಗಳಿಸೋ ಮೂಲಕ ಅತಿ ಹೆಚ್ಚುರನ್‌ ಜೊತೆಯಾಟ ಆಡಿದ ಜೋಡಿ ಅನ್ನೋ ರೆಕಾರ್ಡ್‌ ಕೂಡ ಇವರ ಹೆಸರಲ್ಲೇ ಇದೆ. ಒಟ್ಟಿನಲ್ಲಿ ವಿರಾಟ್‌ ಮತ್ತು ಎಬಿಡಿ ಇಬ್ಬರ ಜೊತೆಯಾಟದಲ್ಲಿ 3000 ರನ್‌ ಸಿಟಿಸೋ ಮೂಲಕ ಹೊಸ ದಾಖಲೆ ಸಿಡಿಸಿದ್ರೆ,ಇತ್ತ ಎಬಿಡಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮ್ಯಾನ್‌ಆಫ್‌ದಿ ಮ್ಯಾಚ್‌ ಪಡೆಯೋ ಮೂಲಕ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ.

ಎಬಿಡಿ ಆಡಿರೋ ಐಪಿಎಲ್‌ನಲ್ಲಿ ಒಟ್ಟು 220 ಬಾರಿ ಮ್ಯಾನ್‌ಆಫ್‌ದಿ ಮ್ಯಾಚ್‌ ಪಡೆಯೋ ಮೂಲಕ ಅತಿ ಹೆಚ್ಚು ಮ್ಯಾನ್‌ಆಫ್‌ದಿ ಮ್ಯಾಚ್‌ ಪಡೆದ ಮೊದಲ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಗೇಲ್‌ 21, ರೋಹಿತ್‌ ಶರ್ಮಾ 18 ಬಾರಿ ಮ್ಯಾನ್‌ಆಫ್‌ದಿ ಮ್ಯಾಚ್‌ ಪಡೆಯೋ ಮೂಲಕ ನಂತರ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ಐಪಿಎಲ್‌ನಲ್ಲಿ ಒಂದಿಲ್ಲೊಂದು ದಾಖಲೆಗಳು ಸೃಷ್ಟಿಯಾಗುತ್ತಿದ್ದು, ಇದೀಗ ಐಪಿಎಲ್‌ನಲ್ಲಿ ಅತಿ ಹೆಚ್ಚು ದಾಖಲೆ ಸೃಷ್ಟಿಸಿದ ತಂಡದಲ್ಲಿ ಆರ್‌ಸಿಬಿ ನಂ1 ಸ್ಥಾನದಲ್ಲಿದ್ದು, ಆರ್‌ಸಿಬಿ ಅಭಿಮಾನಿಗಳು ಇದು ನಿಜವಾದ ಟೀಂ ಅಂದ್ರೆ ಅಂತ ಹೇಳ್ತಿದ್ದಾರೆ.

ಆರ್‌ಸಿಬಿ ನಿಮ್ಮ ಪ್ರಕಾರ ಯಾವ ಯಾವ ರೆಕಾರ್ಡ್‌ಗಳನ್ನು ಕ್ರಿಯೇಟ್‌ ಮಾಡಬಹುದು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top