ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಕೆಎಲ್‌ ರಾಹುಲ್‌

ಐಪಿಎಲ್ 2020ಯಲ್ಲಿ ಸದ್ಯ ಟಾಪ್ ಸ್ಕೋರರ್ ಅಂದ್ರೆ ಅದು ಕೆ.ಎಲ್ ರಾಹುಲ್, ಈ ಬಾರಿಯ ಐಪಿಎಲ್‍ನಲ್ಲಿ ಪಂಜಾಬ್ ತಂಡದ ನಾಯಕನಾಗುವ ಮೂಲಕ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ತಂಡಕ್ಕಾಗಿ ನಾಯಕ ಆಟವನ್ನು ಆಡ್ತಾ ಇದ್ದಾರೆ.ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡ್ತಾ ಇದ್ರು, ಗೆಲುವಿನ ಸನಿಹದಲ್ಲಿ ಎಡವುತ್ತಿದ್ದರು, ಇತ್ತ ಕೆಎಲ್ ರಾಹುಲ್ ಮಾತ್ರ ತಮ್ಮ ನಾಯಕನ ಸ್ಥಾನಕ್ಕೆ ನ್ಯಾಯವನ್ನು ಒದಗಿಸುತ್ತಿದ್ದಾರೆ. ಈಗಾಗಲೇ 9 ಪಂದ್ಯಗಳಿಂದ ಭರ್ಜರಿ 525ರನ್‍ಗಳನ್ನು ಸಿಡಿಸುವ ಮೂಲಕ ಈ ಬಾರಿಯ ಐಪಿಎಲ್‍ನಲ್ಲಿ ಟಾಪ್ ಸ್ಕೋರ್ ಆಗಿದ್ದು, ಆರೆಂಜ್ ಕ್ಯಾಪ್ ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇರೋ ಕೆ.ಎಲ್ ರಾಹುಲ್ ಐಪಿಎಲ್‍ನಲ್ಲಿ ಹೊಸದೊಂದು ಸಾಧನೆಯನ್ನ ಮಾಡಿದ್ದಾರೆ. ಹೌದು 2013ರಿಂದ ಐಪಿಎಲ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ರಾಹುಲ್ ಇದುವರೆಗೂ 2500ಕ್ಕೂ ಹೆಚ್ಚು ರನ್‍ಗಳನ್ನು ಸಿಡಿಸಿದ್ದಾರೆ.

ಇದೀಗ ಐಪಿಎಲ್‍ನಲ್ಲಿ ಹೊಸದೊಂದು ಸಾಧನೆ ಮಾಡೋ ಮೂಲಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಹೌದು ಸತತ ಮೂರು ಐಪಿಎಲ್ ಸೀಸನ್‍ನಲ್ಲಿ 500ಕ್ಕೂ ಹೆಚ್ಚು ರನ್‍ಗಳನ್ನು ಸಿಡಿಸುವ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಈ ಸೀಸನ್‍ನಲ್ಲಿ ಉತ್ತಮ ಬ್ಯಾಟ್ ಬೀಸುತ್ತಿರೋ ಕೆ.ಎಲ್ ರಾಹುಲ್ 525ರನ್‍ಗಳನ್ನು ಸಿಡಿಸಿ ಮುನ್ನುಗ್ಗುತ್ತಿದ್ರೆ, ಕಳೆದ ಐಪಿಎಲ್‍ನಲ್ಲಿ 1 ಶತಕ, 6 ಅರ್ಧ ಶತಕ ಸಿಡಿಸಿ 593ರನ್‍ಗಳನ್ನು ಗಳಿಸುವ ಮೂಲಕ ಉತ್ತಮ ಪ್ರದರ್ಶನವನ್ನು ನೀಡಿದ್ರು. ಇನ್ನು 2018ರ ಐಪಿಎಲ್‍ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ರಾಹುಲ್ 6 ಅರ್ಧ ಶತಕದೊಂದಿಗೆ 659ರನ್‍ಗಳನ್ನು ಸಿಡಿಸುವ ಮೂಲಕ ಆ ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಸಿಡಿಸುವ ಆಟಗಾರರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ರು, ಆ ಮೂಲಕ ಸತತ ಮೂರು ಐಪಿಎಲ್‍ನಲ್ಲಿ 500ಕ್ಕೂ ಹೆಚ್ಚು ರನ್‍ಗಳನ್ನು ಸಿಡಿಸೋ ಮೂಲಕ ಹ್ಯಾಟ್ರಿಕ್ ಬಾರಿಸಿದ್ದು, ಆ ಮೂಲಕ ಮೂರು ಐಪಿಎಲ್ ಸೀಸನ್‍ನಿಂದ ಒಟ್ಟು 1777ರನ್‍ಗಳನ್ನು ಬಾರಿಸುದ್ದು ಹೊಸದೊಂದು ದಾಖಲೆಯನ್ನು ಕೆಎಲ್ ರಾಹುಲ್ ಬರೆದಿದ್ದಾರೆ.

ಇವತ್ತಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಎದುರು ರಾಹುಲ್ ತಂಡ ಸೆಣೆಸಾಡುತ್ತಿದ್ದು, ಇಂದಿನ ಪಂದ್ಯ ರಾಹುಲ್ ತಂಡ ಗೆಲುವನ್ನು ಸಾಧಿಸೋ ಮೂಲಕ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳ ಬೇಕಾಗಿದೆ.

ಒಟ್ಟಿನಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ನಾಯಕ ಸ್ಥಾನವನ್ನು ನಿಭಾಯಿಸುತ್ತಿರೋ ಕೆಎಲ್ ರಾಹುಲ್ ಇವತ್ತಿನ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ. ಪಂಜಾಬ್ ಇಂದಿನ ಪಂದ್ಯವನ್ನು ಗೆಲ್ಲಲಿದ್ದಾರಾ, ನೀವ್ ಏನ್ ಹೇಳ್ತಿರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top