ಐಪಿಎಲ್‌ನಲ್ಲಿ ಯಾವ ಆಟಗಾರರು ನೂರು ಕೋಟಿ ಗಳಿಸಿದ್ದಾರೆ ಗೊತ್ತಾ..?

ಐಪಿಎಲ್‌ ವಿಶ್ವ ಕ್ರಿಕಟ್‌ ನಲ್ಲಿ ಶ್ರೀಮಂತ ಲೀಗ್‌.. ಇಲ್ಲಿ ದುಡ್ಡಿನ ಹೊಳೆಯೇ ಹರಿಯುತ್ತದೆ, ಐಪಿಎಲ್‌ ಇದುವರೆಗೂ ೧೩ ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಇದೀಗ 14ನೇ ಸೀಸನ್‌ಗೆ ತಯಾರಿಯನ್ನು ಮಾಡಿಕೊಳ್ತಾ ಇದೆ. ಇನ್ನು ಈ ವರ್ಷ ಐಪಿಎಲ್‌ ಕೊರೋನಾ ನಡುವೆಯೂ ಯಶಸ್ವಿಯಾಗಿ ಮುಗಿಸಿಸುವದರ ಜೊತೆಯಲ್ಲಿ ಕೋಟಿ ಕೋಟಿ ಹಣವನ್ನು ಬಿಸಿಸಿಐ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಒಂದು ಕ್ರಿಕೆಟ್‌ ಹಬ್ಬ ಬಂತು ಅಂದ್ರೆ ಕ್ರಿಕೆಟ್‌ ಪ್ರಿಯರಿಗೆ ಒಂದು ರೀತಿಯಲ್ಲಿ ಸಂಭ್ರಮವಾದ್ರೆ, ಇತ್ತ ಕ್ರಿಕೆಟ್‌ ಆಟಗಾರರರಿಗೆ ಐಪಿಎಲ್‌ನಲ್ಲಿ ಟೂರ್ನಿಯಲ್ಲಿ ಸೇರಿಕೊಳ್ಳುವ ಮೂಲಕ ತಮ್ಮ ಟ್ಯಾಲೆಂಟ್‌ ತೋರಿಸುವ ಜೊತೆಯಲ್ಲಿ ಕೋಟಿ ಕೋಟಿ ಹಣವನ್ನು ಗಳಿಸುವ ಕನಸನ್ನು ಹೊಂದಿರುತ್ತಾರೆ.

13 ಐಪಿಎಲ್‌ ಸೀಸನ್‌ ಮುಗಿಸಿರೋ ಈ ಟೈಂನಲ್ಲಿ ಐಪಿಎಲ್‌ನಲ್ಲಿ ಆಡಿದ ಈ ಪ್ರಮುಖ ಮೂರು ಆಟಗಾರರು ತಮ್ಮ ಜೇಬಿಗೆ ಕೋಟಿ ಕೋಟಿ ಹಣವನ್ನು ತುಂಬಿಸಿಕೊಂಡಿದ್ದಾರೆ. ಹಾಗಾದ್ರೆ ಯಾರು ಆ ಮೂರು ಆಟಗಾರರು ಅನ್ನೋದನ್ನ ನಾವ್‌ ಇವತ್ತು ನೋಡೋಣ.

ಐಪಿಎಲ್‌ ಅಂದಾಕ್ಷಣ ಹೊಡಿ ಬಡಿ ಆಟವೇ ನೆನಸಪಾಗೋದು, ಇನ್ನು ಸ್ಪೋಟಕ ಆಟ ಅಂದಾಕ್ಷಣ ಐಪಿಎಲ್‌ನಲ್ಲಿ ಗ್ರಿಸ್‌ ಗೇಲ್‌, ಎಬಿಡಿ, ರಸೆಲ್‌ ರಂತಹ ಸ್ಫೋಟಕ ಬ್ಯಾಟ್ಸಮನ್‌ಗಳು ನೆನಪಾಗ್ತಾರೆ,ಆದ್ರೆ ಈ ಐಪಿಎಲ್‌ನಲ್ಲಿ ಹಣ ಸಂಪಾದನೆ ಮಾಡೋದ್ರು ಟಾಪ್‌ನಲ್ಲಿ ಯಾರಿದ್ದಾರೆ ಅಂತ ನೋಡಿದ್ರೆ, ಇಲ್ಲಿ ವಿದೇಶಿ ಆಟಗಾರರು ಟಾಪ್‌ ಲಿಸ್ಟ್‌ನಲ್ಲಿ ಬರೋದಿಲ್ಲ, ಬದಲಿಗೆ ಬರೋದು ನಮ್ಮ ಇಂಡಿಯಾದ ಆಟಗಾರರು. ಹೌದು ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಪಾದನೇ ಮಾಡಿರೋ ಟಾಪ್‌ 3 ಆಟಗಾರರ ಪಟ್ಟಿಯಲ್ಲಿ ಬರೋದು ಭಾರತೀಯ ಆಟಗಾರರಾಗಿದ್ದು, ಆ ಟಾಪ್‌ 3 ಆಟಗಾರರು ಯಾರು ಅನ್ನೋದನ್ನು ನೋಡೋಣ

ಮೊದಲನೇಯಾದಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಹಣಗಳಿಸಿದ ಆಟಗಾರ ಅಂದ್ರೆ ಅದು ಎಂ ಎಸ್‌ ಧೋನಿ, ಹೌದು ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಟೂರ್ನಿಯಲ್ಲಿಯೇ ವಿಶ್ವಕಪ್‌ ಗೆಲ್ಲಿಸಿ ಕೊಟ್ಟ ಕ್ಯಾಪ್ಟನ್‌ ಕೂಲ್‌ ಭಾರತ ತಂಡ ಒಬ್ಬ ಬೆಸ್ಟ್‌ ಕ್ಯಾಪ್ಟನ್‌, ಐಪಿಎಲ್‌ ವಿಚಾರದಲ್ಲೂ ಇದು ನಿಜವಾಗಿದ್ದು, ಧೋನಿ ಚೆನ್ನೈ ಪರವಾಗಿ ಮೂರು ಐಪಿಎಲ್‌ ಟ್ರೋಫಿಯನ್ನ ಗೆಲ್ಲಿಸಿಕೊಟ್ಟಿದ್ದಾರೆ. ಕಪ್‌ ಗೆಲ್ಲುವ ವಿಚಾರದಲ್ಲೂ ಟಾಪ್‌ನಲ್ಲಿ ಇರೋ ಧೋನಿ ಐಪಿಎಲ್‌ನಲ್ಲಿ ಹಣಗಳಿಸುವ ವಿಚಾರದಲ್ಲೂ ಟಾಪ್‌ನಲ್ಲೇ ಇದ್ದಾರೆ. ಹೌದು ಧೋನಿ ಕಳೆದ 13 ಸೀಸನ್‌ನಲ್ಲಿ ಒಟ್ಟು 137 ಕೋಟಿ ರೂಪಾಯಿ ಹಣವನ್ನು ತಮ್ಮ ಜೇಬಿಗೆ ಇರಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಮೊದಲ ಆವೃತ್ತಿಯಿಂದಲೇ ಕೋಟಿ ಮೊತ್ತದಲ್ಲಿ ಸೇಲ್‌ ಆಗಿದ್ದ ಧೋನಿ ಇದುವರೆಗೂ 137 ಕೋಟಿ ಹಣವನ್ನು ಗಳಿಸೋ ಮೂಲಕ ಮೊದಲ ಸ್ಥಾನದಲ್ಲಿ ಇದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಇದ್ದು, ಇದುವರೆಗೂ ಮುಂಬೈ ಇಂಡಿಯನ್ಸ್‌ ತಂಡಕ್ಕೆ 5 ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಂಡುವ ಮೂಲಕ ದಾಖಲೆ ಬರೆದಿದ್ದಾರೆ. ಐಪಿಎಲ್‌ ಮೊದಲ ಆವೃತ್ತಿಯಲ್ಲಿ 3 ಕೋಟಿಗೆ ಸೇಲ್‌ ಆಗಿದ್ದ ರೋಹಿತ್‌ ಶರ್ಮಾ, ಸದ್ಯ ಮುಂಬೈ ಇಂಡಿಯನ್ಸ್‌ ಪರ 15 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. 2008ರಿಂದ ಇಲ್ಲಿಯ ವರೆಗೂ ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ 137 ಕೋಟಿ ರೂಪಾಯಿಯನ್ನು ತಮ್ಮ ಅಕೌಂಟ್‌ಗೆ ಪಡೆದುಕೊಂಡಿದ್ದು ಆ ಮೂಲಕ 2ನೇ ಸ್ಥಾನದಲ್ಲಿ ಇದ್ದಾರೆ.

ಮೂರನೇ ಸ್ಥಾನದಲ್ಲಿ ಆರ್‌ಸಿಬಿಯ ಕ್ಯಾಪ್ಟನ್‌ ಕಿಂಗ್‌ ಕೊಹ್ಲಿ ಇದ್ದು, 2008 ರಿಂದ ಇದುವರೆಗೂ ಒಂದೇ ತಂಡದಲ್ಲಿ ಆಡುವ ಮೂಲಕ ದಾಖಲೆ ಬರೆದಿದ್ದಾರೆ. ಮೊದಲ ಆವೃತ್ತಿಯಲ್ಲಿ ಆರ್‌ಸಿಬಿಗೆ 12 ಲಕ್ಷಕ್ಕೆ ಬಿಕರಿಯಾಗಿದ್ದ ವಿರಾಟ್‌, ಸದ್ಯ ಆರ್‌ಸಿಬಿ ಪರವಾಗಿ 17 ಕೋಟಿ ಪಡೆಯುತ್ತಿದ್ದು, ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರೋ ಆಟಗಾರ ಆಗಿದ್ದಾರೆ. ಆರ್‌ಸಿಬಿ ತಂಡದ ನಾಯಕನಾಗಿರೋ ವಿರಾಟ್‌ ಕೊಹ್ಲಿ ಇದುವರೆಗೂ ಐಪಿಎಲ್‌ ಕಪ್‌ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋ ಆಪಾಧನೆ ಇದ್ದರು, ಐಪಿಎಲ್‌ನಲ್ಲಿ ಹಣ ಗಳಿಸೋ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ, 2008 ರಿಂದ ಆರ್‌ಸಿಬಿ ಪರವಾಗೇ ಆಡುತ್ತಿರೋ ವಿರಾಟ್‌ ಕೊಹ್ಲಿ ಇದುವರೆಗೂ 128 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ.

ಇದು ಈ ಮೂವರು ಆಟಗಾರರು ಐಪಿಎಲ್‌ನಲ್ಲಿ ಪ್ರಾಂಚೈಸಿಗಳಿಂದ ಪಡೆದಿರೋ ಹಣವಾಗಿದ್ದು, ಇನ್ನು ಜಾಹೀರಾತು , ಪಂದ್ಯದ ವೇಳೆ ಪಡೆದ ಪ್ರಶಸ್ತಿಗಳ ಲೆಕ್ಕಾಚಾರಕ್ಕೆ ಬಂದ್ರೆ ಈ ಮೂವರು ಆಟಗಾರರ ಸಂಪಾದನೆ 200 ಕೋಟಿ ಹೆಚ್ಚು ಆಗಲಿದೆ.

ಒಟ್ಟಿನಲ್ಲಿ ಐಪಿಎಲ್‌ ಅಂದ್ರೆನೇ ಅದೊಂದು ದುಡ್ಡಿನ ಹೊಳೆ ಹರಿಯುವ ಟೂರ್ನಿಯಾಗಿದ್ದು, ದುಡ್ಡಿನ ವಿಚಾರದಲ್ಲೂ ಭಾರತೀಯ ಆಟಗಾರರು ಟಾಪ್‌ನಲ್ಲಿ ಇದ್ದಾರೆ.

ಇನ್ನು ಯಾವೆಲ್ಲಾ ಆಟಗಾರರು ಐಪಿಎಲ್‌ನಲ್ಲಿ ಹಣ ಸಂಪಾದನೆ ಮಾಡೋದ್ರಲ್ಲಿ ಟಾಪ್‌ನಲ್ಲಿ ಇದ್ದಾರೆ ಅಂತ ನಿಮಗೆ ಅನಿಸುತ್ತದೆ. ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top