
ಐಪಿಎಲ್ 2020ಯಲ್ಲಿ ಪ್ರತಿ ಮ್ಯಾಚ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಮೈದಾನದಲ್ಲಿ ಆಟಗಾರರು ಎಂಟರ್ಟೈನ್ಮೆಂಟ್ ನೀಡೋ ಜೊತೆಯಲ್ಲಿ ಮೈದಾನದ ಆಚೆಗೂ ಸಖತ್ ಎಂಟರ್ಟೈನ್ಮೆಂಟ್ ನೀಡೋಕೆ ಶುರುಮಾಡಿದ್ದಾರೆ. ಇದೀಗ ಆ ಮನೋರಂಜನ ಪಟ್ಟಿಗೆ ಇದೀಗ ʻಬ್ರೇಕ್ ದಿ ಬಿಯರ್ಡ್ ಚಾಲೆಂಜ್ʼ ಕೂಡ ಸೇರಿಕೊಂಡಿದೆ. ಹೌದು ಐಪಿಎಲ್ ಸದ್ಯ ಬಿಯರ್ಡ್ ಚಾಲೆಂಜ್ ಆಟಗಾರರಿಗೆ ಸಖತ್ ಮಜಾ ಕೊಡುತ್ತಿದ್ದು, ಇದೀಗ ಈ ಚಾಲೆಂಜ್ ಅನ್ನು ಎಬಿ ಡಿವಿಲಿಯರ್ಸ್ ಸ್ವೀಕಾರ ಮಾಡಿ ಗಡ್ಡ ತೆಗೆದಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಗೆಲುವಿಗೆ ಕಾರಣರಾದ ಎಬಿಡಿ ಮ್ಯಾಚ್ ಮುಗಿದ ನಂತರ ತಮ್ಮ ಗಡ್ಡಕ್ಕೆ ಹೊಸ ಟಚ್ ನೀಡಿದ್ದಾರೆ. ಐಪಿಎಲ್ನಲ್ಲಿ ಆಟಗಾರರು ತಮ್ಮ ಗಡ್ಡಕ್ಕೆ ಹೊಸ ರೂಪ ಕೊಡುವ ಸಲುವಾಗಿ ಈ ಬ್ರೇಕ್ ದಿ ಬಿಯರ್ಡ್ ಚಾಲೆಂಚ್ ಶುರುಮಾಡಿಕೊಂಡಿದ್ದು, ಆಟಗಾರರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಒಂದಿಷ್ಟು ಎಂಟರ್ಟೈನ್ಮೆಂಟ್ ಕೂಡ ಸಿಕ್ತಾ ಇದೆ. ಈ ಬ್ರೇಕ್ ದಿ ಬಿಯರ್ಡ್ ಮೊದಲು ಹಾರ್ದಿಕ್ ಪಾಂಡ್ಯ ಶುರುಮಾಡಿದ್ರು, ನಂತರ ಇದನ್ನು ಕೀರನ್ ಪೊಲಾರ್ಡ್ಗೆ ಅವ್ರು ಚಾಲೆಂಜ್ ಹಾಕಿದ್ರು, ಈ ಚಾಲೆಂಜ್ ಸ್ವೀಕರಿಸಿದ್ದ ಪೊಲಾರ್ಡ್ ತಮ್ಮ ಗಡ್ಡಕ್ಕೆ ಹೊಸ ಟಚ್ ನೀಡಿ ನಂತರ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ಗೆ ಈ ಚಾಲೆಂಜ್ ಪೊಲಾರ್ಡ್ ಹಾಕಿದ್ರು, ಇನ್ನು ದಿನೇಶ್ ಕಾರ್ತಿಕ್ ಕೂಡ ಈ ಚಾಲೆಂಜ್ ಸ್ವೀಕರಿಸಿ ತಮ್ಮ ಗಡ್ಡಕ್ಕೆ ಹೊಸ ಟಚ್ ನೀಡುತ್ತಿರೋ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ರು, ಇದೀಗ ಈ ಮೂವರ ನಂತರ ಎಬಿ ಡಿವಿಲಿಯರ್ಸ್ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿದ್ದಾರೆ.
ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಮಾಡಿರೋ ವಿಡಿಯೋವನ್ನು ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿ, ಅವರು ಹೇಳಿದ್ದನ್ನು ನಾನು ಗಂಭೀರವಾಗಿ ತೆಗೆದುಕೊಂಡು ನ್ಯೂ ಲುಕ್, ನ್ಯೂ ಸ್ಟೈಲ್ ಮಾಡಿಕೊಂಡಿದ್ದೇನೆ. ಅಂತ ಬರೆದುಕೊಂಡು, ಪೊಲಾರ್ಡ್,ದಿನೇಶ್ ಕಾರ್ತಿಕ್,ಕ್ರುನಾಲ್ ಪಾಂಡ್ಯ ಮತ್ತು ಫ್ಲಾಪ್ ಡುಪ್ಲೆಸಿಸಿಯನ್ನು ಟ್ಯಾಗ್ ಮಾಡಿದ್ದಾರೆ.
ಇನ್ನು ನನ್ನ ನಂತರ ಮುಂದೆ ಈ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಅನ್ನು ಯಾರು ಸ್ವೀಕಾರ ಮಾಡುತ್ತಾರೆ ಅನ್ನೋದ ನೋಡಲು ಕಾಯುತ್ತಿದ್ದೇನೆ ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ಐಪಿಎಲ್ನಲ್ಲಿ ಆಟಗಾರರು ಕ್ರಿಕೆಟ್ ಪ್ರಿಯರಿಗೆ ಮೈದಾನದಲ್ಲಿ ಮಾತ್ರ ಮನೋರಂಜನೆಯನ್ನು ನೀಡ್ತಾ ಇಲ್ಲ ಬದಲಿಗೆ ಮೈದಾನದ ಆಚೆಗೂ ಒಂದಿಷ್ಟು ಮನೋರಂಜನೆ ನೀಡುವ ಮೂಲಕ ಕ್ರಿಕೆಟ್ ಪ್ರಿಯರಿಗೆ ಮತ್ತು ತಮ್ಮ ಅಭಿಮಾನಿಗಳಿಗೆ ಖುಷಿಪಡಿಸುತ್ತಿದ್ದಾರೆ.