ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್‌ ಪುಕ್ಸಟ್ಟೆ ಎಣ್ಣೆಗಾಗಿ ಕಾಯುತ್ತಿದ್ದ ಎಂದ ಸೆಹ್ವಾಗ್‌

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಏಕದಿನ ಮತ್ತು ಟಿ 20 ಪಂದ್ಯಗಳು ಮುಗಿದಿದ್ದು, ಇಬ್ಬರು ಒಂದೊಂದು ಸರಣಿಯನ್ನು ಗೆದ್ದು ಬೀಗಿದ್ದಾರೆ, ಆದ್ರೆ ಇದೀಗ ಆಸ್ಟ್ರೇಲಿಯಾದ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಮೇಲೆ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಅದರಲ್ಲೂ ಐಪಿಎಲ್‌ ಪ್ರಿಯರು ಸಖತ್‌ ಗರಂ ಆಗಿದ್ದಾರೆ. ಹೌದು ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಏಕದಿನ ಮತ್ತು ಟಿ 20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಹೊಡಿ ಬಡಿ ಆಟದಿಂದ ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ರೆ ಐಪಿಎಲ್‌ನಲ್ಲಿ ಪಂಜಾಬ್‌ ಪರ ಈ ಬಾರಿ ಕಣಕ್ಕೆ ಇಳಿದಿದ್ದ ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯಾ ಪರ ಆಡಿದ ಶೇ 1ರಷ್ಟು ಆಟವನ್ನು ಆಡದೆ ಇದ್ದುದ್ದರಿಂದ ಕ್ರಿಕೆಟ್‌ ಪ್ರಿಯರು ಮ್ಯಾಕ್ಸ್‌ವೆಲ್‌ ಮೇಲೆ ಸಿಟ್ಟಾಗಿದ್ದಾರೆ. ಇದೀಗ ಇದೇ ವಿಚಾರವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ , ಪಂಜಾಬ್‌ ತಂಡದ ಮಾಜಿ ಕೋಚ್‌ ವೀರೇಂದ್ರ ಸೆಹ್ವಾಗ್‌ ಕೂಡ ಮ್ಯಾಕ್ಸ್‌ವೆಲ್‌ ಮೇಲೆ ಹರಿಹಾಯ್ದಿದ್ದಾರೆ. ರಾಷ್ಟ್ರೀಯ ತಂಡದ ಪರವಾಗಿ ಅಬ್ಬರಿಸಿರೋ ಮ್ಯಾಕ್ಸ್‌ವೆಲ್‌ ಐಪಿಎಲ್‌ ಆಡಿದ 13 ಪಂದ್ಯಗಳಲ್ಲಿ 100ರನ್‌ ಗಳಿಸಲು ತಿಣುಕಾಡಿದ್ರು, ಇನ್ನು ಐಪಿಎಲ್‌ನಲ್ಲಿ ಒಂದು ಸಿಕ್ಸರ್‌ ಕೂಡ ಸಿಡಿಸಲು ಅವರಿಗೆ ಸಾಧ್ಯವಾಗಿರಲಿಲ್ಲ ಇದೀಗ ವೀರು ಹರಿಹಾಯ್ದಿದ್ದು, ನಾನು ಮಾಕ್ಸ್‌ವೆಲ್‌ ಅನ್ನು ಹತ್ತಿರದಿಂದ ಬಲ್ಲವನಾಗಿದ್ದು, ಆತ ಐಪಿಎಲ್‌ನಲ್ಲಿ ಯಾವುದೇ ಒತ್ತಡವನ್ನು ತೆಗೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಇದೇ ಅಂತರಾಷ್ಟ್ರೀಯ ಮತ್ತು ಐಪಿಎಲ್‌ ಟೂರ್ನಿಯಲ್ಲಿ ಮ್ಯಾಕ್ಸ್‌ವೆಲ್‌ ಆಟಕ್ಕೆ ಆದ ವ್ಯತ್ಯಾಸ ಅಂತ ಸೆಹ್ವಾಗ್‌ ಹೇಳಿದ್ದಾರೆ.

ಐಪಿಎಲ್‌ ಟೈಂನಲ್ಲಿ ಮ್ಯಾಕ್ಸ್‌ವೆಲ್‌ ಕ್ರಿಕೆಟ್‌ಗಿಂತ ಹೆಚ್ಚಾಗಿ ಗಾಲ್ಫ್‌ ಕಡೆಗೆ ಗಮನ ಹರಿಸುತ್ತಿದ್ದರು, ಆತ ಪ್ರ್ಯಾಕ್ಟಿಸ್‌ಗೂ ಹೆಚ್ಚು ಸಮಯ ನೀಡುತ್ತಿರಲಿಲ್ಲ. ಆತ ಐಪಿಎಲ್‌ನಲ್ಲಿ ಯಾವುದೇ ಒತ್ತಡ ತೆಗೆದುಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಐಪಿಎಲ್‌ಗೆ ಆತ ಬಂದಿದ್ದು ಕೇವಲ ಎಂಜಾಯ್‌ಮೆಂಟ್‌ಗೆ ಮಾತ್ರ, ಮ್ಯಾಚ್‌ ಟೈಂನಲ್ಲಿ ಎಲ್ಲವನ್ನು ಮಾಡುತ್ತಿದ್ದ ಸಹ ಆಟಗಾರರನನ್ನು ಉತ್ತೇಜಿಸುತ್ತಿದ್ದ ಸೆಲೆಬ್ರೆಷನ್‌ ಮಾಡುತ್ತಿದ್ದ ಆದ್ರೆ ರನ್‌ ಮಾತ್ರ ಗಳಿಸುತ್ತಿರಲಿಲ್ಲ ಅಂತ ಸೆಹ್ವಾಗ್‌ ಗಂಭೀರವಾಗಿ ಆರೋಪಿಸಿದ್ದಾರೆ.

ಮ್ಯಾಚ್‌ ಮುಗಿದ ಮೇಲೆ ಉಚಿತವಾಗಿ ಕೊಡುತ್ತಿದ್ದ ಡ್ರಿಂಕ್ಸ್‌ ತೆಗೆದುಕೊಂಡು ರೂಮ್‌ಗೆ ತೆರಳಿ ಕುಡಿಯುತ್ತಿದ್ದ ಎಂದು ಸೆಹ್ವಾಗ್‌ ಹೇಳಿದ್ದು. ಆತ ಆಟದ ವಿಚಾರದಲ್ಲಿ ಗಂಭೀರವಾಗಿದ್ದಾನೆ ಎಂದು ನನಗೆ ಯಾವತ್ತು ಅನಿಸಿರಲಿಲ್ಲ, ಆತಕ್ರಿಕೆಟ್‌ಗಿಂತ ಹೆಚ್ಚು ಗಾಲ್ಫ್‌ಗೆ ಪ್ರಾಮುಖ್ಯತೆ ಕೊಡುತ್ತಿದ್ದ, ಕ್ರಿಕೆಟ್‌ಗೆ ಆ ಪ್ರಾಮುಖ್ಯತೆ ಕೊಟ್ಟಿದ್ದರೆ ಅದು ಐಪಿಎಲ್‌ ಸಮಯದಲ್ಲಿ ಕಾಣಿಸುತ್ತಿದ್ದು ಎಂದು ಸೆಹ್ವಾಗ್‌ ಮ್ಯಾಕ್ಸ್‌ವೆಲ್‌ ವಿರುದ್ಧ ಹರಿಹಾಯ್ದಿದ್ದಾರೆ..

ಈ ವಿಚಾರವಾಗಿ ನಿಮ್ಮ ಅನಿಸಿಕೆ ಏನೂ ಸೆಹ್ವಾಗ್‌ ಹೇಳಿದ ರೀತಿ ಮ್ಯಾಕ್ಸ್‌ವೆಲ್‌ ಐಪಿಎಲ್‌ನಲ್ಲಿ ಕೇವಲ ಎಂಜಾಯ್‌ಮೆಂಟ್‌ಗೆ ಆಡುತ್ತಿದ್ದರಾ ಅಂತ ನಿಮಗೆ ಅನಿಸುತ್ತಿದೆಯಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top