ಐಪಿಎಲ್‌ನಲ್ಲಿ ಭಾರತೀಯಾ ಆಟಗಾರರ ಕಮಾಲ್‌, ಆರ್‌ಸಿಬಿಗೆ ಇವರೇ ಬೆಸ್ಟ್‌ ಫಿನಿಶರ್‌.

ಐಪಿಎಲ್‌ 2020ಯಲ್ಲಿ ಆರ್‌ಸಿಬಿ ಟೂರ್ನಿಯಿಂದ ಹೊರ ಬಂದ ಮೇಲೆ, ಆರ್‌ಸಿಬಿಯಲ್ಲಿನ ಪ್ಲಸ್‌ ಮತ್ತು ಮೈನಸ್‌ ವಿಚಾರವಾಗಿ ಮಾತನಾಡಲು ಶುರುಮಾಡಿದ್ದಾರೆ. ಈಗಾಗಲೇ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಕೆಲವ್ರು ವಿರಾಟ್‌ ನಾಯಕನಾಗಿ ಮುಂದುರೆಯ ಬಾರದು ಅಂದ್ರೆ ಇನ್ನು ಕೆಲವ್ರು ವಿರಾಟ್‌ ಜೊತೆಯಲ್ಲಿ ಕ್ವಾಲಿಟಿ ಆಟಗಾರರು ಇರಬೇಕು ಅಂತ ಮ್ಯಾನೇಜ್‌ಮೆಂಟ್‌ಗೆ ಸಲಹೆಯನ್ನು ನೀಡಿದ್ದಾರೆ. ಇದೀಗ ಟೀಂ ಇಂಡಿಯಾದ ಲೆಜೆಂಡರಿ ಆಟಗಾರ ಸುನಿಲ್‌ ಗವಾಸ್ಕರ್‌ ಆರ್‌ಸಿಬಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

ಆರ್‌ಸಿಬಿ ಬ್ಯಾಟಿಂಗ್‌ ಲೈನಪ್‌ನಲ್ಲಿ ಎಡವುತ್ತಿದ್ದು, ಇದೀಗ ಆರ್‌ಸಿಬಿಯ ಬೆಸ್ಟ್‌ ಫಿನಿಶರ್‌ ಯಾರು ಅನ್ನೋದನ್ನ ಗವಾಸ್ಕರ್‌ ಸೂಚಿಸಿದ್ದಾರೆ. ಅದರ ಜೊತೆಯಲ್ಲಿ ತಂಡಕ್ಕೆ ಸಲಹೆಯನ್ನು ನೀಡಿದ್ದಾರೆ. ಹೌದು ಸುನೀಲ್‌ ಗವಾಸ್ಕರ್‌ ಪ್ರಕಾರ ಆರ್‌ಸಿಬಿ ಬೆಸ್ಟ್‌ ಫಿನಿಶರ್‌ ಅಂದ್ರೆ ಅದು ಶಿವಂ ದುಬೆ ಅವರಿಗೆ ತಂಡದಲ್ಲಿ ಸರಿಯಾದ ಪಾತ್ರವನ್ನು ನೀಡುವ ಬಗ್ಗೆ ಯೋಚಿಸ ಬೇಕು. ದುಬೆಯ ಬ್ಯಾಟಿಂಗ್‌ ಲೈನಪ್‌ನಲ್ಲಿ ಆಟವನ್ನು ಆಡುತ್ತಿದ್ದಾರೆ. ಆತನಿಗೆ ಒಂದು ಕ್ರಮಾಂಕದಲ್ಲಿ ಆಡಲು ಅವಕಾಶ ಕೊಡಬೇಕು ಬಿಗ್‌ ಹಿಟ್‌ಗಳನ್ನು ಮಾಡುವಂತೆ ಹೇಳಬೇಕು. ಪಸ್ತುತ ಆತ ಗೊಂದಲದಲ್ಲಿದ್ದಾನೆ. ಆತನನ್ನು 5ನೇ ಕ್ರಮಾಂಕದಲ್ಲಿ ಕಳುಹಿಸಿ ಬಿಗ್‌ ಹಿಟ್ಟರ್‌ ಆಗಿ ಬಳಸ ಬೇಕು, ಆಗ ಎಬಿಡಿ ಮತ್ತು ಕೊಹ್ಲಿ ಮೇಲಿನ ಒತ್ತಡ ಕಡಿಮೆಯಾಗಲಿದೆ ಅಂತ ಹೇಳಿದ್ದಾರೆ.

ಮುಂದಿನ ಸೀಸನ್‌ನಲ್ಲಿ ದುಬೆಯನ್ನು ಫಿನಿಶರ್‌ ಆಗಿ ತಂಡ ಬಳಸಿಕೊಳ್ಳ ಬೇಕು, ಆತನ ಮೇಲೆ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಪ್ರಯೋಗವನ್ನು ಮಾಡಬಾರದು, ಒಂದೇ ಕ್ರಮಾಂಕದಲ್ಲಿ ಇಳಿಸಿ ರನ್‌ ಗಳಿಸಲು ಅವಕಾಶ ಮಾಡಿಕೊಡಬೇಕು ಎಂದು ಸಹಲೆ ನೀಡಿದ್ದು, ಜೊತೆಗೆ ಮುಂದಿನ ಸೀಸನ್‌ಗಳಲ್ಲಿ ದುಬೆ ಆರ್‌ಸಿಬಿ ಪಾಲಿನ ಬೆಸ್ಟ್‌ ಫಿನಿಶರ್‌ ಆಗಲಿದ್ದಾರೆ ಅಂತ ಗವಾಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಭಾರತೀಯ ಪ್ರತಿಭೆಗಳು ಉತ್ತಮ ಪ್ರದರ್ಶನ ನೀಡಿದ್ದು, ಇದೀಗ ಹೈದರಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ತಂಡದ ವೇಗಿ ಭಾರತೀಯ ಪ್ರತಿಭೆ ಟಿ. ನಟರಾಜನ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಹೈದರಬಾದ್‌ ಪರ ಸೂಪರ್‌ ಬೌಲಿಂಗ್‌ ಮಾಡಿರೋ ಟಿ.ನಟರಾಜನ್‌ ಸದ್ಯ ಐಪಿಎಲ್‌ನಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ಅಂತಾನೇ ಹೇಳಲಾಗುತ್ತಿದೆ, ಇದೀಗ ವಾರ್ನ್‌ರ್‌ ಮೆಚ್ಚುಗೆ ಮಾತುಗಳನ್ನು ಹೇಳಿದ್ದು, ನಟರಾಜನ್‌ ಈ ಆವೃತ್ತಿಯ ಅನ್ವೇಶಣೆಯಾಗಿದ್ದಾರೆ. ಆತ ಓರ್ವ ಅದ್ಭುತ ವೇಗದ ಬೌಲರ್‌ ಅಂತ ಹೊಗಳಿದ್ದಾರೆ. ಇನ್ನು ಟಿ ನಟರಾಜನ್‌ ಈ ಈ ಬಾರಿಯ ಐಪಿಎಲ್‌ನಲ್ಲಿ 100ಕ್ಕೂ ಹೆಚ್ಚು ಯಾರ್ಕರ್‌ಗಳನ್ನು ಎಸೆದು ಯಾರ್ಕರ್‌ ಸ್ಪೆಷಲಿಸ್ಟ್‌ ಅಂತ ಕರೆಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಟೀಂ ಇಂಡಿಯಾಕ್ಕಾಗಿ ಬಿಸಿಸಿಐ ಬಾಗಿಲು ತಟ್ಟುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತಾನೇ ಹೇಳಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top