ಐಪಿಎಲ್‌ನಲ್ಲಿ ಬಂದ ಹಣವನ್ನು ನಾನು ಹೀಗೆ ಖರ್ಚು ಮಾಡ್ತೀನಿ..! ಪ್ಯಾಟ್ ಕಮ್ಮಿನ್ಸ್..!

2020ರಲ್ಲಿ ಶುರುವಾಗಲಿರೋ ಐಪಿಎಲ್‌ ಪಂದ್ಯಕ್ಕೆ ಈಗಾಗಲೇ ಹರಾಜು ಪ್ರಕ್ರಿಯೆ ಮುಗಿದಿದ್ದು, ಐಪಿಎಲ್‌ ಹರಾಜಿನಲ್ಲಿ ಕೆಲವು ಪ್ಲೇಯರ್ಸ್‌ಗಳು ಉತ್ತಮ ಮೊತ್ತಕ್ಕೆ ಬಿಡ್‌ ಆಗಿದ್ದಾರೆ. ಅದರಲ್ಲೂ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡಕ್ಕೆ ದೊಡ್ಡ ಮೊತ್ತಕ್ಕೆ ಬಿಕರಿಯಾದ ಪ್ಯಾಟ್ ಕಮ್ಮಿನ್ಸ್ , ಈ ಬಾರಿಯ ಐಪಿಎಲ್‌ನ ದೊಡ್ಡ ಮೊತ್ತಕ್ಕೆ ಹರಾಜಾದ ಆಟಗಾರರಾಗಿದ್ದಾರೆ. 15.5ಕೋಟಿ ಮೊತ್ತಕ್ಕೆ ಕೆಕೆಆರ್ ತಂಡಕ್ಕೆ ಸೇಲ್‌ ಆದ ಪ್ಯಾಟ್ ಕಮ್ಮಿನ್ಸ್ , ಒಂದು ವಿಚಿತ್ರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಐಪಿಎಲ್‌ನಲ್ಲಿ ಬರುವ ಹಣವನ್ನು ವ್ಯಯ ಮಾಡಲು ಮುಂದಾಗಿದ್ದಾರೆ. ಹೌದು ತನ್ನ ಪ್ರೇಯಸಿ ಬೆಕಿ ಬೋಸ್ಟನ್‌ ಅವರ ಆ ಒಂದು ವಿಚಿತ್ರ ಬೇಡಿಕೆಗೆ ಪ್ಯಾಟ್ ಕಮ್ಮಿನ್ಸ್ ಮುಂದಾಗಿದ್ದಾರೆ.

ಏನದು ವಿಚಿತ್ರ ಬೇಡಿಕೆ..!

ಪ್ಯಾಟ್ ಕಮ್ಮಿನ್ಸ್ ಮತ್ತು ಬೆಕಿ ಬೋಸ್ಟನ್‌ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, ಈಗ ತನ್ನ ಪ್ರಿಯತಮನ ಬಳಿ ಪ್ರೇಯಸಿ ಒಂದು ಬೇಡಿಕೆಯನ್ನು ಇಟ್ಟಿದ್ದಾಳೆ. ಆದೇನೂ ಅಂದ್ರೆ ಐಪಿಎಲ್‌ನಲ್ಲಿ ಬರುವ ಹಣವನ್ನು ತಾನು ಪ್ರೀತಿಯಿಂದ ಸಾಕಿರುವ ನಾಯಿಗೆ ಆಟಿಕೆಗಳನ್ನು ಕೊಂಡುಕೊಳ್ಳಬೇಕು ಅನ್ನೋದು ಬೆಕಿ ಬೋಸ್ಟನ್‌ ಅವರ ಬೇಡಿಕೆಯಾಗಿದೆ. ಒಟ್ಟಿನಲ್ಲಿ ಪ್ರೇಯಸಿಯ ಈ ವಿಚಿತ್ರ ಬೇಡಿಕೆಯನ್ನು ಈಡೇರಿಸಲು ಮುಂದಾಗಿರೋ ಪ್ಯಾಟ್ ಕಮ್ಮಿನ್ಸ್ ಅವರ ಈ ನಿರ್ಧಾರವನ್ನು ನೆಟ್ಟಿಗರು ಸಖತ್‌ ಕಾಮಿಡಿ ಮಾಡಲು ಶುರುಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top