ಐಪಿಎಲ್‌ನಲ್ಲಿ ಎಬಿಡಿ ಈ ದಾಖಲೆ ಮುರಿಯಲು ಸಾಧ್ಯವಿಲ್ಲ..

ಐಪಿಎಲ್‌ 2020 ಪ್ರತಿ ದಿನ ರೋಚಕತೆಯಿಂದ ಕೂಡಿದ್ದು, ಈಗಾಗಲೇ ಐಪಿಎಲ್‌ನಲ್ಲಿ ಒಂದಿಲ್ಲೊಂದು ದಾಖಲೆಗಳು ಸೃಷ್ಟಿಯಾಗುತ್ತಿದೆ. ಇನ್ನು ಆರ್‌ಸಿಬಿ ಕೂಡ ತಾನು ಆಡಿದ ಪ್ರತಿ ಪಂದ್ಯದಲ್ಲೂ ಒಂದಿಲ್ಲೋಂದು ರೆಕಾರ್ಡ್‌ ಕ್ರಿಯೇಟ್‌ ಮಾಡ್ತಾ ಇದ್ದು, ಸದ್ಯ ಉತ್ತಮ ಪ್ರದರ್ಶನದಲ್ಲಿರೋ ಆರ್‌ಸಿಬಿ, ಚೆನ್ನೈ ಮತ್ತು ಕೆಕೆಆರ್‌ ತಂಡಗಳ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸುವ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇನ್ನು ದಾಖಲೆ ವಿಚಾರಕ್ಕೆ ಬಂದ್ರೆ ಪ್ರತಿ ಐಪಿಎಲ್‌ನಲ್ಲೂ ಒಂದಿಲ್ಲೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡ್ತಾನೆ ಇರುತ್ತೆ ಆರ್‌ಸಿನಿ ತಂಡ. ಹೌದು ಅತೀ ಹೆಚ್ಚು ರನ್‌ ಹೊಡೆಯೋದಾರ್ಗಿಲಿ.ಕಡಿಮೆ ರನ್‌ಗೆ ಅಲೌಟ್‌ ಆಗೋದಿರ್ಲಿ ಎಲ್ಲವೂ ಆರ್‌ಸಿಬಿ ದಾಖಲೆಯಲ್ಲಿದೆ. ಇದೀಗ ಆರ್‌ಸಿಬಿಯ ಆಟಗಾರ ಎಬಿ ಡಿ ವಿಲಿಯರ್ಸ್‌ ಮತ್ತೊಂದು ಹೊಸ ದಾಖಲೆ ಬರೆಯೋ ಮೂಲಕ ಆರ್‌ಸಿಬಿ ರೆರ್ಕಾಡ್‌ ಬುಕ್‌ಗೆ ಮತ್ತೊಂದು ದಾಖಲೆ ಸೇರ್ಪಡೆ ಮಾಡಿದ್ದಾರೆ.

ಹೌದು ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿರೋ ಎಬಿಡಿ ಕೆಕೆಆರ್‌ ವಿರುದ್ಧ ಪಂದ್ಯದಲ್ಲಿ 33 ಬಾಲ್‌ಗಳಲ್ಲಿ 77 ರನ್‌ ಬಾರಿಸೋ ಮೂಲಕ ಆರ್‌ಸಿಬಿ ತಂಡಕ್ಕೆ ಬೃಹತ್‌ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾದ್ರು, ಇನ್ನುಆರ್‌ಸಿಬಿ ಪಂದ್ಯಗೆಲ್ಲಲು ಪ್ರಮುಖ ಪಾತ್ರ ವಹಿಸೋ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆಯೋ ಮೂಲಕ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ಎಬಿಡಿ ವಿಲಿಯರ್ಸ್‌ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪಡೆಯೋ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಮ್ಯಾನ್‌ ಆಫ್‌ ದಿ ಮ್ಯಾಚ್‌ ಪಡೆದ ಐಪಿಎಲ್‌ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಬಿಡಿ ವಿಲಿಯರ್ಸ್‌ ಇದುವರೆಗೂ ತಾವು ಆಡಿರೋ ಐಪಿಎಲ್‌ ಪಂದ್ಯದಲ್ಲಿ ಒಟ್ಟು 22 ಮ್ಯಾನ್‌ ಆಫ್‌ ದಿ ಮ್ಯಾಚ್‌ ಪಡೆಯೋ ಮೂಲಕ ಅತಿ ಹೆಚ್ಚು ಮ್ಯಾನ್‌ಆಫ್‌ ದಿ ಮ್ಯಾಚ್‌ ಪಡೆದ ಮೊದಲ ಆಟಗಾರ ಅನ್ನೋ ರೆಕಾರ್ಡ್‌ನ ಕ್ರಿಯೇಟ್‌ ಮಾಡಿದ್ದಾರೆ. ಇನ್ನು ಕ್ರಿಸ್‌ ಗೇಲ್‌ 21 ಮತ್ತು ರೋಹಿತ್‌ ಶರ್ಮಾ 18 ಬಾರಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪಡೆಯೋ ಮೂಲಕ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಸದ್ಯ 22 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆಯೋ ಮೂಲಕ ಹೊಸ ದಾಖಲೆ ಎಬಿಡಿ ಬರೆದಿದ್ರೆ, ಇತ್ತ ಆರ್‌ ಸಿ ಬಿ ಅಭಿಮಾನಿಗಳು ಯಾವುದೇ ದಾಖಲೆ ಇರ್ಲಿ ಅದು ಕೇವಲ ಆರ್‌ಸಿಬಿ ಹೆಸರಲ್ಲಿ ಇರಬೇಕು ಅಂತ ಹೇಳ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top