ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಅವಕಾಶ ಕೊಡಿ ಎಂದ ಸ್ಟಾರ್‌ ಆಟಗಾರ

ಐಪಿಎಲ್‌ನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ತಂಡ ಫೇವರೆಟ್‌ ತಂಡವಾಗಿರುತ್ತದೆ, ಇನ್ನು ಆಟಗಾರರಿಗೆ ಕೆಲವೊಮ್ಮೆ ಯಾವುದೋ ತಂಡ ಫೇವರೆಟ್‌ ಆಗಿದ್ದರು, ಇನ್ಯಾವುದೋ ತಂಡದ ಪರವಾಗಿ ಆಡಬೇಕು ಅಂತ ಅನಿಸುತ್ತದೆ. ಆದ್ರೆ ಇದೀಗ ಒಬ್ಬ ಆಟಗಾರ ಮುಂದಿನ ಐಪಿಎಲ್‌ನಲ್ಲಿ ನನಗೆ ಆರ್‌ಸಿಬಿ ಪರ ಆಡಲು ಚಾನ್ಸ್‌ ನೀಡಿ ಅಂತ ಕೇಳಿಕೊಂಡಿದ್ದಾರೆ. ಇನ್ನು ಇದಕ್ಕೆ ಆರ್‌ಸಿಬಿ ಕೂಡ ಉತ್ತರವನ್ನು ನೀಡಿದೆ. ಹಾಗಾದ್ರೆ ಈ ರೀತಿ ಕೇಳಿರೋದು ಯಾರು, ಆರ್‌ಸಿಬಿ ನೀಡಿದ ಉತ್ತರ ಏನು ಅನ್ನೋದನ್ನ ನಾವ್‌ ಇವತ್ತು ನೋಡೋಣ.

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳ ಕ್ರೇಜ್‌ ಸ್ವಲ್ಪ ಜಾಸ್ತೀನೇ ಅಂತಾನೇ ಹೇಳಬಹುದು, ಕಪ್‌ ಗೆಲ್ಲದಿದ್ದರು ಆ ಅಭಿಮಾನ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ, ಇದೀಗ ಆರ್‌ಸಿಬಿ ಪರ ನನಗೆ ಮುಂದಿನ ಐಪಿಎಲ್‌ನಲ್ಲಿ ಆಡಲು ಅವಕಾಶವನ್ನು ಕೊಡಿ ಅಂತ ಒಬ್ಬ ಆಟಗಾರ ಕೇಳಿದ್ದಾರೆ. ಆದ್ರೆ ಈ ಆಟಗಾರ ಕ್ರಿಕೆಟ್‌ ಪ್ಲೇಯರ್‌ ಅಲ್ಲ ಅನ್ನೋದೇ ವಿಶೇಷ, ಹೌದು ಇಂಗ್ಲೆಂಡ್‌ನ ಸ್ಟಾರ್‌ ಫುಟ್‌ಬಾಲ್‌ ಪ್ಲೇಯರ್‌ ಹ್ಯಾರಿ ಕೇನ್‌ ಇದೀಗ ನನಗೆ ಮುಂದಿನ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲು ಅವಕಾಶ ನೀಡಿ ಅಂತ ಕೇಳಿದ್ದಾರೆ. ನನ್ನಲ್ಲಿ ಟಿ೨೦ ಮ್ಯಾಚ್‌ ಗೆಲ್ಲಿಸುವ ಸಾಮರ್ಥ್ಯ ಇದೆ. ಮುಂದಿನ ಸೀಸನ್‌ನಲ್ಲಿ ಆರ್‌ಸಿಬಿಯಲ್ಲಿ ಆಡುವ ಅವಕಾಶ ಇದ್ಯಾ ಅಂತ ಟ್ವೀಟ್‌ ಮಾಡಿ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ಆರ್‌ಸಿಬಿ ಕೂಡ ಟ್ವೀಟ್‌ ಮಾಡಿದ್ದು, ನಿಮಗೆ 10ನೇ ನಂಬರ್‌ ಜೆರ್ಸಿ ನೀಡುತ್ತೇವೆ ಅಂತ ಟ್ವೀಟ್‌ ಮಾಡಿದ್ದಾರೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಆಗಿದ್ದು, ಕೆಲವ್ರು ಅವಕಾಶ ಕೊಟ್ಟಿ ನೋಡಬಹುದಿತ್ತು ಅಂತ ತಮಾಷೆ ಮಾಡುತ್ತಿದ್ದಾರೆ.

ಇನ್ನು ಇದೀಗ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಆರ್‌ಸಿಬಿ ಆಟಗಾರನೇ ಅಪಸ್ವರ ಎತ್ತಿದ್ದು, ರೋಹಿತ್‌ ಶರ್ಮಾ ಪರ ಬ್ಯಾಟ್‌ ಬೀಸಿದ್ದಾರೆ. ಹೌದು ಆರ್‌ಸಿಬಿ ಪರ ಆಡುತ್ತಿರೋ ವಿಕೇಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ರೋಹಿತ್‌ ಶರ್ಮಾ ರೀತಿಯಲ್ಲಿ ವಿರಾಟ್‌ ಕೊಹ್ಲಿಗೆ ಟೂರ್ನಿ ಗೆಲ್ಲುವ ಕಲೆ ತಿಳಿದಿಲ್ಲ ಅಂತ ಹೇಳಿದ್ದಾರೆ. ನಾನು ಇಬ್ಬರ ನಾಯಕತ್ವದಲ್ಲಿ ಮೂರು ವರ್ಷ ಆಡಿದ್ದೇನೆ. ನನ್ನ ಪ್ರಕಾರ ರೋಹಿತ್‌ ಎಲ್ಲಾ ವಿಚಾರದಲ್ಲೂ ಒಳ್ಳೇ ನಾಯಕ, ರೋಹಿತ್‌ ಒತ್ತಡದ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ವಿರಾಟ್‌ ಕೊಹ್ಲಿಗೆ ಆ ವಿಚಾರಗಳು ತಿಳಿದಿಲ್ಲ ಅಂತ ಪಾರ್ಥಿವ್‌ ಪಟೇಲ್‌ ಹೇಳಿದ್ದಾರೆ.

ಸದ್ಯ ಪಾರ್ಥಿವ್‌ ಪಟೇಲ್‌ ಅವರ ಈ ಹೇಳಿಕೆಗೆ ಇದೀಗ ಆರ್‌ಸಿಬಿ ಅಭಿಮಾನಿಗಳು ಈ ಬಾರಿಯ ಸೀಸನ್‌ನಲ್ಲಿ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಗದ ಕಾರಣ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಅಂತ ಪಾರ್ಥಿವ್‌ ಪಟೇಲ್‌ ಅವರನ್ನು ಕಾಲೆಳೆಯುತ್ತಿದ್ದಾರೆ.

ಹಾಗಾದ್ರೆ ಹ್ಯಾರಿ ಕೇನ್‌ ಟ್ವೀಟ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು ಕೊಹ್ಲಿ ವಿಚಾರದಲ್ಲಿ ಪಾರ್ಥಿವ್‌ ಪಟೇಲ್‌ ನೀಡಿರೋ ಹೇಳಿ ಬಗ್ಗೆ ನೀವ್‌ ಏನ್‌ ಹೇಳ್ತೀರಾ ನಮಗೆ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top