ಐಪಿಎಲ್‌ನಲ್ಲಿ ಆರೆಂಜ್‌ ಕ್ಯಾಪ್‌ ರಾಹುಲ್‌ಗೆ ಫಿಕ್ಸ್‌.ಪರ್ಪಲ್‌ ಕ್ಯಾಪ್‌ ಯಾರಿಗೆ..

ಐಪಿಎಲ್‌ 2020 ಈಗಾಗಲೇ ಎರಡನೇ ಹಂತಕ್ಕೆ ಕಾಲಿಟ್ಟು, ಎಲ್ಲಾ ತಂಡಗಳು ಪ್ಲೇ ಆಫ್‌ ಕನಸನ್ನು ಕಾಣುತ್ತಿದೆ. ಈಗಾಗಲೇ ಟಾಪ್‌ ನಾಲ್ಕರಲ್ಲಿ ಸ್ಥಾನ ಪಡೆದಿರೋ ತಂಡಗಳು ಪ್ಲೇ ಆಫ್‌ ಕನಸು ಪಕ್ಕಾ ಆಗಿದ್ರೆ, ಇತ್ತ ಕಳ ಸ್ಥಾನದಲ್ಲಿರೋ ನಾಲ್ಕು ತಂಡಗಳು ಪ್ಲೇ ಆಫ್‌ ಕನಸಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ನಿನ್ನೆ ನಡೆದ ರಾಜಸ್ತಾನ್‌ ರಾಯಲ್ಸ್‌ ವಿರುದ್ಧ ಪಂದ್ಯದಲ್ಲಿ ಚೆನ್ನೈ ಸೋಲು ಕಾಣುವ ಮೂಲಕ ಪ್ಲೇ ಆಫ್‌ ಕನಸು ಕರಗಿದೆ. ಇನ್ನು ಟೂರ್ನಿಯಲ್ಲಿ ಈಗಾಗಲೇ ರನ್‌ಗಳ ಸುರಿಮಳೆ ಒಂದು ಕಡೆ ಬರ್ತಾ ಇದ್ರೆ, ಇತ್ತ ಬೌಲರ್‌ಗಳು ವಿಕೆಟ್‌ ಕೀಳುವುದರಲ್ಲು ಯಶಸ್ವಿಯಾಗಿದ್ದಾರೆ. ಹೊಡಿಬಡಿ ಆಟದಲ್ಲಿ ಈ ಬಾರಿ ಅತಿ ಹೆಚ್ಚು ರನ್‌ ಯಾರುಗಳಿಸಿದ್ದಾರೆ ಅಂತ ನೋಡೋದಾದ್ರೆ, ಐಪಿಎಲ್‌ ಶುರುವಿನಿಂದಲೂ ಟಾಪ್‌ ಸ್ಕೋರರ್‌ ಆಗಿ ಕೆ ಎಲ್‌ ರಾಹುಲ್‌ ಆರೇಂಜ್‌ ಕ್ಯಾಪ್‌ ಧರಿಸಿದ್ದು ಆಡಿದ 9 ಪಂದ್ಯಗಳಿಂದ 525ರನ್‌ಗಳನ್ನು ಸಿಡಿಸೋ ಮೂಲಕ ಟಾಪ್‌ ಸ್ಕೋರರ್‌ ಪಟ್ಟಿಯಲ್ಲಿ ನಂಬರ್‌ 1 ಸ್ಥಾನ ಪಡೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಮಾಯಾಂಕ್‌ ಅಗರ್‌ವಾಲ್‌ 393ರನ್‌ಗಳಿಸಿದ್ದು, ಕನ್ನಡಿಗರು ಇಬ್ಬರು ಟಾಪ್‌ ಎರಡರಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಟಾಪ್‌ ಸ್ಕೋರ್‌ನಲ್ಲಿ ರಾಹುಲ್‌ ಈಗಾಗಲೇ 500ಕ್ಕೂ ಹೆಚ್ಚು ರನ್‌ ಬಾರಿಸಿದ್ದು ಸದ್ಯ ಅವರನ್ನು ಬೇರೆ ಬ್ಯಾಟ್ಸ್‌ಮನ್‌ ಟಚ್‌ ಮಾಡುವುದು ಕಷ್ಟವಿದ್ದು ಈ ಕಾರಣಕ್ಕಾಗಿ ಆರೆಂಜ್‌ ಕ್ಯಾಪ್‌ ಈ ಟೂರ್ನಿಯಲ್ಲಿ ಅವರಲ್ಲೇ ಉಳಿಯೋದು ಬಹುತೇಕ ಪಕ್ಕಾ.

ಪರ್ಪಲ್‌ ಕ್ಯಾಪ್‌ಗಾಗಿ ಸಖತ್‌ ಫೈಟ್‌

ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಕೇವಲ ರನ್‌ ಹೊಳೆ ಮಾತ್ರವಲ್ಲ ಬೌಲರ್‌ಗಳು ವಿಕೆಟ್‌ ಮತ್ತು ರನ್‌ಗೆ ಕಡಿವಾಣ ಹಾಕೋದ್ರಲ್ಲೂ ಯಶಸ್ವಿಯಾಗಿದ್ದಾರೆ. ಸದ್ಯ ಪರ್ಪಲ್‌ ಕ್ಯಾಪ್‌ ಡೆಲ್ಲಿ ಬೌಲರ್‌ ರಬಡಾ ತಲೆ ಮೇಲೆ ಇದ್ದು, 9 ಪಂದ್ಯದಲ್ಲಿ 19 ವಿಕೆಟ್‌ ಕಬಳಿಸಿ ಟಾಪ್‌ 1 ಸ್ಥಾನವನ್ನು ಅಲಂಕರಿಸಿದ್ರೆ, ಇತ್ತ ಮುಂಬೈನ ಬುಮ್ರಾ ೯ ಪಂದ್ಯಗಳಲ್ಲಿ 15 ವಿಕೆಟ್‌ ಕಬಳಿಸೋ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಇವರಿಬ್ಬ ನಡುವೆ ಪರ್ಪಲ್‌ ಕ್ಯಾಪ್‌ಗಾಗಿ ಫೈಟ್‌ ನಡೀತಾ ಇದ್ದು, ಒಂದು ಮ್ಯಾಚ್‌ನಲ್ಲಿ ಯಾರದರು ಒಬ್ಬ ಬೌಲರ್‌ 3ಕ್ಕಿಂತ ಹೆಚ್ಚು ವಿಕೆಟ್‌ ಕಿತ್ತರೂ ಇವರಿಬ್ಬರ ಸ್ಥಾನಕ್ಕೆ ಕುತ್ತು ಬರೋದಂತು ಗ್ಯಾರಂಟಿ.

ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಸರ್‌ಗಳದ್ದೇ ಸುರಿಮಳೆ..

ಈ ಬಾರಿಯ ಐಪಿಎಲ್‌ನಲ್ಲಿ ಈಗಾಗಲೇ ಭರ್ಜರಿ ಸಿಕ್ಸರ್‌ ಸುರಿಮಳೆಗಳು ಬಂದಿದ್ದು, ಪತ್ರಿ ಪಂದ್ಯದಲ್ಲೂ ಎರಡರಿಂದ ಮೂರು ಸಿಕ್ಸ್‌ ಇದ್ದೆ ಇರುತ್ತದೆ. ಇದುವರೆಗೂ ಒಟ್ಟು 487 ಸಿಕ್ಸ್‌ ಹೊರಬಂದಿದ್ದು, ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮಿಸ್ಟರ್‌ 360 ಎಬಿ ಡಿ ವಿಲಿಯರ್ಸ್‌ ಇದ್ದು ೯ ಪಂದ್ಯದಲ್ಲಿ 19 ಸಿಕ್ಸ್‌ಗಳನ್ನು ಸಿಡಿಸಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ನಿಕೊಲರ್‌ ಪುರಾನ್‌ 19 ಸಿಕ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ 10 ಪಂದ್ಯದಲ್ಲಿ 19 ಸಿಕ್ಸ್‌ ಸಿಡಿಸುವ ಮೂಲಕ ಸಂಜು ಸ್ಯಾಮನ್ಸನ್‌ ಮೂರನೇ ಸ್ಥಾನದಲ್ಲಿದ್ದಾರೆ.

ಒಟ್ಟಿನಲ್ಲಿ ಈ ಬಾರಿಯ ಐಪಿಎಲ್‌ ನಡೆಯುವುದೇ ಕಷ್ಟ ಅನ್ನೋ ವೇಳೆ, ಬಿಸಿಸಿಐ ದೊಡ್ಡ ಸಾಹಸಕ್ಕೆ ಕೈ ಹಾಕುವ ಮೂಲಕ ದುಬೈನಲ್ಲಿ ಯಶಸ್ವಿಯಾಗಿ ಐಪಿಎಲ್‌ ಟೂರ್ನಿಯನ್ನು ನಡೆಸುತ್ತಿದ್ದು, ಐಪಿಎಲ್‌ನಲ್ಲಿ ಆಟಗಾರರು ದಾಖಲೆ ಮೇಲೆ ದಾಖಲೆ ಬರೆಯೋ ಮೂಲಕ ಕ್ರಿಕೆಟ್‌ ಪ್ರಿಯರಿಗೆ ರಸದೌತಣವನ್ನು ನೀಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top