ಐಂದ್ರಿತಾ-ದಿಗಂತ್‌ಗೆ ಬಿಗ್‌ ರಿಲೀಫ್‌..

ಸ್ಟಾರ್‌ ದಂಪತಿ ದಿಗಂತ್‌ ಮತ್ತು ಐಂದ್ರಿತಾ ಅವರನ್ನು ಇಂದು ಡ್ರಗ್‌ ಕೇಸ್‌ಗೆ ಸಂಬಂಧಿಸಿದಂತೆ ಸಿಸಿಬಿ ಇಂದು ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು, ಅದರಂತೆ ವಿಚಾರಣೆ ಹಾಜರಾಗಿದ್ದ ದಂಪತಿಗಳು ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ ಎಂದು ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಹೇಳಿದ್ದಾರೆ. ದಿಗಂತ್‌ ಮತ್ತು ಐಂದ್ರಿತಾ ವಿಚಾರಣೆಯಲ್ಲಿ ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಇಂದು ವಿಚಾರಣೆ ನಡೆಸಿ ಮುಂದಿನ ದಿನದಲ್ಲಿ ಯಾವಾಗ ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂಬುದನ್ನು ತಿಳಿಸಲಾಗುವುದು ಎಂದು ಸಂದೀಪ್‌ ಪಾಟೀಲ್‌ ಹೇಳಿದ್ರು. ಇಂದು ಬೆಳಿಗ್ಗೆಯಿಂದ ವಿಚಾರಣೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಇಂದು ಸ್ಟಾರ್‌ ದಂಪತಿಗಳನ್ನು ವಶಕ್ಕೆ ಪಡೆಯುತ್ತಾರ ಅನ್ನೋ ಅನುಮಾನಗಳು ಶುರುವಾಗಿತ್ತು, ಆದ್ರೆ ಸ್ಟಾರ್‌ ದಂಪತಿಗಳಿಗೆ ಬಿಗ್‌ ರಿಲೀಫ್‌ ಸಿಕ್ಕಿತ್ತು. ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ದಿಗಂತ್‌ ಮತ್ತು ಐಂದ್ರಿತಾಗೆ ನೀಡಲಾಗುವುದು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top