ಏನಿದು ಕಪಲ್‌ ಚಾಲೆಂಜ್‌..? ಹೇಗೆ ಶುರುವಾಯ್ತು ಗೊತ್ತಾ ಈ ಚಾಲೆಂಜ್‌..

ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ರೀತಿಯ ಹೊಸ ಹೊಸ ತರಹೇವಾರಿ ಕಾನ್ಸೆಪ್ಟ್‌ಗಳು ಹುಟ್ಟಿಕೊಳ್ತಾನೆ ಇರ್ತಾವೆ..ನೀವು ಇದುವರೆಗೂ ಬಕೆಟ್‌ ಚಾಲೆಂಜ್‌..ಕಿಕಿ ಚಾಲೆಂಜ್‌..ಹೀಗೆ ಅನೇಕ ಚಾಲೆಂಜ್‌ಗಳನ್ನು ನೀವು ನೋಡಿರ್ತಿರಾ, ಇನ್ನು ಕೊರೋನಾ ಎಫೆಕ್ಟ್‌ನಿಂದಾಗಿ ಲಾಕ್‌ಡೌನ್‌ ಆದ ಸಮಯದಲ್ಲಿ ಎಲ್ಲಾ ಮನೆಯಲ್ಲೇ ಇದ್ದುದ್ದರಿಂದ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಟ್ಯಾಲೆಂಟ್‌ಗಳನ್ನು ಕೂಡ ತೋರಿಸಿದ್ದಾರೆ. ಆದ್ರೆ ಇತ್ತಿಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಒಂದು ಚಾಲೆಂಜ್‌ ತುಂಬಾ ವೈರಲ್‌ ಕೂಡ ಆಗಿದೆ. ಅದು ಬೇರೆ ಯಾವುದು ಅಲ್ಲ ಕಪ್‌ ಚಾಲೆಂಜ್‌ ಅನ್ನೋ ಹೊಸ ಚಾಲೆಂಜ್‌..

ಈ ಚಾಲೆಂಜ್‌ನಲ್ಲಿ ತಮ್ಮ ಪತ್ನಿ ಅಥವಾ ಪತಿ ಜೊತೆ ಫೋಟೋವನ್ನುತೆಗೆದು ಫೇಸ್‌ಬುಕ್‌ಗೆ ಹಾಕುವ ಒಂದು ಚಾಲೆಂಜ್‌ ಇದಾಗಿದ್ದು, ಸದ್ಯ ಈ ಚಾಲೆಂಜ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಮತ್ತುಟ್ರೆಂಡ್‌ ಕೂಡ ಆಗಿದೆ.
ನೀವು ಫೇಸ್‌ಬುಕ್‌ ಓಪನ್‌ ಮಾಡಿದ ಕೂಡಲೇ ನಿಮ್ಮ ಕಣ್ಣಿಗೆ ಮೊದಲು ಕಾಣಿಸೋದು ಕಪಲ್‌ಗಳ ಫೋಟೋ ,ಕಪಲ್‌ ಚಾಲೆಂಜ್‌ ಅನ್ನೋ ಹ್ಯಾಶ್‌ ಟ್ಯಾಗ್‌ ಮೂಲಕ ಅಪ್ಲೋಡ್‌ ಆಗಿರುತ್ತದೆ. ಆದ್ರೆ ಈ ಕಪಲ್‌ ಚಾಲೆಂಜ್‌ ಹುಟ್ಟಿಕೊಂಡಿದ್ದು ಹೇಗೆ , ಏನಿದರ ಉದ್ದೇಶ ಅನ್ನೋದನ್ನ ಇವತ್ತು ನಾವ್‌ ನೋಡೋಣ.

ಲಾಕ್‌ಡೌನ್‌ ಸಮಯದಲ್ಲಿ ಎಲ್ಲರೂ ಮನೆಯವರ ಜೊತೆ ಕಾಲ ಕಳೆಯಲು ತುಂಬಾ ಸಮಯ ಸಿಕ್ಕಿತ್ತು. ಈ ವೇಳೆ ಮನೆಯವ ಜೊತೆ ಅಡುಗೆ ಮಾಡುವುದು, ಹರಟೆ ಹೊಡೆಯುವುದು ಹೀಗೆ ಅನೇಕ ವಿಚಾರಗಳ ಜೊತೆ ಕಾಲ ಕಳೆದಿದ್ದಾರೆ. ಹೀಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಹಾಲಿವುಡ್‌ ಪ್ರಸಿದ್ಧರಾದ ಜೆನ್ನಿಫರ್‌ ಲೋಪೆಜ್‌ ಮತ್ತು ಅಲೆಕ್ಸ್‌ ರೊಡ್ರಿಗಸ್‌ ಈ ಒಂದು ಕಪಲ್‌ ಚಾಲೆಂಜ್‌ ಅನ್ನು ಶುರುಮಾಡಿದ್ರು, ಇವರು ಶುರುಮಾಡಿದ ಈ ಕಪಲ್‌ ಚಾಲೆಂಜ್‌ ಇದೀಗ ದೊಡ್ಡ ಮಟ್ಟದಲ್ಲಿ ವೈರಲ್‌ ಕೂಡ ಆಗಿದೆ.

ಈ ಮೊದಲು ಇದು ಟಿಕ್‌ಟಾಕ್‌ನಲ್ಲಿ ಸಖತ್‌ ಸೌಂಡ್‌ ಮಾಡಿತ್ತು, ಆದ್ರೆ ಟಿಕ್‌ ಟಾಕ್‌ ಬ್ಯಾನ್‌ ಆದ ಮೇಲೆ ಈ ಚಾಲೆಂಜ್‌ ಫೇಸ್‌ಬುಕ್‌ನಲ್ಲಿ ಸಖತ್‌ ವೈರಲ್‌ ಆಗಲು ಶುರುವಾಯ್ತು.

ಇನ್ನು ಈ ಕಪಲ್‌ ಚಾಲೆಂಜ್‌ನಲ್ಲಿ ವಿಡಿಯೋ ಮಾಡಿ ಕೆಲವ್ರು ಅಪ್ಲೋಡ್‌ ಮಾಡ್ತಾರೆ. ಪತಿ ಮತ್ತು ಪತ್ನಿ ಕುಳಿತು ಇಬ್ಬರಲ್ಲಿ ಯಾರು ಹೇಗೆ ಅನ್ನೋ ಪ್ರಶ್ನೆಗಳನ್ನು ಕೇಳಿಕೊಂಡು ಉದಾಹರಣೆಗೆ

  • ಇಬ್ಬರಲ್ಲಿ ಯಾರು ರೊಮ್ಯಾಂಟಿಕ್‌
  • ಯಾರಿಗೆ ಹಾಡು ಹೇಳಲು ಬರುತ್ತೆ
  • ಯಾರು ಚೆನ್ನಾಗಿ ಅಡುಗೆ ಮಾಡುತ್ತಾರೆ
  • ಯಾರಿಗೆ ಕೋಪ ಜಾಸ್ತಿ

ಹೀಗೆ ಅನೇಕ ಫನ್ನಿ ಪ್ರಶ್ನೆಗಳನ್ನು ಕೇಳಿ ಅದನ್ನು ವಿಡಿಯೋ ಮಾಡಿಕೊಂಡು ಅಪ್ಲೋಡ್‌ ಮಾಡುವ ಮೂಲಕ ಚಾಲೆಂಜ್‌ ಸ್ವೀಕರಿಸುತ್ತಾರೆ. ಸದ್ಯ ಫೇಸ್‌ಬುಕ್‌ನಲ್ಲಿ ಕಪಲ್‌ ಚಾಲೆಂಜ್‌ ಟ್ರೆಂಡ್‌ ಆಗಿದ್ದು ಸದ್ಯ ಜನರಿಗೆ ಇದೊಂದು ರೀತಿ ಫನ್‌ ಎಲಿಮೆಂಟ್‌ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top