ಏಕ್ ಲವ್ ಯಾದಲ್ಲಿ ರಚಿತಾ ರಾಮ್ ಹಾಟ್..! ರಚ್ಚು ಲಿಪ್ ಲಾಕ್ + ಧಮ್..!

ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾರಾಮ್ ಸಖತ್ ಬೋಲ್ಡ್ & ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಚ್ಚು ಲಿಪ್ ಲಾಕ್ ಸೀನ್ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ್ರೆ, ಧಮ್ ಹೊಡೆಯೋ ಸ್ಟೈಲ್ ಮೈ ಚಳಿ ಬಿಡಿಸಿದೆ..!


ಯೆಸ್, ಜೋಗಿ ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತ ಏಕ್ ಲವ್ ಯಾ ಸಿನಿಮಾದ ಟೀಸರ್ ಪ್ರೇಮಿಗಳ ದಿನವಾದ ನಾಳೆ ಬಿಡುಗಡೆ ಆಗುತ್ತಿದೆ. ಬೆಳಗ್ಗೆ‌ A2 ಮ್ಯೂಸಿಕ್ ನಲ್ಲಿ ಲಾಂಚ್ ಆಗುತ್ತಿದ್ದು ಈ ನಡುವೆ ಬಿಸಿ ಬಿಸಿ ಸುದ್ದಿ ಹೊರಬಂದಿದೆ.

ರಚಿತಾ ರಾಮ್ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರಂತೆ. ಈ ಏಕ್ ಲವ್ ಯಾ ದಲ್ಲಿ ಏಕ್ ‘ ಧಮ್’ , ಏಕ್ ‘ಕಿಸ್’ ಇದೆಯಂತೆ!

ಈ ಸಿನಿಮಾದಲ್ಲಿ ರಚಿತಾ ರಾಮ್ ಸಿಗರೇಟ್ ಬಾಯಿಗೆ ಇಟ್ಟು ಸ್ಮೋಕ್ ಮಾಡಿದ್ದಾರಂತೆ. ಅಷ್ಟೇ ಅಲ್ಲದೆ ರಾಣಾ ಜೊತೆಗೆ ಬಿಸಿ ಬಿಸಿ ಚುಂಬನ ಸೀನ್ ನಲ್ಲೂ ಕಾಣಿಸಿಕೊಂಡಿದ್ದಾರೆಂಬ ಸುದ್ದಿ ಬಂದಿದೆ.

ನಾಳೆ ಬಿಡುಗಡೆ ಆಗಲಿರುವ ಟೀಸರ್ ನಲ್ಲೇ ರಚ್ಚು – ರಾಣಾ ಲಿಪ್ ಲಾಕ್ ದೃಶ್ಯ ರಿವೀಲ್ ಆಗಲಿದೆ ಎಂದು ಹೇಳಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ A2 ಮ್ಯೂಸಿಕ್ ನಲ್ಲಿ ಟೀಸರ್ ಬಿಡುಗಡೆಯಾಗೋ ತನಕ ಕಾಯಲೇ ಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top