ಎಲೆಕ್ಷನ್‌ಗಾಗಿ ಅಕ್ಕನನ್ನೇ ಎಳೆದಾಡಿ ಬೀದಿಯಲ್ಲಿ ಕಿರಿಕ್‌ ಮಾಡಿಕೊಂಡ ತಮ್ಮ

ರಾಜ್ಯದಲ್ಲಿ ಲೋಕಲ್‌ ವಾರ್‌ ಜೊರಾಗುತ್ತಿದ್ದು, ಸಂಬಂಧಿಕರೇ ಇದೀಗ ವೈರಿಗಳಾಗುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿ ಗೊಲ್ಲರಹಳ್ಳಿಯಲ್ಲಿ ನಡೆದಿದೆ.

ಗ್ರಾಮ ಪಂಜಾಯಿತಿ ಚುನಾವಣೆ ಜೊತೆಯಲ್ಲಿ ಡೈರಿ ಚುನಾವಣೆಗೂ ಇದೀಗ ಬಿಗ್‌ ಫೈಟ್‌ ನಡೆಯುತ್ತಿದ್ದು, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ವೇಳೆ ಗಲಾಟೆ ನಡೆದಿದೆ. ಚುನಾವಣೆಗಾಗಿ ಸ್ವಂತ ಮನೆಯವರೇ ಕಿತ್ತಾಟ ನಡೆದಿದ್ದು, ಎಲೆಕ್ಷನ್‌ ವಿಚಾರವಾಗಿ ಅಕ್ಕನ ಮೇಲೆ ತಮ್ಮ ಹಲ್ಲೇ ಮಾಡಿದ್ದಾನೆ.

ಸಂಘದ ಸದಸ್ಯರಾಗಿರೋ ಶಾರದಮ್ಮನಿಗೆ ತಮ್ಮ ರಾಜೇಗೌಡ ಬಂಕಾಪುರ ಅಭ್ಯರ್ಥಿಯನ್ನು ಬೆಂಬಲಿಸುತವಂತೆ ಮನವಿ ಮಾಡಿದ್ದನು. ಈ ವೇಳೆ ಶಾರದಮ್ಮ ನಾನು ಬಂಕಾಪುರದ ಹೆಣ್ಣು ಮಗಳಾದ್ರೂ ನಾನೀಗ ಗೊಲ್ಲರಹಳ್ಳಿ ಸೊಸೆ ನಾನು ನಿಮ್ಮೂರಿಗೆ ಬೆಂಬಲ ನೀಡಲ್ಲ ಎಂದು ಹೇಳಿದ್ದಾರೆ.

ಅಕ್ಕನ ಮಾತಿಗೆ ಸಿಟ್ಟಾದ ರಾಜೇಗೌಡ ಅಕ್ಕನ ಮೇಲೆ ಹಲ್ಲೇ ನಡೆಸಿ ಚುನಾವಣೆಗೆ ಹೋಗದಂತೆ ತಡೆದು ಎಳೆದಾಡಿದ್ದಾನೆ. ನಂತರ ಶಾರದಮ್ಮನ ಮಗ ಬಂದು ಇಬ್ಬರ ಜಗಳವನ್ನು ಬಿಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top