ಎರಡು ವಾರದ ಹಿಂದೆ ಹುಟ್ಟಿದ ಮಗು ಜೊತೆ ಕೆಲಸಕ್ಕೆ ಹಾಜರಾದ ಐಎಎಸ್‌ ಅಧಿಕಾರಿ..

14 ದಿನದ ಹಿಂದೆ ಹುಟ್ಟಿದ ಕಂದಮ್ಮನ ಜೊತೆ ಐಎಎಸ್‌ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ಹಾಜರಾಗಿದ್ದು, ಐಎಎಸ್‌ ಅಧಿಕಾರಿ ಮಗುವಿನ ಜೊತೆ ಕೆಲಸದಲ್ಲಿ ತೊಡಗಿರೋ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗಾಜಿಯಾಬಾದ್‌ನ ಮೋದಿನಗರದ ಐಎಎಸ್‌ ಅಧಿಕಾರಿ ಸೌಮ್ಯ ಪಾಂಡೆ 14 ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದು, 14 ದಿನಗಳ ಹರಿಗೆಯ ರಜೆ ನಂತರ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕೆಲಸದ ಜೊತೆಯಲ್ಲಿ ತಾಯಿಯ ಜವಾಬ್ದಾರಿಯನ್ನು ಸೌಮ್ಯ ಪಾಂಡೆ ನಿರ್ವಹಿಸುತ್ತಿದ್ದಾರೆ.

ದೇವರು ಮಹಿಳೆಯರಿಗೆ ಮಗುವಿಗೆ ಜನ್ಮ ನೀಡುವ ಶಕ್ತಿ ನೀಡುವುದರ ಜೊತೆಯಲ್ಲಿ ಅದರ ಪಾಲನೆ ಜೊತೆಯಲ್ಲಿ ಬೇರೆ ಕೆಲಸ ಮಾಡುವ ಶಕ್ತಿಯನ್ನು ಕೊಟ್ಟಿದ್ದಾನೆ. ಹಳ್ಳಿಗಳಲ್ಲಿ ಮಹಿಳೆಯರು ಹೆರಿಗೆ ದಿನವು ಕೆಲಸ ಮಾಡುತ್ತಿರುತ್ತಾರೆ. ಹೆರಿಗೆಯಾದ ಕೆಲವೇ ದಿನಗಳಲ್ಲಿ ತಮ್ಮ ತೋಟ, ಗದ್ದೆಯಲ್ಲಿ ಕೆಲಸ ಮಾಡುವ ಜೊತೆಯಲ್ಲಿ ಮನೆಯ ಕೆಲಸವನ್ನು ಮಾಡುತ್ತಾರೆ.. ಅದೇ ರೀತಿ ನಾನು ಸಹ ನನ್ನ ಮಗುವಿನೊಂದಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕೊರೋನಾ ನಿಯಂತ್ರಣಕ್ಕಾಗಿ ಅನೇಕ ಸರ್ಕಾರಿ ಅಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸೌಮ್ಯ ಪಾಂಡೆ ಹೆರಿಗೆ ರಜೆಯನ್ನು ಕೇವಲ 22 ದಿನಕ್ಕೆ ಮೊಟಕುಗೊಳಿಸಿದ್ದಾರೆ. ಇನ್ನು ಕೊರೋನಾ ಹಿನ್ನೆಲೆಯಲ್ಲಿ ಮಗುವಿನ ಆರೋಗ್ಯದ ಕಡೆಗೂ ಹೆಚ್ಚು ಗಮನ ನೀಡಬೇಕಾಗಿರೋದ್ರಿಂದ ಸೌಮ್ಯ ಪಾಂಡೆ ಬಳಿ ಬರೋ ಎಲ್ಲಾ ಫೈಲ್‌ಗಳಿಗೂ ಸ್ಯಾನಿಟೈಸ್‌ ಮಾಡಿ ನಂತರ ಫೈಲ್‌ ಬರುತ್ತ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top