
ತನ್ನ ಎರಡನೇ ಮದುವೆಗೆ ಮಗ ಒಪ್ಪದಿದ್ದಕ್ಕೆ ಮಗನ ಕೆನ್ನೆ , ಭುಜದ ಭಾಗವನ್ನು ಕಚ್ಚಿ ಗಾಯ ಮಾಡಿರೋ ಘಟನೆ ಅಹಮದಾಬಾದ್ನ ದರಿಯಾಪುರದಲ್ಲಿ ನಡೆದಿದೆ. ತಂದೆ ನಯೀಮುದ್ದೀನ್ ಶೇಖ್ ಆಗಿದ್ದು, ಮಗ ಯಹ್ಯಾ ಶೇಖ್ ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ತಂದೆ ಕೆಳ ಮನೆಯಲ್ಲಿ ವಾಸವಾಗಿದ್ದು, ಮಗ ಯಹ್ಯಾಶೇಖ್ ಮತ್ತು ನಯೀಮುದ್ದೀನ್ ಮಹಡಿ ಮನೆಯಲ್ಲಿ ವಾಸವಾಗಿದ್ದರು. ತಂದೆ ಕುಟುಂಬದಿಂದ ಎಲ್ಲಾ ಸಂಬಂಧವನ್ನು ಕಳೆದುಕೊಂಡಿದ್ದರು. ಸೋವವಾರ ತಾಯಿ ಮಗ ಮನೆಯಲ್ಲಿ ಇರುವಾಗ ತಂದೆ ಬಂದು ಎರಡನೇ ಮದುವೆಯಾಗುವುದಾಗಿ ನಯೀಮುದ್ದೀನ್ ಹೇಳಿದ್ದಾನೆ. ಇನ್ನು ತಂದೆ ಮಾತಿಗೆ ಮಗ ರೆಸ್ಪಾನ್ಸ್ ಮಾಡಿರಲಿಲ್ಲ.
ಅಷ್ಟೇ ಅಲ್ಲದೇ ತಂದೆಯ ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ಕೋಪ ಗೊಂಡ ನಯೀಮುದ್ದೀನ್ ಮಗನ ಭುಜ ಮತ್ತು ಕೆನ್ನೆಗೆ ಕಚ್ಚಿದ್ದಾರೆ, ಜೊತೆಗೆ ಪತ್ನಿಯ ಮುಖಕ್ಕೂ ಹೊಡೆದಿದ್ದಾನೆ. ಸದ್ಯ ತಂದೆಯ ವಿರುದ್ಧ ಮಗ ಯಹ್ಯಾ ಶೇಖ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.