
ಐಪಿಎಲ್ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ಬೆರೆತು ಹೋಗಿದೆ. ಐಪಿಎಲ್ ಹಬ್ಬ ಶುರುವಾಗುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳು ಮ್ಯಾಚ್ ನೋಡಲು ಕಾತುರದಿಂದ ಕಾಯುತ್ತ ಟಿವಿ ಮುಂದೆ ಕುಳಿತುಬಿಡುತ್ತಾರೆ. ಇನ್ನು ತಮ್ಮ ನೆಚ್ಚಿನ ತಂಡಗಳು ಗೆಲ್ಲಬೇಕು ಅನ್ನೋ ಹಂಬಲದಿಂದ ತಮ್ಮ ನೆಚ್ಚಿನ ತಂಡವನ್ನು ಸಪೋರ್ಟ್ ಮಾಡ್ತಾರೆ.
ಅದರಲ್ಲೂ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿಮಾನಿಗಳ ಬಳಗವೇ ಬೇರೆ ರೀತಿ, ಮ್ಯಾಚ್ ಗೆಲ್ಲಲಿ ಸೋಲಲಿ, ಕಪ್ ಗೆಲ್ಲದೇ ಇರಲಿ, ತಮ್ಮ ಅಭಿಮಾನವನ್ನು ಮಾತ್ರ ಯಾವತ್ತು ಬಿಟ್ಟು ಕೊಡೋದಿಲ್ಲ..ಪ್ರತಿ ಬಾರಿ ಐಪಿಎಲ್ ಶುರುವಾದಾಗಲು ಈ ಸಲ ಕಪ್ ನಮ್ದೆ ಅನ್ನೋ ಮಾತನ್ನ ಆರ್ಸಿಬಿ ಅಭಿಮಾನಿಗಳು ಹೇಳ್ತಾನೆ ಇರ್ತಾ, ಇನ್ನು ಆರ್ಸಿಬಿ ತಂಡವನ್ನು ಪ್ರೀತಿಸೋ ಹಾಗೇ ಆರ್ಸಿಬಿ ತಂಡದಲ್ಲಿರೋ ಕೆಲವು ಆಟಗಾರರನ್ನು ಆರ್ಸಿಬಿ ಅಭಿಮಾನಿಗಳು ಹೆಚ್ಚಾಗಿ ಪ್ರೀತಿಸುತ್ತಾರೆ. ಇನ್ನು ಆರ್ಸಿಬಿ ಮತ್ತು ಬೆಂಗಳೂರು ಅಂದರೆ ತಂಡದಲ್ಲಿರೋ ಆಟಗಾರರರಿಗೂ ಏನೋ ಒಂಥರದ ಅಟ್ಯಾಚ್ಮೆಂಟ್ ಕೂಡ ಹೌದು, ಈಗಾಗಲೇ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಐಪಿಎಲ್ನಲ್ಲಿ ಕೊನೆಯವರೆಗೂ ನಾನು ಆರ್ಸಿಬಿ ಪರವಾಗಿ ಆಡುತ್ತೇನೆ ಅನ್ನೋ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಖುಷಿನೀಡಿದ್ದಾರೆ.
ಇನ್ನು ಆರ್ಸಿಬಿ ತಂಡದ ಪರವಾಗಿ ಓಪನರ್ ಆಗಿ ಬರೋ ಆರೋನ್ ಪಿಂಚ್ ಕೂಡ ಇತ್ತಿಚೆಗೆ ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವನ್ನು ನೀಡಿದ್ದೇನೆ ಅನ್ನೋ ಮೂಲಕ ಬೆಂಗಳೂರಿಗರ ಮತ್ತು ಆರ್ಸಿಬಿ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದರು, ಆರೋನ್ ಪಿಂಚ್ ಅವರು ತಮ್ಮ ಪ್ರೀತಿ ವಿಷಯವನ್ನು ತಮ್ಮ ಹುಡಿಗಿ ಬಳಿ ಹೇಳಿಕೊಂಡಿದ್ದು ಬೆಂಗಳೂರಿನಲ್ಲಿ ಹಾಗಾಗಿ ಬೆಂಗಳೂರಿಗೆ ನನ್ನ ಹೃದಯದಲ್ಲಿ ವಿಶೇಷವಾದ ಸ್ಥಾನವಿದೆ ಅಂತ ಹೇಳಿದ್ರು ಆ ಮೂಲಕ ಬೆಂಗಳೂರಿನ ಬಗ್ಗೆ ಅಭಿಮಾನವನ್ನು ತೋರಿಸಿದ್ರು, ಇದೀಗ ಬೆಂಗಳೂರಿಗೂ ಮತ್ತು ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ಗೂ ಎಂತಹ ಅವಿನಾಭಾವ ಸಂಬಂಧವಿದೆ ಅನ್ನೋದನ್ನ ಕಾಮೆಂಟೆಟರ್ ಹರ್ಷ ಬೋಗ್ಲೆ ಹೇಳಿದ್ದಾರೆ. ಆರ್ಸಿಬಿ ಪರ ಆಡುತ್ತಿರೋ ಎಬಿಡಿ ವಿಲಿಯರ್ಸ್ ಬಗ್ಗೆ ಬೆಂಗಳೂರಿನ ಜನರಿಗೆ ಹೋಗಿ ಎಬಿಡಿ ಎಲ್ಲಿಯವರು ಅಂತ ಕೇಳಿದ್ರೆ ಅವರು ಬೆಂಗಳೂರಿನವರು ಅಂತ ಹೇಳುತ್ತಾರೆ, ಅಷ್ಟು ಪ್ರೀತಿಸುತ್ತಾರೆ ಕರ್ನಾಟಕದ ಜನ ಅನ್ನೋದನ್ನ ಹರ್ಷ ಬೋಗ್ಲೆ ಹೇಳಿದ್ದಾರೆ.ಇನ್ನು ಎಬಿಡಿ ಕೂಡ ಬೆಂಗಳೂರನ್ನು ಅಷ್ಟೇ ಪ್ರೀತಿಸುತ್ತಾರೆ ಅನ್ನೋದಕ್ಕೆ ಅವರು ಬೆಂಗಳೂರನ್ನು ಆಟೋದಲ್ಲಿ ಫ್ಯಾಮಿಲಿ ಜೊತೆಯಲ್ಲಿ ಸುತ್ತಾಡಿದ್ದ ವಿಡಿಯೋ ವೈರಲ್ ಆಗಿದ್ದೆ ಸಾಕ್ಷಿ ಅಂತ ಹೇಳಬಹದು. ಒಟ್ಟಿನಲ್ಲಿ ಆರ್ಸಿಬಿ ಮತ್ತು ಆರ್ಸಿಬಿ ಆಟಗಾರರಿಗೆ ಕರ್ನಾಟಕ ಮತ್ತು ಬೆಂಗಳೂರು ಅಂದ್ರೆ ಒಂದು ರೀತಿಯ ಪ್ರೀತಿ..ಅದೇ ಪ್ರೀತಿಯನ್ನ ಆರ್ಸಿಬಿ ಅಭಿಮಾನಿಗಳು ಸಹ ಅವರ ಮೇಲೆ ತೋರಿಸ್ತಾರೆ.