ಎಬಿಡಿ ಬಗ್ಗೆ ದಿನೇಶ್‌ ಕಾರ್ತಿಕ್‌ ಹೇಳಿದ್ದೇನು..ವೈರಲ್‌ ಆಯ್ತು ಸ್ಟೇಡಿಯಂ ಆ ಫೋಟೋ…!

ನಿನ್ನೆ ನಡೆದ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಕೆಕೆಆರ್‌ ವಿರುದ್ಧ ಭರ್ಜರಿ ಜಯಸಾಧಿಸಿತು, ಪಂದ್ಯದ ನಂತರ ಕೆಕೆಆರ್‌ ತಂಡದ ನಾಯಕ ದಿನೇಶ್‌ ಕಾರ್ತಿಕ್‌ ಮಾತನಾಡಿದ್ದು, ಆರ್‌ಸಿಬಿ ಮತ್ತು ಕೆಕೆಆರ್‌ ತಂಡದ ನಡುವಿನ ವ್ಯತ್ಯಾಸವನ್ನು ಹೇಳಿದ್ದಾರೆ. ಈ ಎರಡು ತಂಡಗಳಲ್ಲಿ ವ್ಯತ್ಯಾಸವೆಂದರೆ ಅದು ಎಬಿ ಡಿವಿಲಿಯರ್ಸ್‌. ಎಬಿಡಿಯ ನಿನ್ನೆ ಆಟವನ್ನು ಕೊಂಡಾಡಿರೋ ದಿನೇಶ್‌ ಕಾರ್ತಿಕ್‌ ಎಬಿಡಿ ಒಬ್ಬ ವಿಶ್ವ ದರ್ಜೆ ಆಟಗಾರರ ಎರಡು ತಂಡಗಳ ನಡುವಿನ ವ್ಯತ್ಯಾಸವೇ ಎಬಿಡಿ, ಅವರನ್ನು ಕಟ್ಟಿಹಾಕಲು ನಾವು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡ್ರು ಅವರು ಮಾತ್ರ ಬಾಲ್‌ ಅನ್ನು ಸ್ಟೇಡಿಯಂ ಆಚೆಗೆ ಕಳುಹಿಸುತ್ತಿದ್ದರು ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಸೋಲಿನ ಪರಾಮರ್ಶೆಯನ್ನು ಮಾಡಿದ್ದಾರೆ.

ಏನ್‌ ಗುರು ಇವ್ರಿಗೆ ಮಾಸ್ಕ್‌ ಬೇಡ,ಸಾಮಾಜಿಕ ಅಂತರಾನೂ ಬೇಡ

ಇತ್ತ ಐಪಿಎಲ್‌ನಲ್ಲಿ ಸ್ಟೇಡಿಯಂ ಖಾಲಿ ಖಾಲಿಯಾಗಿ ಇದ್ದು, ಕೊರೋನಾದಿಂದಾಗಿ ಪ್ರೇಕ್ಷಕರಿಲ್ಲದೆ ಕ್ರಿಕೆಟ್‌ ನಡೆಸುತ್ತಿದ್ದರೆ, ಇತ್ತ ನ್ಯೂಜಿಲೆಂಡ್‌ ಮಾತ್ರ ಕೊರೋನಾ ಟೈಂನಲ್ಲೂ ಸ್ಟೇಡಿಯಂನಲ್ಲಿ ಜನ ಜಾತ್ರೆ ಮಾಡೋ ಮೂಲಕ ರಗ್ಬಿ ಟೂರ್ನಿ ನಡೆಸುತ್ತಿದೆ. ಹೌದು ನ್ಯೂಜಿಲೆಂಡ್‌ನ ವೆಲ್ಲಿಂಗ್‌ಟನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ವಿರುದ್ಧ ರಗ್ಬಿ ಟೂರ್ನಿ ನಡೆಯುತ್ತಿದ್ದು, ಇದನ್ನು ವೀಕ್ಷಿಸಲು ಬರೋಬ್ಬರಿ 31000ಜನ ಸ್ಟೇಡಿಯಂನಲ್ಲಿ ನೆರೆದಿದ್ದರು. ಕೊರೋನಾ ಟೈಂನಲ್ಲಿ ಇಷ್ಟು ದೊಡ್ಡ ಮಟ್ಟದ ಜನ ಸಂದಣಿ ಸೇರಿಸೋ ಮೂಲಕ ವಿಶ್ವದ ಅಚ್ಚರಿಗೆ ಕಾರಣವಾಗಿದೆ. ಕೊರೋನಾ ಮುಕ್ತ ಮೊದಲ ರಾಷ್ಟ್ರ ಎಂದು ನ್ಯೂಜಿಲೆಂಡ್‌ ಹೇಳಿಕೊಂಡಿತ್ತು, ಇನ್ನು ಕೊರೋನಾ ನಿಯಂತ್ರಣಕ್ಕಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತ್ತು, ಇದೀಗ ಅವೆಲ್ಲವನ್ನು ದಾಟಿ ಭಾನುವಾರ ಈ ರಗ್ಬಿ ಮ್ಯಾಚ್‌ಗೆ ಬರೋಬ್ಬರಿ 31000 ಜನ ಸೇರುವ ಮೂಲಕ ಕೊರೋನಾಗೆ ಸೆಡ್ಡು ಹೊಡೆದಿದೆ ಈ ದೇಶ, ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದ್ದು, ʻ ಮಾಸ್ಕ್‌ ಇಲ್ಲದೇ ಸಾಮಾಜಿಕ ಅಂತರವಿಲ್ಲದೇ ಸ್ಟೇಡಿಯಂನಲ್ಲಿ ಜನ ಸೇರಿರೋದು ಸದ್ಯ ಅಮೇರಿಕಾ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ನಿದ್ದೆಗೆಡಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top