
ಐಪಿಎಲ್ 2020ಯಲ್ಲಿ ಭರ್ಜರಿ ಫಾರ್ಮ್ನಲ್ಲಿ ಇರೋ ಎಬಿಡಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡೋ ಮೂಲಕ ತಂಡದ ಗೆಲುವಿಗೆ ಸಾಥ್ ನೀಡೋ ಜೊತೆಯಲ್ಲಿ ಎರಡು ದಾಖಲೆಗಳನ್ನು ಸಹ ಸರಿಗಟ್ಟಿದ್ದಾರೆ. ಅತಿ ಹೆಚ್ಚು ಮ್ಯಾನ್ಆಫ್ದಿ ಮ್ಯಾಚ್ ಮತ್ತು ಕೊಹ್ಲಿ ಜೊತೆಯಲ್ಲಿ ಅತಿ ಹೆಚ್ಚು ರನ್ ಜೊತೆಯಾಟದ ಗೇಲ್ ಹೆಸರಿನಲ್ಲಿ ಇದ್ದ ಈ ಎರಡು ದಾಖಲೆಯನ್ನು ಸರಿಗಟ್ಟಿದ್ದಾರೆ.
ಇನ್ನು ಶಾರ್ಜಾದಲ್ಲಿ ಎಬಿಡಿ ಬ್ಯಾಟಿಂಗ್ ನೋಡಿದ ಕ್ರಿಕೆಟ್ ತಜ್ಞರು ಎಡಿಬಿಯನ್ನು ಮನಸಾರೆ ಹೊಗಳಿದ್ದಾರೆ. ಇದೀಗ ಟಿಂ ಇಂಡಿಯಾದ ಮಾಜಿ ಸ್ಟಾರ್ ಕ್ರಿಕೆಟರ್ ಮತ್ತು ಟೀಂ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಇದೀಗ ಎಬಿಡಿ ಬಳಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಹೌದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದು , ನಿನ್ನ ಈ ಇನ್ನಿಂಗ್ಸ್ ನಂಬಲಾಗುತ್ತಿಲ್ಲ.ಬೆಳಗ್ಗೆ ಎದ್ದ ಬಳಿಕವೂ ನಿನ್ನ ಬ್ಯಾಟಿಂಗ್ ನೆನಪಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿನ್ನ ಅಗತ್ಯವಿದೆ ಎಂಬುದನ್ನು ಈ ಪಂದ್ಯದಿಂದ ತಿಳಿಸಿದ್ದೀಯಾ. ನಿವೃತ್ತಿಯ ನಿರ್ಧಾರವನ್ನು ಹಿಂಪಡೆದುಕೊ, ನಿನ್ನ ರೀ ಎಂಟ್ರಿಗೆ ಇದು ಸಾಕು ಎಂದು ಹೇಳಿದ್ದಾರೆ. ಆ ಮೂಲಕ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಬಿಡಿ ಆಡುವಂತೆ ರವಿಶಾಸ್ತ್ರಿ ಮನವಿಮಾಡಿಕೊಂಡಿದ್ದಾರೆ. 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದ ಎಬಿಡಿ 2019ರ ವಿಶ್ವಕಪ್ನಲ್ಲಿ ವಾಪಾಸ್ ಆಗಲು ಮನಸ್ಸು ಮಾಡಿದ್ರು, ಆದ್ರೆ ಅದು ಆಗಿರಲಿಲ್ಲ. ಇನ್ನು 2020ರಲ್ಲಿ ಟಿ 20 ವಿಶ್ವಕಪ್ನಲ್ಲಿ ಎಬಿಡಿಯನ್ನು ಆಡಿಸಲು ಸೌತ್ಆಫ್ರಿಕಾ ಕ್ರಿಕೆಟ್ ಬೋರ್ಡ್ ಮನಸ್ಸುಕೂಡ ಮಾಡಿತ್ತು.
ಸದ್ಯ ಎಬಿಡಿ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರಳುವಂತೆ ಕ್ರಿಕೆಟ್ ತಜ್ಞರು ಸೇರಿದಂತೆ , ಎಬಿಡಿ ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ರೆ, ಇತ್ತ ಎಬಿಡಿ ಕೆಕೆಆರ್ ವಿರುದ್ಧ ಪಂದ್ಯದಲ್ಲಿ ಗೇಲ್ರ ಎರಡು ದಾಖಲೆ ಅಂದ್ರೆ ಮ್ಯಾನ್ಆಫ್ದಿ ಮ್ಯಾಚ್ ಮತ್ತು ಜೊತೆಯಾಟದ ದಾಖಲೆ ಮುರಿದ್ದಿದ್ದು.
ಇತ್ತ ಆರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಕ್ರಿಕೆಟ್ ದೈತ್ಯ ಕ್ರಿಸ್ಗೇಲ್ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಸದ್ಯ ನೆಟ್ ಪ್ರಾಕ್ಟಿಸ್ನಲ್ಲಿ ಕಾಣಿಸಿಕೊಂಡಿರೋ ಕ್ರಿಸ್ಗೇಲ್, ಕಳೆದ ಎರಡು ಪಂದ್ಯಗಳಲ್ಲಿ ಅವರು ತಂಡಕ್ಕೆ ಅಲಭ್ಯರಾಗಿದ್ರು, ಇದೀಗ ಚೇತರಿಸಿಕೊಂಡಿರೋ ಗೇಲ್ ಗುರುವಾರ ಶಾರ್ಜಾದಲ್ಲಿ ನಡೆಯಲಿರೋ ಆರ್ಸಿಬಿ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಆ ಮೂಲಕ ಯೂನಿರ್ಸಲ್ ಬಾಸ್ ಕ್ರಿಸ್ಗೇಲ್ ಭರ್ಜರಿ ಫಾರ್ಮ್ಗೆ ಮರಳಿದ್ದಾರಾ ಕಾದುನೋಡ ಬೇಕು.
ನಿಮ್ಮ ಪ್ರಕಾರ ಎಬಿಡಿ ಅಂತರಾಷ್ಟ್ರೀಯಾ ಕ್ರಿಕೆಟ್ಗೆ ವಾಪಾಸ್ ಆಗಬೇಕಾ, ಶುಕ್ರವಾರದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಕ್ರಿಸ್ಗೇಲ್ ಕಣಕ್ಕೆ ಇಳೀತಾರ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿತಿಳಿಸಿ