ಎಬಿಡಿ,ಕೊಹ್ಲಿ ಭಯದಲ್ಲಿ ಆಫರ್‌ ನೀಡಿದ ರಾಜಸ್ತಾನ್‌ ರಾಯಲ್ಸ್‌..

ಐಪಿಎಲ್‌ 2020 ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ರಾಜಸ್ತಾನ್‌ ರಾಯಲ್ಸ್‌ ಮುಖಾಮುಖಿಯಾಗಲಿದೆ. ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ರಾಜಸ್ತಾನ್‌ ರಾಯಲ್ಸ್‌ ವಿರುದ್ಧ ಗೆದ್ದು ಬೀಗಿರೋ ಆರ್‌ಸಿಬಿ ಇಂದಿನ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಇತ್ತ ರಾಜಸ್ತಾನ್‌ ರಾಯಲ್ಸ್‌ ಕೂಡ ಇಂದಿನ ಪಂದ್ಯದಲ್ಲಿ ಗೆಲುವನ್ನು ಸಾಧಿಸುವ ಮೂಲಕ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆದ್ರೆ ಇದೀಗ ರಾಯಲ್ಸ್‌ ತಂಡಕ್ಕೆ ಕಿಂಗ್‌ ಕೊಹ್ಲಿ ಮತ್ತು ಎಬಿಡಿ ಭಯ ಶುರುವಾಗಿದೆ. ಈ ಇಬ್ಬರು ಆಟಗಾರರು ಭರ್ಜರಿ ಫಾರ್ಮ್‌ಗೆ ಮರಳಿದ್ದು, ಪಂಜಾಬ್‌ ವಿರುದ್ಧ ಪಂದ್ಯದಲ್ಲಿ ಆದ ಯಡವಟ್ಟುಗಳನ್ನು ಸರಿಪಡಿಸಿಕೊಂಡು ಇಂದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ. ಹೀಗಿರ ಬೇಕಾದ್ರೆ ಇವರಿಬ್ಬರ ಭಯದಲ್ಲಿ ಇದೀಗ ಆರ್‌ಆರ್‌ ತಂಡ ಇದ್ದು, ಇವರಿಬ್ಬರಿಗೂ ಒಂದು ಆಫರ್‌ ನೀಡಿ ಟ್ವೀಟ್‌ ಮಾಡಿದೆ ಎಬಿಡಿ ಮತ್ತು ವಿರಾಟ್‌ ಕೊಹ್ಲಿಗೆ ನಾವು ಎರಡು ಉಚಿತ ಮರುಭೂಮಿ ಸಫಾರಿ ಪಾಸ್‌ಗಳನ್ನು ನೀಡುತ್ತಿದ್ದೇವೆ ಎಂದು ಟ್ವೀಟ್‌ ಮಾಡಿದ್ದು, ಇದು ಕೇವಲ ಇಂದು ಮಧ್ಯಾಹ್ನ 3.30ರಿಂದ ಸಂಜೆ 7.30ರ ವರೆಗೆ ಮಾತ್ರ ಆಫರ್‌ ಇರಲಿದೆ ಎಂದು ಬರೆದುಕೊಂಡಿದ್ದಾರೆ.

ಇಂದಿನ ಪಂದ್ಯ ಎರಡು ತಂಡಗಳಿಗೂ ಮಹತ್ವದ್ದಾಗಿದ್ದು, ಎರಡು ತಂಡದಲ್ಲೂ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಈಗಾಗಲೇ ಪಂಜಾಬ್‌ ವಿರುದ್ಧ ಪಂದ್ಯದಲ್ಲಿ ಆದ ತಪ್ಪುಗಳನ್ನು ತಿದ್ದುಕೊಂಡು ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಪವನ್‌ ನೇಗಿ ಮತ್ತು ಪವನ್‌ ದೇಶ್‌ಪಾಂಡೆ ಆರ್‌ಸಿಬಿ ಪರ ಕಣಕ್ಕೆ ಇಳಿಯೋ ಸಾಧ್ಯತೆ ಇದೆ. ಇನ್ನು ಆರ್‌ಆರ್‌ ತಂಡದಲ್ಲೂ ಬದಲಾವಣೆ ತರುವ ಮೂಲಕ ಇಂದಿನ ಪಂದ್ಯದಲ್ಲಿ ಆರ್‌ಸಿಬಿಯನ್ನು ಎದುರಿಸಲಿದೆ.

ಹಾಗಾದ್ರೆ ನಿಮ್ಮ ಪ್ರಕಾರ ಈ ಎರಡು ತಂಡದ 11 ಆಟಗಾರರ ಪಟ್ಟಿಯಲ್ಲಿ ಯಾರು ಸ್ಥಾನ ಪಡೆದುಕೊಳ್ಳ ಬಹುದು. ಇಂದಿನ ಪಂದ್ಯ ಯಾರ ಪಾಲಾಗಲಿದೆ ಕಾಮೆಂಟ್‌ ಮಾಡಿತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top