ಎಣ್ಣೆ ಪಾರ್ಟಿಗೆ ಬಾತುಕೋಳಿ ಮಾಂಸ ತರಲಿಲ್ಲ ಅಂತ ಏನ್ಮಾಡಿದ ಗೊತ್ತಾ.?

ಎಣ್ಣೆ ಪಾರ್ಟಿಗೆ ಸ್ನೇಹಿತ ಬಾತುಕೋಳಿ ಮಾಂಸ‌ ತರಲಿಲ್ಲ ಅಂತ ಆತ್ಮೀಯ ಸ್ನೇಹಿತನನ್ನು ಕೊಲೆ‌ ಮಾಡಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಾಸು ಮತ್ತು ವಿನಯಗಂ ಇಬ್ಬರು ಆತ್ಮೀಯ‌ ಸ್ನೇಹಿತರಾಗಿದ್ದು, ಕ್ಯಾಬ್ ಡ್ರೈವಿಂಗ್,ರಿಯಲ್‌ ಎಸ್ಟೇಟ್ ಬ್ರೋಕರ್ ಕೆಲಸ‌ ಮಾಡಿಕೊಂಡಿದ್ದ ಈ ಇಬ್ಬರು, ಲಾಕ್ ಡೌನ್ ಸಡಿಲ ಮಾಡಿ ತಮಿಳುನಾಡು ಸರ್ಕಾರ ಎಣ್ಣೆ ಮಾರಾಟ ಮಾಡಲು ಅನುವು ಮಾಡಿ ಕೊಟ್ಟಿತ್ತು.ಈ ವೇಳೆ ವಾಸು ಎಣ್ಣೆ ತರುವುದಾಗಿ ಹೇಳಿ ವಿನಯಗೆ ಬಾತುಕೋಳಿ ಮಾಂಸ ತರಲು ಹೇಳಿದ್ದ.ಇಬ್ಬರು ಒಂದು ತೋಟದಲ್ಲಿ ಎಣ್ಣೆ ಪಾರ್ಟಿ ಮಾಡಲು ಹೋಗಿದ್ದರು ಈ ವೇಳೆ ಎಣ್ಣೆ ಕುಡಿಯುವ ವೇಳೆ ವಾಸು ಬಾತುಕೋಳಿ ಮಾಂಸ ಎಲ್ಲಿ ಅಂತ ಕೇಳಿದ್ದಾನೆ.ವಿನಯ್ ತರೋದು ಮರೆತು ಹೋಯಿತು ಎಂದು ಹೇಳಿದ್ದಾನೆ.ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದ್ದು ವಾಸು ತನ್ನ ಬಳಿಯಿದ್ದ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.ಈ ವೇಳೆ ತೋಟದಲ್ಲಿ ಗಲಾಟೆ ಶಬ್ಧ ಕೇಳಿದ ದಾರಿಯಲ್ಲಿ ಹೋಗುವವರು ಸ್ಥಳಕ್ಕೆ ದಾವಿಸಿದ್ದಾರೆ‌ ಈ ವೇಳೆ ವಾಸು ಸ್ಥಳದಿಂದ ಪರಾರಿಯಾಗಿದ್ದಾನೆ.ಸದ್ಯ ಸ್ಥಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಹುಡುಕಾಟದಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top