ಎಣ್ಣೆ ಪಡಿಯಬೇಕು ಅಂದ್ರೆ‌ ಇನ್ಮೇಲೆ ಆಧಾರ್ ಕಡ್ಡಾಯ .!

ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲವೂ ಬಂದ್ ಆಗಿದ್ದು , ಅದರಲ್ಲಿ ಮದ್ಯವೂ ಕೂಡ ಬಂದ್ ಆಗಿತ್ತು, ಆದ್ರೆ ಕಳೆದ ಎರಡು ದಿನಗಳಿಂದ‌ ರಾಜ್ಯದಲ್ಲಿ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಇದರಿಂದ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿದೆ, ಆದ್ರೆ ಈಗ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಮದ್ಯಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ, ಆದ್ರೆ ಮದ್ಯ ಮಾರಾಟದಿಂದ ಕರ್ನಾಟಕದಲ್ಲಿ ಆದ ಅವಾಂತರ ನಮ್ಮಲ್ಲೂ ಆಗಬಹುದು ಎಂದು ತಮಿಳುನಾಡಿನಲ್ಲಿ ಕೆಲವರು ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು ಆದ್ರೆ ಎರಡು ದಿನಗಳ ವಾದ ಪ್ರತಿವಾದ ನಡೆದ ನಂತರ ತಮಿಳುನಾಡು ಹೈಕೋರ್ಟ್ ತೀರ್ಪನ್ನು ನೀಡಿದ್ದು, ರಾಜ್ಯದಲ್ಲಿ ಎಣ್ಣೆ ಮಾರಾಟ ಮಾಡಲು ಷರತ್ತುಗಳ ಮೂಲಕ‌ಮಾರಾಟ ಮಾಡಲು ಅನುಮತಿ ನೀಡಿದೆ.

 • ಸಾಮಾಜಿಕ ಅಂತರವನ್ನು‌ ಕಾಯ್ದುಕೊಂಡು ಮದ್ಯವನ್ನು ಪಡೆಯಬೇಕು
 • ಆನ್ ಲೈನ್ ಮೂಲಕವೂ‌ ಮದ್ಯವನ್ನು ಪಡೆಯ ಬಹುದು
 • ಮದ್ಯದಂಗಡಿಯಲ್ಲಿ ಒಬ್ಬರಿಗೆ ಒಂದು ಬಾಟಲ್ ಮಾತ್ರ ನೀಡಲು ಅವಕಾಶ
 • ಆನ್ ಲೈನ್ ನಲ್ಲಿ ಒಬ್ಬರಿಗೆ ಎರಡು ಬಾಟಲ್ ನೀಡಲು ಅವಕಾಶ
  ಎಂದು ಹೈ ಕೋರ್ಟ್ ಆದೇಶವನ್ನು ನೀಡಿದೆ.

ಇನ್ನು ಹೈಕೋರ್ಟ್ ಆದೇಶದ ಅನ್ವಯ ತಮಿಳುನಾಡು ಸರ್ಕಾರ ಒಂದುಷ್ಟು ಷರತ್ತುಗಳನ್ನು ಸಹ ವಿಧಿಸಿದೆ

 • ಮದ್ಯದಂಗಡಿಗೆ‌ ಹೋಗುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿ ತೋರಿಸಿ ಮದ್ಯ ಪಡೆಯಬೇಕು
 • ಅಂಗಡಿಯ ಮುಂದೆ ಗುಂಪು ಹೆಚ್ಚಾಗದಿರಲು ವಯೋಮಿತಿ ಆಧಾರದ ಮೇಲೆ ಮದ್ಯ ಮಾರಾಟಕ್ಕೆ ಸಮಯವನ್ನು ನಿಗದಿ ಪಡಿಸಬೇಕು
 • ಇದರಂತೆ 50ವರ್ಷ ಮೇಲ್ಪಟ್ಟವರು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ಒಳಗೆ ಮದ್ಯ ಖರೀದಿ ಮಾಡಬೇಕು
 • ಈ ರೀತಿ ವಯೋಮಿತಿ ಆಧಾರದಲ್ಲಿ ಸಮಯ‌ ನಿಗದಿ‌ ಮಾಡಿ ಗುರುತಿನ ಚೀಟಿ ತೋರಿಸಿ ಟೋಕನ್ ಪಡೆದುಕೊಂಡು ಮದ್ಯ ಪಡೆಯಬೇಕು
 • ಮದ್ಯದಂಗಡಿಯಲ್ಲಿ,ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ಇರುವುದಿಲ್ಲ

ಈ ರೀತಿ ಷರತ್ತುಗಳನ್ನು ವಿಧಿಸುವ ಮೂಲಕ ತಮಿಳುನಾಡಿನಲ್ಲಿ ಮದ್ಯ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top