ಎಚ್‌ಡಿಕೆ, ಸಿದ್ದು ಕಾಲೆಳೆದು ಟ್ವೀಟ್‌ ಮಾಡಿದ ಈಶ್ವರಪ್ಪ..!

ಚುನಾವಣೆ ಸಮಯದಲ್ಲಿ ಒಬ್ಬರಿಗೆ ಇನ್ನೊಬ್ಬರಿಗೆ ಕಾಲೆಳೆಯುವುದು ಸರ್ವೆ ಸಾಮಾನ್ಯ..ಈಗ ಈಶ್ವರಪ್ಪನವರ ಸರಿದಿಯಾಗಿದೆ. ಹೌದು ಕೆ.ಎಸ್‌ ಈಶ್ವರಪ್ಪ ತಮ್ಮ ಟ್ವೀಟರ್‌ ಖಾತೆಯಲ್ಲಿ ಎಚ್‌ಡಿಕೆ ಮತ್ತು ಸಿದ್ದು ಕಾಲೆಳೆದಿದ್ದು, ʻಮಳೆ ಬರುವ ಮುಂಚೆ ಗುಡುಗು ಬರುವುದು. ಬೆಂಕಿ ಹತ್ತುವ ಮುಂಚೆ ಹೊಗೆ ಬರುವುದು. ಸಭೆ ಸಮಾರಂಭಗಳಲ್ಲಿ ಸಿದ್ದರಾಮಯ್ಯನವರಿಗೆ ನಿದ್ದೆ ಬರುವುದು. ಎಲೆಕ್ಷನ್‌ ಮುಂಚೆ ಕುಮಾರಸ್ವಾಮಿಯವರಿಗೆ ಕಣ್ಣೀರು ಬರುವುದು ಸರ್ವೆ ಸಾಮಾನ್ಯʼ ಅಂತ ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡು ಕಾಲೆಳೆದಿದ್ದಾರೆ.

ಇನ್ನು ನಿನ್ನೆ ಪ್ರಚಾರದ ವೇಳೆ ಕುಮಾರಸ್ವಾಮಿಯವರು ನನ್ನ ಮಗನನ್ನು ಸೋಲಿಸಿದ್ದಕ್ಕೆ ನೋವಾಗಲಿಲ್ಲ, ಆದ್ರೆ ಮಂಡ್ಯವೇ ನನ್ನ ಪ್ರಾಣ ಅಂದುಕೊಂಡಿದ್ದೆ ಆದ್ರೆ ನನ್ನ ಮಂಡ್ಯದ ಜನ ನನ್ನ ಕೈ ಬಿಟ್ರಿ ಎಂದು ಚುನಾವಣಾ ಪ್ರಚಾರದ ವೇಳೆ ಕಣ್ಣೀರಿಟ್ಟಿದ್ದರು. ಇದೇ ವೇಳೆ ಈಗ ಕೆ.ಎಸ್‌ ಈಶ್ವರಪ್ಪ ಕೂಡ ಟ್ವೀಟ್‌ ಮಾಡುವ ಮೂಲಕ ಎಚ್‌ಡಿಕೆ ಕಾಲೆಳೆದಿದ್ದಾರೆ.

ಇನ್ನು ಇದೇ ವೇಳೆ ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದಾಗ ಕಣ್ಣಿರು ಬರೋದು ಸಾಮಾನ್ಯ..ಎಚ್‌ಡಿಕೆ ಲಕ್ಕಿ ಡಿಪ್‌ನಲ್ಲಿ ಗೆಲ್ಲೋ ಆಸೆ ಅವರಿಗೆ. ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ ಎಂದು ಆರ್‌ ಅಶೋಕ್‌ ಲೇವಡಿ ಮಾಡಿದ್ದಾರೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top